2023-03-21 06:22:28 by jayusudindra
This page has been fully proofread once and needs a second look.
*
ನಾಗಿದ್ದಾನೆ. ಓ ಪುರುಷೋತ್ತಮನೆ ! ತನ್ನ ಹಿತಕ್ಕಾಗಿಯಾದರೂ ಸುಗ್ರೀವ
ನಿನ್ನ ಸಖ್ಯವನ್ನು ಬಯಸುತ್ತಾನೆ. ನೀನು ನಮ್ಮ ಸ್ವಾಮಿ, ನಿನ್ನ ಕಾರ್ಯ
ಬೇರಲ್ಲ-ನಮ್ಮ ಕಾರ್ಯ ಬೇರಲ್ಲ. ಅದನ್ನು ಪೂರಯಿಸುವುದು ನಮ್ಮ
ಕರ್ತವ್ಯ. " ಎಂದವನೇ ರಾಮ-ಲಕ್ಷ್ಮಣರನ್ನು ತನ್ನ ಹೆಗಲ ಮೇಲೇರಿಸಿ
ಸುಗ್ರೀವನೆಡೆಗೆ ನಡೆದನು. ದೂರದಿಂದಲೆ ಸುಗ್ರೀವನನ್ನು ಕೂಗಿ ಹೇಳಿದನು:
COF
(6
*
" ಸುಗ್ರೀವ ! ನಮಗೆಲ್ಲರಿಗೂ ಸ್ವಾಮಿಯಾದ ರಾಮಚಂದ್ರ ಚಿತ್
ಸಿದ್ದಾನೆ, ನೋಡು. ಕೋಟಿ ಜನ್ಮಗಳ ಪುಣ್ಯಕ್ಕೂ ದೊರಕದ ಪ್ರಭುವಿನ
ದರ್ಶನ ನಮ್ಮ ಭಾಗ್ಯದಿಂದ ನಮಗೆ ದೊರಕಿದೆ. ಇವನನ್ನು ಶರಣಾಗು. ನಮ್ಮ
ಮಾರುತಿಯ ಮಾತನ್ನಾಲಿಸಿದ ಸುಗ್ರೀವ 'ಧನ್ಯನಾದೆ' ಎಂದು ರಾಮ-
ಚಂದ್ರನ ಪಾದಗಳಿಗೆರಗಿದನು, ರಾಮಚಂದ್ರ ಅವನನ್ನು ಹಿಡಿದೆಬ್ಬಿಸಿ
"ನಾವಿಬ್ಬರೂ ಮಿತ್ರರಿದ್ದೇವೆ. ಇನ್ನು ನನ್ನ ಕೆಲಸದಲ್ಲಿ ನಿನ್ನ ಹೊಣೆ- ಯಿದೆ;
ಹನುಮಂತನು ಕೂಡಲೆ ಸಾಕ್ಷಿಭೂತನಾದ ಅಗ್ನಿಯನ್ನು ಬೆಳಗಿಸಿ
ರಾಮನನ್ನು ಸತ್ಕರಿಸಿದ ಸುಗ್ರೀವನು ಮುಂದಿನ ವಿಷಯವನ್ನು ಪ್ರಸ್ತಾ
*
" ಪೂಜ್ಯನಾದ ಸ್ನೇಹಿತನೇ ! ನಿನ್ನ ಕಾರ್ಯವನ್ನು ಈ ಮೊದಲೆ ಹನು