2023-03-21 06:04:53 by jayusudindra
This page has been fully proofread once and needs a second look.
ಶರಣಾದನು. ಇಂದ್ರ ಮಗುವಿನೆಡೆಗೆ ತನ್ನ ವಜ್ರಾಯುಧವನ್ನೆಸೆದನು. ರಾಹು
೧೯೬
ವಜ್ರದ ಪೆಟ್ಟಿಗೆ ಮಗು ಪರ್ವತದ ಶಿಖರದಮೇಲೆ ಉರುಳಿಬಿತ್ತು. ಇದನ್ನು
ಪ್ರಾಣನಾಯಕ ಕೋಪಗೊಂಡ ಎಂದಮೇಲೆ ಜಗತ್ತು ನಡೆವುದಾದರೂ
ಹೇಗೆ ? ಲೋಕವೆಲ್ಲ ವ್ಯಾಕುಲವಾಯಿತು. ಯಜ್ಞಾಧ್ಯಯನಾದಿಗಳು ಕೂಡ
"ಬದುಕ ಬಯಸುವ ಯಾವನಾದರೂ ತನ್ನ ಒಡೆಯನಿಗೇ ದ್ರೋಹ
ಬಗೆವುದಿದೆಯೆ ? ಇಂದ್ರನಿಗೆ ಐಶ್ವರ್ಯದ ಮತ್
ಹೀಗೆ ದೇವತೆಗಳನ್ನು ಗದರಿಸಿ ಬ್ರಹ್ಮನು ದೇವತೆಗಳೊಡನೆ ಪ್ರಾಣದೇವ
ರಿದ್ದಲ್ಲಿಗೆ ತೆರಳಿದನು. ಹುಬ್ಬಿನ ಕುಣಿತ ಮಾತ್ರದಿಂದ ಜಗತ್ತನ್ನು ನಾಶ ಪಡಿಸ
"ನನ್ನ ಪರಮ ಸ್ನೇಹಿತನಾದ ಪವಮಾನನೆ ! ತಂದೆ, ಮಕ್ಕಳ ಮೇಲೆ
ಸಿಟ್ಟಾಗಬಾರದು. ನೀನು ದೇವತೆಗಳ ಪ್ರಭು. ಅವರನ್ನು ಮುನ್ನಿಸಿಬಿಡು."
ಹೀಗೆಂದು ನುಡಿದು ಕೈಗೆ ಕೈಕೊಟ್ಟು ಎಬ್ಬಿಸಿದನು. ಪ್ರಾಣದೇವರು
ಸಂತಸಗೊಂಡಾಗ ಜಗತ್ತೇ ಸಂತಸಗೊಂಡಿತು. ಬೇಸಗೆಯಲ್ಲಿ ಬೆಂದ ಜೀವಕ್ಕೆ
"ಮಗುವಿನ ದವಡೆ (ಹನು) ವಜ್ರದ ಪೆಟ್ಟಿಗೂ ಗಾಯಗೊಳ್ಳದುದರಿಂದ
ಈತನ ಹೆಸರು ' ಹನುಮಾನ್' ಎಂದೇ ಇರಲಿ" ಎಂದು ಹರಸಿ, ಇಂದ್ರನು
ಬಾಡದ ಹೂಮಾಲೆಯೊಂದನ್ನು ಮಗುವಿಗೆ ಅರ್ಪಿಸಿದನು.