2023-03-21 06:46:02 by jayusudindra
This page has been fully proofread once and needs a second look.
ಬಯಕೆಯೂ ನನಗಿರಲಿಲ್ಲ. ಆದರೂ ಮಂತ್ರಿಗಳ ಬಂಧುಗಳ ಒತ್ತಾಯಕ್ಕೆ ಕಟ್ಟು ಬಿದ್ದು ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡೆ. ಆಗ ವಾಲಿ ಬಂದ !
ಒಂದು ವರ್ಷದ ವರೆಗೆ ಮಾಯಾವಿಯೊಡನೆ ಹೋರಾಡಿ ಅವನು
ಹೊರಟು ಬಂದಾಗ ಬಿಲ ಮುಚ್ಚಿದ್ದನ್ನು ಕಂಡನು. ನನ್ನನ್ನು ಕೂಗಿ ಕರೆದರೂ ನನ್ನ ಪ್ರತಿಸ್ವರ ಕೇಳಿಸಲಿಲ್ಲ. ಆಗ ಬಂಡೆಯನ್ನೊದ್ದು ಬಿಲ- ದಿಂದ ಹೊರಬಿದ್ದವನೇ ಕಿಷ್ಕಂಧೆಗೆ ಬಂದ. ಸಿಟ್ಟಿನಿಂದ ಬುಸುಗುಡು- ತ್ತಿರುವ ಅವನನ್ನು ಕಂಡು ನಾನು ಕಾಲಿಗೆರಗಿದೆ. "ನನ್ನಿಂದ ತಪ್ಪಾಯಿತು. ಪ್ರಮಾದ ನಡೆದುಹೋಯಿತು. ಕ್ಷಮಿಸು,ರಾಜ್ಯಭಾರವನ್ನು ನಿನ್ನ ಚರಣಗಳಲ್ಲಿ ಒಪ್ಪಿಸಿದ್ದೇನೆ" ಎಂದು ಬೇಡಿಕೊಂಡೆ. ಆದರೆ ಅವನ ಮನಸ್ಸು ಕರಗಲಿಲ್ಲ. ಮನ ಬಂದಂತೆ ತೆಗಳಿ, ಉಟ್ಟ ಬಟ್ಟೆಯಲ್ಲಿ ನನ್ನನ್ನು ರಾಜ್ಯದಿಂದ ಹೊರಗಟ್ಟಿದನು. ಈ ಋಷ್ಯಮೂಕವೊಂದು ಅವನಿಗೆ ಅಗಮ್ಯವಾಗಿದೆ. ಎಂತಲೇ ಇಲ್ಲಿ ಧೈರ್ಯದಿಂದ ವಾಸವಾಗಿ- ದ್ದೇನೆ. ಇಂಥ ಸಂಕಟದಲ್ಲಿ ನಮ್ಮ ಗೆಳೆತನದ ಉಪಯೋಗವನ್ನು ನಾನು ಪಡೆಯಲಿಚ್ಛಿಸುತ್ತೇನೆ."
ಸುಗ್ರೀವನ ಮಾತನ್ನು ಕೇಳಿ ರಾಮನೆಂದನು ;
"ತಮ್ಮನ ಮಡದಿಯನ್ನು ಭೋಗಿಸುವ ವಾಲಿ ನನ್ನ ಒಂದು ಬಾಣದ
ಆಹಾರ."
ವಾಲಿಯ ಮಹಾಬಲವನ್ನು ಕಂಡ ಸುಗ್ರೀವನು ಸ್ವಲ್ಪ ಶಂಕಿತ- ನಾಗಿಯೆ ನುಡಿದನು :
" ಮಹಾದೈತ್ಯರ ಆಯುಧಗಳು ಯಾರ ಕವಚವನ್ನು ಕೂಡ ನಲುಗಿಸ
ಲಾರವೋ ಅಂಥ ವಾಲಿಯ ಮಟ್ಟಿಗೆ ನಿನ್ನ ಪ್ರತಿಜ್ಞೆಯನ್ನು ಹೇಗೆ ನಂಬಲಿ ರಾಮಚಂದ್ರ ? "
ಆಗ ಲಕ್ಷ್ಮಣ ನುಡಿದನು :
" ಏನು ಪ್ರಯೋಗಮಾಡಿ ತೋರಿಸಿದರೆ ನಿನಗೆ ನಂಬುಗೆಯಾದೀತು,
ಹೇಳು. "
" ಹಾಗಿದ್ದರೆ ಒಂದು ಮಾತು. ದುಂದುಭಿ ಎಂದೊಬ್ಬ ಇಂದ್ರನ ಶತ್ರು-
ವಿದ್ದ. ಅವನೊಮ್ಮೆ ವರುಣನೊಡನೆ ಜಗಳಾಡಹೋದ. ಸಾವಿಗಂಜಿದ
ವರುಣ ಹಿಮವಂತನನ್ನು ಆಶ್ರಯಿಸಿದ. ಹಿಮವಂತನೋ ವಾಲಿಯೆಡೆಗೆ ಕೈ ಚಾಚಿದ. ಸರಿ, ದುಂದುಭಿಯ ಯುದ್ಧ ವಾಲಿಯೊಡನೆ ಸಾಗಿತು. ವಾಲಿಯ