This page has been fully proofread once and needs a second look.

ಸಂಗ್ರಹರಾಮಾಯಣ
 
ಕೈಯಲ್ಲಿ ದುಂದುಭಿ ಬದುಕಿ ಉಳಿಯಲಿಲ್ಲ. ಅವನ ಕಳೇಬರವನ್ನು ವಾಲಿ
ಒಂದು ಯೋಜನ ದೂರಕ್ಕೆ ಎಸೆದ. ಆತನ ದೇಹದಿಂದ ರಕ್ತಬಿಂದುಗಳು
ಚಿಮ್ಮುತ್ತಿದ್ದವು. ಋುಷ್ಯಮೂಕಾಶ್ರಮದ ಪವಿತ್ರ ಸ್ಥಳದಲ್ಲಿ- ದಲ್ಲೂ ಆ ನೆತ್ತರಿನ
ಹನಿಗಳು ಬಿದ್ದವು. ಖುಷಿಮಾತಂಗರು ಸಿಟ್ಟಾದರು. ಸಿಟ್ಟಿನಲ್ಲಿ ವಾಲಿಯನ್ನು
ಶಪಿಸಿದರು : 'ಈ ದೇಶಕ್ಕೆ ಕಾಲಿಟ್ಟರೆ ನಿನಗೆ ಸಾವು ಬರಲಿ' ಎಂದು. ವಾಲಿಯ
ಶಾಪ ನನಗೆ ವರವಾಯಿತು. ವಾಲಿ- ಯಿಂದ ನಿರ್ವಾಸಿತನಾದ ನನಗೆ ಈ
ಋಷ್ಯಮೂಕವನ್ನು ಬಿಟ್ಟರೆ ಮೂರು ಲೋಕದಲ್ಲಿ ಬೇರೆ ತಾಣವಿಲ್ಲ. ಆ
ದುಂದುಭಿಯ ಬಹುಭಾರದ ಕಳೇಬರ ಇಲ್ಲೆ ಬಳಿಯಲ್ಲಿದೆ. ಅದನ್ನು ಎಲ್ಲಾದರೂ
ದೂರ ಎಸೆದೆ- ಯಾದರೆ ನಿನ್ನ ಬಲದಮೇಲೆ ನಂಬುಗೆಯಾದೀತು. "
 
cca
 

 
ಪರ್ವತದಂತೆ ರಾಶಿ ಬಿದ್ದಿರುವ ದುಂದುಭಿಯ ಅಸ್ಥಿಪಂಜರವನ್ನು ರಾಮ
ಚಂದ್ರ ಕಾಲ ಹೆಬ್ಬೆರಳಿನಿಂದ ನೂರು ಯೋಜನ ದೂರ ಎಸೆದು ಬಿಟ್ಟ. ಅದು
ಭೂಮಿಯನ್ನು ಭೇದಿಸಿ ಪಾತಾಲದಲ್ಲಿ ರುದ್ರವರದಿಂದ ಮತ್ತರಾದ ಅನೇಕ
ಅಸುರರನ್ನು ಧ್ವಂಸಗೊಳಿಸಿತು. ಶತ್ರು ಸಂಹಾರಕ್ಕೆ ಶತ್ರುವಿನ ಕಳೇವರವೇ
ಆಯುಧವಾಯಿತು !
 

 
ಸುಗ್ರೀವನಿಗೆ ಇನ್ನೂ ಸಂದೇಹ, ಇನ್ನೂ ಭಯ, ಎಂತಲೆ ಮತ್ತೆ ಪುನಃ

ವಿನಂತಿಸಿಕೊಂಡನು :
 

 
"ನನ್ನ ಚಾಪಲವನ್ನು ಕ್ಷಮಿಸಬೇಕು. ನನ್ನ ಚಿತ್ದ ಸಂಶಯ ಇನ್ನೂ

ತೊಲಗಲಿಲ್ಲ. ಒಬ್ಬನನ್ನು ಸೋಲಿಸಲು ಅವನಿಂದ ನಾಲ್ಕು ಪಟ್ಟು ಬಲವಿರ,
ಬೇಕು ಮತ್ತು ಕೊಲ್ಲಲು ನೂರು ಪಟ್ಟು ಬಲಬೇಕು ಎಂದು ಕೇಳಿದ್ದೇನೆ.
ವಾಲಿ ಯೋಜನ ದೂರ ಎಸೆದುದನ್ನು ನೀನು ನೂರು ಯೋಜನ ಎಸೆದಿರುವೆ.
ನಿಜ, ಆದರೆ ಒಣಕಲು ಅಸ್ಥಿಪಂಜರ ಹಿಂದಿನ ಭಾರವನ್ನು ಕಳೆದುಕೊಂಡಿದೆ.
 

 
ಇನ್ನೊಂದು ಸೂಚನೆ. ಇಲ್ಲಿ ಏಳು ತಾಳಿಳೆಯ ಮರಗಳಿವೆ. ಅವು- ಗಳನ್ನು
ವಾಲಿಯೊಬ್ಬನು ಕಷ್ಟದಿಂದ ನಲುಗಿಸಬಲ್ಲ. ಪತ್ರಗಳನ್ನು ಕೀಳುವದು
ಅವನಿಂದಲೂ ಆಗದ ಮಾತು. ನೀನು ಒಂದು ಬಾಣದಿಂದ ಅವನ್ನು ಭೇದಿಸಿದೆ
ಯಾದರೆ ಜತೆಗೆ ನನ್ನ ಮನದ ಸಂಶಯವನ್ನು ಭೇದಿಸಬಲ್ಲೆ."
 

 
ಸುಗ್ರೀವನ ಮಾತನ್ನಾಲಿಸಿದ ರಾಮ ಧನುಸ್ಸನ್ನು ಸಜ್ಜುಗೊಳಿಸಿ ಲಕ್ಷ್ಮಣ
ನೆಡೆಗೆ ನೋಡಿ ಬಾಣವೊಂದನ್ನು ಹೂಡಿದನು. ಆ ಮರಗಳು ನಿಜವೆಂದರೆ