This page has not been fully proofread.

ಸಂಗ್ರಹರಾಮಾಯಣ
 
ಸುತ್ತಿದ್ದಾನೆ. ಹೀಗಿದೆ ನಮ್ಮ ಭಾತೃಸ್ನೇಹ ! ಇಂಥ ಕಷ್ಟ ಕಾಲದಲ್ಲಿಯೂ
ಈ ಹನುಮಂತನೊಬ್ಬ ನನಗೆ ಬಂದು, ಆಸರೆ. ನೀರಿನಲ್ಲಿ ಮುಳುಗುವವನಿಗೆ
ದೋಣಿಯಂತೆ ಆತ ನನಗೆ ಸರ್ವಸ್ವವಾಗಿದ್ದಾನೆ. ಹೀಗೆ ಅಣ್ಣನ ಕಾಟ ತಪ್ಪಿಸಿ
ಕೊಳ್ಳಲು ಈ ತಮ್ಮ ನಿನ್ನನ್ನು ಶರಣು ಹೊಂದಿದ್ದಾನೆ. ನೀನು ಶರಣಾಗತ
ವತ್ಸಲ ಎಂದು ಕೇಳಿದ್ದೇನೆ.
 
೧೦೧
 
ಇನ್ನು ವಾಲಿಯ ಕುರಿತು ಹೇಳುವೆ. ಅವನ ಪರಾಕ್ರಮ ಅನುಪಮ
ವಾಗಿದೆ. ಆತ ಪರ್ವತಗಳನ್ನು ಚಂಡಿನಂತೆ ಎಸೆಯಬಲ್ಲ. ಸಾಗರಗಳನ್ನು ಬಾವಿ
ಯಷ್ಟು ಹಗುರಾಗಿ ದಾಟಬಲ್ಲ. ಅವನೆದುರು ತ್ರೈಲೋಕ್ಯದ ಸಮಸ್ತ ಬಲವೂ
ಹುಲ್ಲುಕಡ್ಡಿಗೆ ಸಮ. ನನ್ನಿಂದ ಸಣ್ಣ ಅಪರಾಧವೇನೋ ನಡೆದದ್ದು ನಿಜ. ಅದೂ
ಗೊತ್ತಿದ್ದು ಮಾಡಿದುದಲ್ಲ. ಅದಕ್ಕೆ ಅವನು ಕೊಟ್ಟ ಶಿಕ್ಷೆ ಎಂಥ ಅಸಹ್ಯ
ವಾದುದು ! ನನ್ನ ಮಾತಿನ ಸತ್ಯತೆಯನ್ನು ನೀನು ಮಾರುತಿಯಿಂದ ತಿಳಿಯ
 
ಬಹುದು.
 
ಈ ಸಂದರ್ಭದಲ್ಲಿ ನಮ್ಮ ಪೂರ್ವವೃತ್ತವನ್ನು ನಿವೇದಿಸಿಕೊಳ್ಳುತ್ತೇನೆ.
ನಮ್ಮ ತಂದೆ ಋಕ್ಷಶಿರಸ್ಸು ಮೃತನಾದಾಗ ನಮ್ಮಣ್ಣ ವಾಲಿ ರಾಜನಾದನು.
ನಾನು ಯುವರಾಜನಾದೆ.
ಒಂದು ದಿನ ರಾತ್ರಿ, ದುಂದುಭಿಯ ಅಣ್ಣ
ಮಾಯಾವಿ ಎಂಬ ಅಸುರ ಯುದ್ಧಕ್ಕಾಗಿ ಕಿಂಧೆಗೆ ಬಂದನು. ಗುಹೆಯ
ಬಾಗಿಲಲ್ಲಿ ನಿಂತು ವಾಲಿಯನ್ನು ಯುದ್ಧಕ್ಕಾಗಿ ಕರೆದನು. ವಾಲಿ ನಾವು ತಡೆ
ದರೂ ಕೇಳದೆ ಹೊರಟುಹೋದನು. ಅಸುರನನ್ನು ಬೆನ್ನಟ್ಟಿಕೊಂಡು ಓಡಿ
ಹೋಗುವ ವಾಲಿಯನ್ನು ಭ್ರಾತೃಸ್ನೇಹದಿಂದ ನಾನೂ ಹಿಂಬಾಲಿಸಿದೆನು.
ಮಾಯಾವಿ ಓಡುತ್ತ ಓಡುತ್ತ ಪಾತಾಲವನ್ನು ಪ್ರವೇಶಿಸಿದನು. ಗುಹೆಯ
ಬಾಗಿಲಲ್ಲಿ ನನ್ನನ್ನು ನಿಲ್ಲಿಸಿ ವಾಲಿಯೂ ಅವನ ಹಿಂದೆಯೇ ಪಾತಾಲಕ್ಕೆ
ನಡೆದನು.
 
ಗುಹೆಯ ಬಳಿ ನಾನು ಕಾದು ಕುಳಿತೆ. ಒಂದು ವರ್ಷದತನಕ ಕಾದು
ಕುಳಿತೆ. ಅಣ್ಣನ ಸುಳಿವಿಲ್ಲ. ಬದಲಾಗಿ ರಕ್ತಧಾರೆ ಬಿಲದಿಂದ ಹರಿದು ಬರುವು
ದನ್ನು ಕಂಡೆ, ಮರಣ ವೇದನೆಯಿಂದ ಕೂಗಿಕೊಳ್ಳುವಂತೆಯೂ ಸದ್ದು ಕೇಳಿ
- ಮನಸ್ಸು ಏಕೋ ಅಮಂಗಲವನ್ನು ಆಶಂಕಿಸಿತು. ಕಣ್ಣಿನಲ್ಲಿ ನೀರು
ಮಿಡಿಯಿತು. ಒಂದು ದೊಡ್ಡ ಬಂಡೆಯಿಂದ ಗುಹೆಯನ್ನು ಮುಚ್ಚಿ ಹೊರಟು
ಬಂದುಬಿಟ್ಟೆ. ಅಣ್ಣನನ್ನು ಕಳೆದುಕೊಂಡು ಮನಸ್ಸು ವಿಷಣ್ಣವಾಗಿತ್ತು. ರಾಜ್ಯದ