This page has been fully proofread once and needs a second look.

: ಮಿಂಚಿನಬಳ್ಳಿ
 
ಇರಬೇಕು ಅಂತೆಯೇ ತನ್ನ ಮೇಲುದವನ್ನೂ ಕೆಲ ಆಭರಣವನ್ನೂ ಕೆಳಕ್ಕೆ ಚೆಲ್ಲಿ
ದಳು. ಅವು ನನ್ನ ಬಳಿಯಲ್ಲಿವೆ. ಅವನ್ನು ಕಂಡು ನೀನು ಗುರುತಿಸಬಹುದು"
ಎಂದು ಗುಹೆಯಿಂದ ಅವನ್ನು ಹೊರತಂದು ರಾಮನಿಗೆ ಒಪ್ಪಿಸಿದನು. ಸುಖನಿಧಿ
ಯಾದ ರಾಮಚಂದ್ರ ಅವುಗಳನ್ನು ಕಂಡು ಮಮ್ಮಲ ಮರುಗಿದನು. ಆಗ
ಸುಗ್ರೀವನು "ರಾಮಭದ್ರ ! ರಾಕ್ಷಸ- ರನ್ನು ಸಂಹರಿಸಿ ಸೀತೆಯನ್ನು ಕರೆದುತರುವ
ಕಾರ್ಯದಲ್ಲಿ ನಾವೆಲ್ಲ ನಿನ್ನ ಜತೆಯಿದ್ದೇವೆ. ನೀನು ಕೊರಗಬಾರದು" ಎಂದು
ಸಂತೈಸಿದನು.
 
೧೫೦
 

 
ಸುಗ್ರೀವನ ಮಾತನ್ನು ಕೇಳಿದ ರಾಮಚಂದ್ರ ಸಂತಸದಿಂದ ಆತನನ್ನು

ಬಿಗಿದಪ್ಪಿ ನುಡಿದನು:
 

 
"ಸುಗ್ರೀವ! ನಿನ್ನ ಸೌಜನ್ಯಕ್ಕೆ ನಾವು ಮರುಳಾಗಿದ್ದೇವೆ. ನಮ್ಮ ಕಾರ್ಯ

ದಲ್ಲಿ ನಿಮ್ಮ ಸಹಕಾರ ಬೇಕು. ಅಂತೆಯೇ ನಿನ್ನ ಕಾರ್ಯದಲ್ಲಿಯೂ ನೀನು
ನಮ್ಮ ಸಹಕಾರವನ್ನು ಪಡೆವುದು ಇಷ್ಟವಾಗಿದೆ. ನಿನ್ನ ಆತಂಕ- ಗಳನ್ನರುಹಿದರೆ
ಪರಿಹರಿಸಬಲ್ಲೆ."
 

 
ನಿಂತುಕೊಂಡೇ ಮಾತು ನಡೆದಿತ್ತು. ಇದನ್ನು ಕಂಡು ಸುಗ್ರೀವನೂ

ಹನುಮಂತನೂ ಹೂಗಳಿಂದ ಸುವಾಸಿತದ ಎರಡು ಗೆಲ್ಲುಗಳನ್ನು ತಂದು ರಾಮ-
ಲಕ್ಷ್ಮಣರಿಗೆ ಆಸನವನ್ನಿತ್ತು ಸತ್ಕರಿಸಿದರು.
 

 
ಬುಧ-ಬೃಹಸ್ಪತಿಗಳಿಂದ ಕೂಡಿದ ಸೂರ್ಯ-ಚಂದ್ರರಂತೆ, ರಾಮ-

ಲಕ್ಷ್ಮಣರು ಸುಗ್ರೀವ-ಹನುಮಂತರೊಡನೆ ಶೋಭಿಸಿದರು.
 

 
ಇನ್ನು ವಾಲಿಗೆ ಉಳಿಗಾಲವಿಲ್ಲ
 

 
ರಾಮಚಂದ್ರನು ಒಂದೆಡೆ ಕುಳಿತಿದ್ದ. ಇನ್ನೊಂದೆಡೆ ಹನುಮಂತ
-
ನೊಡನೆ ಸುಗ್ರೀವ ಕುಳಿತಿದ್ದ. ಮಾತಿಗೆ ಪ್ರಾರಂಭವಾಯಿತು. ಸುಗ್ರೀವನು

ರಾಮಚಂದ್ರನೆದುರು ತನ್ನ ಗೋಳನ್ನು ತೋಡಿಕೊಂಡನು:
 

 
"ರಾಮಭದ್ರ ! ನನಗೊಬ್ಬ ಅಣ್ಣನಿದ್ದಾನೆ. ಅವನು ಮೂರು ಲೋಕ

ಗಳಲ್ಲೂ ಮಹಾ ಪರಾಕ್ರಮಿ. ಅವನ ಹೆಸರು ವಾಲಿ.
ರಾಜ್ಯವನ್ನೂ ಸಂಪತ್ತನ್ನೂ ಅಪಹರಿಸಿ ನನ್ನನ್ನು ರಾಜ್ಯದಿಂದ ಅಟ್ಟಿದ್ದಾನೆ.
ಇನ್ನೊಂದು ಮಾತು ನಿನ್ನೆದುರು ಹೇಳಲು ಮನಸ್ಸು ನಾಚುತ್ತಿದೆ. ಆದರೂ ಗೆಳೆತನ ಹೇಳು
ಎನ್ನುತ್ತಿದೆ. ನನ್ನ ಪ್ರೀತಿಯ ಪತ್ನಿಯನ್ನು ಆತ ಬಲಾತ್ಕಾರದಿಂದ ಉಪಭೋಗಿ
 
ರಾಜ್ಯವನ್ನೂ
ಇನ್ನೊಂದು