This page has not been fully proofread.

ಸಂಗ್ರಹರಾಮಾಯಣ
 
ಚತುಮುರ್ಖನೂ ಮಗುವನ್ನು ಹರಸಿದನು:
 
ಸಕಲ
 
"ಇವನು ಎಲ್ಲ ಶತ್ರುಗಳನ್ನೂ ಸದೆಬಡಿಯಬಲ್ಲ ಮಹಾವೀರ,
ಶಾಸ್ತ್ರಗಳಲ್ಲಿಯೂ ಪಾರಂಗತನಾದ ಮಹಾ ಪಂಡಿತ. ನಾರಾಯಣನ ಆಪ್ತರ
ಲ್ಲೆಲ್ಲ ಶ್ರೇಷ್ಠನಾದ ಮಹಾಭಕ್ತ."
 
– ೧೦೭
 
ಗ್ರಂಥದ ರಾಶಿಯನ್ನು ಹೊತ್ತು ಕೊಂಡೇ ಸೂರ್ಯನೊಡನೆ ಹಗಲೆಲ್ಲ
ಸುತ್ತಾಡಿ ಈ ಹನುಮಂತ ಮಹಾವ್ಯಾಕರಣವನ್ನು ಅಧ್ಯಯನ ಮಾಡಿದನಂತೆ.
ಸೂರ್ಯನಾರಾಯಣನ ಈ ಶಿಷ್ಯ ನೈಷ್ಠಿಕ ಬ್ರಹ್ಮಚಾರಿ ಬೇರೆ. ಗುಣನಿಧಿಯಾದ
ಈ ಹನುಮಂತನಿಗೆ ಮೂರು ಲೋಕಗಳಲ್ಲಿ ಯಾರು ಸಾಟಿ ?
 
ಸುಗ್ರೀವನೆಂಬ ಕಪಿಪುಂಗವನಿಗೆ ಈತನೊಡನೆ ಗೆಳೆತನವಿತ್ತು. ಕಪಿ
ರಾಜನಾದ ಸುಗ್ರೀವನಿಗೆ, ಮಹಾ ವೈಯಾಕರಣಿಯಾದ ಮಾರುತಿಯೇ ಮುಖ್ಯ
ಮಂತ್ರಿ
 
ಒಮ್ಮೆ ಈ ಕಪಿಪುಂಗವರಿಬ್ಬರೂ ಪಂಪೆಯ ತಡಿಯಲ್ಲಿ ಸೀತೆಗಾಗಿ
ಕೊರಗುತ್ತಿರುವ ರಾಮಚಂದ್ರನನ್ನೂ ಸಂಗಾತಿಯಾದ ಲಕ್ಷ್ಮಣನನ್ನೂ ಕಂಡರು.
ಧನುರ್ಬಾಣ ಧಾರಿಯೂ ಮಹಾ ಪರಾಕ್ರಮಿಯೂ ಆದ ಪುರುಷಸಿಂಹ ರಾಮ
ನನ್ನು ಕಂಡು ಸುಗ್ರೀವ ಹೆದರಿಕೊಂಡನು. ಅವನ ಪರಿವಾರವೆಲ್ಲ ದಿಕ್ಕುಗೆಟ್ಟು
ಓಡತೊಡಗಿತು. ಆಗ ಅವರಿಗೆಲ್ಲ ಹನುಮಂತನು ಧೈರ್ಯತುಂಬಬೇಕಾಯಿತು:
"ಪರಮ ಪುರುಷನಾದ ರಾಮಚಂದ್ರ ಚಿತ್ತೈಸಿದ್ದಾನೆ. ಯಾರೂ ಭಯ
ಪಡುವ ಕಾರಣವಿಲ್ಲ."
 
ಸುಗ್ರೀವ ಭಯ ಸಂದೇಹಗಳಿಂದಲೆ ನುಡಿದನು :
 
ಇವರು ವಾಲಿಗೆ ಹಿತವನ್ನು ಬಯಸಿ ನನ್ನನ್ನು ಕೊಲ್ಲಬಂದಿರಬೇಕು.
ಏನಿದ್ದರೂ ಇವರನ್ನು ಪರೀಕ್ಷಿಸುವುದು ಅವಶ್ಯವಿದೆ."
 
ಸುಗ್ರೀವನ ಮಾತಿನಂತೆ ಹನುಮಂತ ಭಿಕ್ಷು ವೇಷವನ್ನು ಧರಿಸಿಕೊಂಡು
ರಾಮಚಂದ್ರನ ಬಳಿಗೆ ಬಂದು ವಿನಯಪೂರ್ವಕವಾಗಿ ಕಾಲಿಗೆರಗಿದನು. ಕಾಲಿ
ಗೆರಗಿದ ನಿಜ ದಾಸನನ್ನು ರಾಮಚಂದ್ರನು ಚಕ್ರಾಂಕಿತವಾದ ತನ್ನ ಕೈಯಿಂದ
ಹಿಡಿದೆಬ್ಬಿಸಿದನು.