This page has been fully proofread once and needs a second look.

ಮಿಂಚಿನಬಳ್ಳಿ
 
ಮಾಯಾವಿಗಳಾದ ಅಸುರರು. ಬ್ರಹ್ಮನ ವರ ಬೇರೆಯಿದೆ ಅವರಿಗೆ ಎಂತಲೆ
ರಾಮಚಂದ್ರ ಆ ವೃಕ್ಷಗಳೆಡೆಗೆ ಬಾಣವೆಸೆದನು.
 

 
ಆ ಬಾಣ ಸಪ್ತತಾಲಗಳನ್ನು ಭೇದಿಸಿ ಭೂಮಿಯನ್ನು ಸೀಳಿಕೊಂಡು

ಪಾತಾಲದಲ್ಲಿದ್ದ 'ಕುಮುದಿ ' ಗಳೆಂಬ ಬ್ರಹ್ಮವರಮತ್ತರಾದ ದೈತ್ಯರನ್ನೂ

ಸಂಹರಿಸಿತು. ಪ್ರಭುವಿನ ಒಂದು ಬಾಣದಿಂದ ಲೋಕದ ನೂರಾರು ಕಂಟಕ
ನಾಶವಾಗಬಲ್ಲುದು.
 

 
ಈ ಅದ್ಭುತವನ್ನು ಕಂಡ ಸುಗ್ರೀವ ರಾಮನ ಕಾಲಿಗೆರಗಿ ಬಿನ್ನವಿಸಿ
 
- ಕೊಂಡ :
 

 
"
ರಾಮಚಂದ್ರ, ನನ್ನ ಮೇಲೆ ಪ್ರಸನ್ನನಾಗಬೇಕು. ಹುಲ್ಲು ಕವಿದ ಬಾವಿ
ಯಂತೆ, ಬೂದಿ ಮುಚ್ಚಿದ ಕೆಂಡದಂತೆ ಗುಪ್ತನಾಗಿರುವ ನಿನ್ನನ್ನು ನಾನು
ತಿಳಿಯದಾದೆ. ನನ್ನ ಅಜ್ಞಾನಕ್ಕೆ ಕ್ಷಮೆಯಿರಲಿ. ಇಂದು ರಾತ್ರಿ ನಾನು ಶತ್ರು
ಭಯವಿಲ್ಲದೆ ಸುಖವಾಗಿ ನಿದ್ರಿಸಬಲ್ಲೆ."
 
(6
 

 
ಹನುಮಂತ-ಸುಗ್ರೀವರೊಡನೆ ರಾಮ-ಲಕ್ಷ್ಮಣರು ಕಿಷ್ಕಂಧೆಗೆ ತೆರಳಿದರು.
ಸುಗ್ರೀವನ ಮನಸ್ಸು ಸಂತಸದಿಂದ ನುಡಿಯುತ್ತಿತ್ತು: ಇನ್ನು ವಾಲಿಗೆ
ಉಳಿಗಾಲವಿಲ್ಲ.
 

 
ಕಿಷ್
ಕಿಂಧೆಯ ತೇಜಸ್ಸು ನಂದಿತು
 

 
ರಾಮನು ಸಿದ್ಧನಾದ ಸುಗ್ರೀವನನ್ನು ಕಂಡು ನುಡಿದನು:

"ಇನ್ನು ನೀನು ವಾಲಿಯನ್ನು ಯುದ್ಧಕ್ಕೆ ಕರೆಯಬಹುದು."

 
ಸುಗ್ರೀವನು ವಾಲಿಯ ಗುಹೆಯ ಬಳಿ ಬಂದು ಕೂಗಿದನು. ಸುಗ್ರೀವನ

ಕರೆಯನ್ನು ಕೇಳಿದ ವಾಲಿ, ಹೊಡೆಸಿಕೊಂಡ ಹಾವಿನಂತೆ ಗುಹೆಯಿಂದ ಹೊರಗೆ
ಬಂದನು- ಅಣ್ಣ ತಮ್ಮಂದಿರು ಜಗಳಾಡತೊಡಗಿದರು. ಹೊಡೆದುಕೊಳ್ಳುವದು,
ಗುದ್ದಿಕೊಳ್ಳುವದು ನಡೆಯಿತು. ಸುಗ್ರೀವನ ಬಲ ಉಡುಗಿದಂತಾಯಿತು.
ಅವನು ಅಲ್ಲಿಂದ ಕಾಲು ಕಿತ್ತವನು ಋಷ್ಯಮೂಕ ಕ್ಕೆ ಬಂದ ಮೇಲೆಯೇ
ಉಸಿರೆಳೆದದ್ದು ! ಮೆಲ್ಲನೆ ರಾಮಚಂದ್ರನ ಸವಾರಿಯೂ ಅತ್ತ ಚಿತ್ತೈಸಿತು.
ನೆತ್ತರಿನಿಂದ ತೊಯ್ದ ಮೈಯನ್ನು ರಾಮಚಂದ್ರನ ಕಾಲುಗಳ ಮೇಲೆ ಚೆಲ್ಲಿ
ಸುಗ್ರೀವ ವಿಲಾಪಿಸತೊಡಗಿ- ದನು: