2023-03-21 06:17:15 by jayusudindra
This page has been fully proofread once and needs a second look.
ಸುಗ್ರೀವನೊಡನೆ ಸಖ್ಯ
ಆಂಜನೇಯನು ಕೈಮುಗಿದು ನಿಂತು ಪ್ರಭು ರಾಮಚಂದ್ರನೊಡನೆ ವಿಜ್ಞಾಪಿಸಿಕೊಂಡನು :
"ವೀರನೆ ! ನಾನು ಕೇಳುತ್ತಿರುವ ಪ್ರಶ್ನೆಗೆ ನನ್ನ ಮನಸ್ಸೆ ಉತ್ತರ ಕೊಡು
ತಿದೆ. ಆದರೂ ನಿನ್ನ ಮುಖದಿಂದ ಉತ್ತರವನ್ನು ಕೇಳಬೇಕೆಂಬ ಚಾಪಲ,
ಲೋಕೋತ್ತರ ಸುಂದರನಾದ ನೀನು ಯಾರು ? ನಿನ್ನ ಕಣ್ಣುಗಳು ಯಾರನ್ನೋ ಹುಡುಕುವಂತಿವೆ ! ನೀನು ಅರಸುತ್ತಿರುವ ವ್ಯಕ್ತಿಯಾದರೂ ಯಾರು ? ನಿನ್ನ ಜತೆಗಾರನಾದ ಈತನಾದರೂ ಯಾರು ? ನನಗೇನೋ ನಿಮ್ಮನ್ನು ಕಂಡಾಗ ನರ-ನಾರಾಯಣರನ್ನು ಕಂಡಂತೆ ಸಂತಸವಾಗು- ತ್ತಿದೆ.
ಸುಗ್ರೀವನೆಂಬ ಕಪಿರಾಜ ತನ್ನ ಅಣ್ಣನಾದ ವಾಲಿಯೊಡನೆ ಜಗಳಾಡಿ
ಇಲ್ಲಿ ನೆಲಸಿದ್ದಾನೆ. ವಾಯುಪುತ್ರನಾದ ನಾನು ಆತನ ಮಿತ್ರ, ಹೊಸಬ- ರಾದ ನಿಮ್ಮಿಬ್ಬರನ್ನು ಕಂಡು ದಿಗಿಲುಗೊಂಡ ಸುಗ್ರೀವ ನನ್ನನ್ನು ಇಲ್ಲಿಗೆ ಕಳುಹಿದನು. ಆತನ ಬಯಕೆಯಂತೆ ಭಿಕ್ಷು ವೇಷದಿಂದ ನಾನಿಲ್ಲಿಗೆ ಬಂದಿದ್ದೇನೆ."
ಹನುಮಂತನ ಮಾತನ್ನಾಲಿಸಿದ ರಾಮಚಂದ್ರ ಲಕ್ಷ್ಮಣನೊಡನೆ ನುಡಿದನು:
"ಲಕ್ಷಣ, ಈತ ನಮ್ಮ ಪರಮಮಿತ್ರ. ಶಬ್ದಶಾಸ್ತ್ರದಲ್ಲಿ ಮಹಾ
ಪಂಡಿತನೆಂಬುದು ಇವನ ಮಾತಿನಿಂದಲೇ ತಿಳಿವುದಲ್ಲವೆ ? ಎಂಥ ಪರಿಶುದ್ಧವಾದ ಮಾತುಗಾರಿಕೆ !"
ಅಣ್ಣನ ಇಂಗಿತವನ್ನರಿತ ತಮ್ಮ ಮಾರುತಿಗೆ ಉತ್ತರಿಸಿದನು :
"ಮಿತ್ರನೆ, ದಶರಥ ಪುತ್ರನಾದ ರಾಮಚಂದ್ರನೇ ಈತನು. ಗುರುವಚನ ವನ್ನು ಪಾಲಿಸುವುದಕ್ಕಾಗಿ ರಾಜ್ಯವನ್ನು ತ್ಯಜಿಸಿ ಕಾಡಿಗೆ ಬಂದಿದ್ದಾನೆ. ಪತಿವ್ರತೆಯಾದ ನನ್ನ ಅತ್ತಿಗೆ ಸೀತೆ, ಕಾಡಿನಲ್ಲಿಯೂ ನೆರಳಿನಂತೆ ಅಣ್ಣನನ್ನು ಅನುಸರಿಸಿ ಬಂದಳು. ಅಣ್ಣನ ಪಾದಧೂಳಿಯ ಸೇವೆಯ ಲೋಭದಿಂದ ನಾನೂ ಜತೆಗೆ ಬಂದೆನು. ನನ್ನನ್ನು ಲಕ್ಷಣ ಎಂದು ಕರೆಯುತ್ತಾರೆ. ನಾವು ಕಾಡಿನಲ್ಲಿದ್ದಾಗ ಯಾವನೋ ಪಾತಕಿ ಸೀತಾಮಾತೆ
ಯನ್ನು ಕದ್ದೊಯ್ದನು. ಸಜ್ಜನನಾದ ಸುಗ್ರೀವನಿಂದ ಸೀತಾನ್ವೇಷಣೆಯ ವಿಷಯದಲ್ಲಿ ಸಹಾಯ ದೊರಕಬಹುದೆಂದು ನಮ್ಮಣ್ಣ ನಿರೀಕ್ಷಿಸು- ತ್ತಿದ್ದಾನೆ."
ಆಗ ಹನುಮಂತನು ಸಂತಸಗೊಂಡು ನುಡಿದನು :