2023-03-15 15:35:40 by ambuda-bot
This page has not been fully proofread.
ಮಿಂಚಿನಬಳ್ಳಿ
ಬಯಕೆಯೂ ನನಗಿರಲಿಲ್ಲ. ಆದರೂ ಮಂತ್ರಿಗಳ ಬಂಧುಗಳ ಒತ್ತಾಯಕ್ಕೆ
ಕಟ್ಟು ಬಿದ್ದು ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡೆ. ಆಗ ವಾಲಿ ಬಂದ !
ಒಂದು ವರ್ಷದ ವರೆಗೆ ಮಾಯಾವಿಯೊಡನೆ ಹೋರಾಡಿ ಅವನು
ಹೊರಟು ಬಂದಾಗ ಬಿಲ ಮುಚ್ಚಿದ್ದನ್ನು ಕಂಡನು. ನನ್ನನ್ನು ಕೂಗಿ ಕರೆದರೂ
ನನ್ನ ಪ್ರತಿಸ್ವರ ಕೇಳಿಸಲಿಲ್ಲ. ಆಗ ಬಂಡೆಯನ್ನೊದ್ದು ಬಿಲದಿಂದ ಹೊರ
ಬಿದ್ದವನೇ ಕಿಷ್ಕಂಧೆಗೆ ಬಂದ. ಸಿಟ್ಟಿನಿಂದ ಬುಸುಗುಡುತ್ತಿರುವ ಅವನನ್ನು
ಕಂಡು ನಾನು ಕಾಲಿಗೆರಗಿದೆ. "ನನ್ನಿಂದ ತಪ್ಪಾಯಿತು. ಪ್ರಮಾದ ನಡೆದು
ಹೋಯಿತು. ಕ್ಷಮಿಸು, ರಾಜ್ಯಭಾರವನ್ನು ನಿನ್ನ ಚರಣಗಳಲ್ಲಿ ಒಪ್ಪಿಸಿದ್ದೇನೆ"
ಎಂದು ಬೇಡಿಕೊಂಡೆ. ಆದರೆ ಅವನ ಮನಸ್ಸು ಕರಗಲಿಲ್ಲ. ಮನ ಬಂದಂತೆ
ತೆಗಳಿ ಉಟ್ಟ ಬಟ್ಟೆಯಲ್ಲಿ ನನ್ನನ್ನು ರಾಜ್ಯದಿಂದ ಹೊರಗಟ್ಟಿದನು. ಈ ಋಷ್ಯ
ಮೂಕವೊಂದು ಅವನಿಗೆ ಅಗತ್ಯವಾಗಿದೆ. ಎಂತಲೇ ಇಲ್ಲಿ ಧೈರ್ಯದಿಂದ
ವಾಸವಾಗಿದ್ದೇನೆ. ಇಂಥ ಸಂಕಟದಲ್ಲಿ ನನ್ನ ಗೆಳೆತನದ ಉಪಯೋಗವನ್ನು
ನಾನು ಪಡೆಯಲಿಚ್ಛಿಸುತ್ತೇನೆ."
೧೧೨
ಸುಗ್ರೀವನ ಮಾತನ್ನು ಕೇಳಿ ರಾಮನೆಂದನು ;
"ತಮ್ಮನ ಮಡದಿಯನ್ನು ಭೋಗಿಸುವ ವಾಲಿ ನನ್ನ ಒಂದು ಬಾಣದ
ಆಹಾರ."
ವಾಲಿಯ ಮಹಾಬಲವನ್ನು ಕಂಡ ಸುಗ್ರೀವನು ಸ್ವಲ್ಪ ಶಂಕಿತನಾಗಿಯೆ
ನುಡಿದನು :
66
" ಮಹಾದೈತ್ಯರ ಆಯುಧಗಳು ಯಾರ ಕವಚವನ್ನು ಕೂಡ ನಲುಗಿಸ
ಲಾರವೋ ಅಂಥ ವಾಲಿಯ ಮಟ್ಟಿಗೆ ನಿನ್ನ ಪ್ರತಿಜ್ಞೆಯನ್ನು ಹೇಗೆ ನಂಬಲಿ
ರಾಮಚಂದ್ರ ? "
ಆಗ ಲಕ್ಷ್ಮಣ ನುಡಿದನು :
ಏನು ಪ್ರಯೋಗಮಾಡಿ
ಹೇಳು. "
66
ತೋರಿಸಿದರೆ ನಿನಗೆ ನಂಬುಗೆಯಾದೀತು,
ದುಂದುಭಿ ಎಂದೊಬ್ಬ ಇಂದ್ರನ ಶತ್ರು
ಜಗಳಾಡಹೋದ. ಸಾವಿಗಂಜಿದ
ಹಾಗಿದ್ದರೆ ಒಂದು ಮಾತು.
ವಿದ್ದ. ಅವನೊಮ್ಮೆ ವರುಣನೊಡನೆ
ವರುಣ ಹಿಮವಂತನನ್ನು ಆಶ್ರಯಿಸಿದ. ಹಿಮವಂತನೋ ವಾಲಿಯೆಡೆಗೆ ಕೈ
ಚಾಚಿದ. ಸರಿ, ದುಂದುಭಿಯ ಯುದ್ಧ ವಾಲಿಯೊಡನೆ ಸಾಗಿತು. ವಾಲಿಯ