2023-03-21 06:09:58 by jayusudindra
This page has been fully proofread once and needs a second look.
ಸಕಲ
"ಇವನು ಎಲ್ಲ ಶತ್ರುಗಳನ್ನೂ ಸದೆಬಡಿಯಬಲ್ಲ ಮಹಾವೀರ,
ಲ್ಲೆಲ್ಲ ಶ್ರೇಷ್ಠನಾದ ಮಹಾಭಕ್ತ."
– ೧೦೭
ಗ್ರಂಥದ ರಾಶಿಯನ್ನು ಹೊತ್ತು ಕೊಂಡೇ ಸೂರ್ಯನೊಡನೆ ಹಗಲೆಲ್ಲ
ಸುತ್ತಾಡಿ ಈ ಹನುಮಂತ ಮಹಾವ್ಯಾಕರಣವನ್ನು ಅಧ್ಯಯನ ಮಾಡಿದ ನಂತೆ.
ಸುಗ್ರೀವನೆಂಬ ಕಪಿಪುಂಗವನಿಗೆ ಈತನೊಡನೆ ಗೆಳೆತನವಿತ್ತು. ಕಪಿ
ರಾಜನಾದ ಸುಗ್ರೀವನಿಗೆ, ಮಹಾ ವೈಯಾಕರಣಿಯಾದ ಮಾರುತಿಯೇ ಮುಖ್ಯ
ಒಮ್ಮೆ ಈ ಕಪಿಪುಂಗವರಿಬ್ಬರೂ ಪಂಪೆಯ ತಡಿಯಲ್ಲಿ ಸೀತೆಗಾಗಿ
ಕೊರಗುತ್ತಿರುವ ರಾಮಚಂದ್ರನನ್ನೂ ಸಂಗಾತಿಯಾದ ಲಕ್ಷ್ಮಣನನ್ನೂ ಕಂಡರು.
"ಪರಮ ಪುರುಷನಾದ ರಾಮಚಂದ್ರ ಚಿತ್ತೈಸಿದ್ದಾನೆ. ಯಾರೂ ಭಯ
ಪಡುವ ಕಾರಣವಿಲ್ಲ."
ಸುಗ್ರೀವ ಭಯ ಸಂದೇಹಗಳಿಂದಲೆ ನುಡಿದನು :
" ಇವರು ವಾಲಿಗೆ ಹಿತವನ್ನು ಬಯಸಿ ನನ್ನನ್ನು ಕೊಲ್ಲಬಂದಿರ- ಬೇಕು.
ಸುಗ್ರೀವನ ಮಾತಿನಂತೆ ಹನುಮಂತ ಭಿಕ್ಷು ವೇಷವನ್ನು ಧರಿಸಿ- ಕೊಂಡು