This page has not been fully proofread.

VII
 
ಸಂಸ್ಕೃತದಿಂದ ಕನ್ನಡಕ್ಕೆ ಎಳೆದಾಗಲೂ ಮೂಲಸೌಂದರ್ಯವನ್ನು
ಕಳೆದುಕೊಳ್ಳದಂತೆ ಅನುವಾದಿಸುವ ಶಕ್ತ ರೀತಿ ಶ್ರೀ ಗೋವಿಂದಾಚಾರರಿಗೆ
ಒಲಿದಿರುವುದನ್ನು ಈ ಗ್ರಂಥದಲ್ಲಿ ಕಾಣಬಹುದು.
 
ಶ್ರೀಯುತ ಅನುವಾದಕರ ಮನಸ್ಸು, ಜ್ಞಾನ ಪ್ರಾಕೃತಿಕ ಮಾಸುವಿಕೆಗೆ
ಒಳಗಾಗದೆ ಶಕ್ತಿಶುದ್ಧವಾಗಿ ಕೆಲಸಮಾಡಿ ಜನತೆಯ ಜನಾರ್ದನ (ಜನ
ಜನನಂ ಅರ್ದಯತೀತಿ ಜನಾರ್ದನಃ) ನನ್ನು ಸಂತೋಷಗೊಳಿಸಲಿ, ಭಗವಂತನ
ಮುಖ್ಯ ಗುರುವಿನ ವಿನಾ ಮತ್ತಾರಿಗೂ ಅವರ ತಲೆ ಬಾಗದಂತಿರಲಿ, ಹಿರಿಯ
ರಲ್ಲಿ ಪೂಜ್ಯ ಭಾವನೆ ತಾಳುತ್ತ, ಕಿರಿಯರಿಗೆ ಹಿರಿಯರಾಗಿ ಬಾಳಲಿ, "ಈಗಿನ
ಅವರ ಚಿಕ್ಕ ವಯಸ್ಸಿನೊಂದಿಗೆ ಸೇರುವ ಆಯುಸ್ಸು ಜ್ಞಾನಪೂರ್ಣವಾಗಿರಲಿ.
ಕನ್ನಡದ ಮುಖ ಕಾಣದ ಸಂಸ್ಕೃತ ಗ್ರಂಥಗಳೆಲ್ಲ ಗೋವಿಂದಾಚಾರ್ಯರನ್ನು
ಕಾಣುವಂತಾಗಲಿ" ಎಂದು ಆಚಾರ್ಯ ಕರಾರ್ಚಿತ ಶ್ರೀರಾಮಚಂದ್ರ ದೇವರಲ್ಲಿ
ಹೃಪೂರ್ವಕವಾಗಿ ಪ್ರಾರ್ಥಿಸುತ್ತೇವೆ.
 
ವಿಜಯದಶಮಿ
ಉಡುಸಿ
 
ಶ್ರೀ ರಘುವಲ್ಲಭತೀರ್ಥ ಶ್ರೀಪಾದರು
ಫಲಿಮಾರು ಮಠ