This page has not been fully proofread.

ಮಿಂಚಿನಬಳ್ಳಿ
 
ಮಾಡಲಾರದು ಎಂದು ಜನ ದಿಗಿಲಾದರು. ಹೆದರಿದ ರಾಹು ಇಂದ್ರನಿಗೆ
ಶರಣಾದನು. ಇಂದ್ರ ಮಗುವಿನೆಡೆಗೆ ತನ್ನ ವಜ್ರಾಯುಧವನ್ನೆಸೆದನು. ರಾಹು
ವಿನ ಸಹವಾಸದಿಂದ ಇಂದ್ರನ ಬುದ್ಧಿಯೂ ಮಂಕಾಗಿದ್ದಿರಬೇಕು ! ಇಲ್ಲದಿದ್ದರೆ
ಪವಮಾನನ ಮೇಲೆ ವಜವನ್ನೆಸೆವುದೆಂದರೇನರ್ಥ ?
 
೧೯೬
 
ವಜ್ರದ ಪೆಟ್ಟಿಗೆ ಮಗು ಪರ್ವತದ ಶಿಖರದಮೇಲೆ ಉರುಳಿಬಿತ್ತು. ಇದನ್ನು
ಕಂಡು ಕೋಪಗೊಂಡ ಪ್ರಾಣದೇವರು ಮಗುವನ್ನು ತಾವೇ ಎತ್ತಿಕೊಂಡರು.
 
ಪ್ರಾಣನಾಯಕ ಕೋಪಗೊಂಡ ಎಂದಮೇಲೆ ಜಗತ್ತು ನಡೆವುದಾದರೂ
ಹೇಗೆ ? ಲೋಕವೆಲ್ಲ ವ್ಯಾಕುಲವಾಯಿತು. ಯಜ್ಞಾಧ್ಯಯನಾದಿಗಳು ಕೂಡ
ನಿಂತುಹೋದವು. ಭೀತರಾದ ದೇವತೆಗಳು ಬ್ರಹ್ಮನನ್ನು ಮೊರೆಹೊಕ್ಕರು.
ಬ್ರಹ್ಮನು ಸ್ವಲ್ಪ ಸಿಟ್ಟಿನಿಂದಲೇ ನುಡಿದನು :
 
"ಬದುಕ ಬಯಸುವ ಯಾವನಾದರೂ ತನ್ನ ಒಡೆಯನಿಗೇ ದ್ರೋಹ
ಬಗೆವುದಿದೆಯೆ ? ಇಂದ್ರನಿಗೆ ಐಶ್ವರ್ಯದ ಮತ್ತ ನೆತ್ತಿಗೇರಿದೆ. ಅವನು ತನಗೂ
ಜಗತ್ತಿಗೂ ದುಃಖವನ್ನು ತಂದೊಡ್ಡಿದ್ದಾನೆ. ಪವಮಾನನು ಜಗತ್ತಿನ ಪ್ರೇರಕ,
ಸೂತ್ರಧಾರಿ. ಅವನು ನನ್ನ ಅಥವಾ ರುದ್ರಾದಿಗಳ ಹಿಡಿತದಲ್ಲಿ ಸಿಗಲಾರ.
ನಾರಾಯಣನೊಬ್ಬನೆ ಆತನ ನಾಥ, ನಾನೇನು ಮಾಡಲಿ ?"
 
ಹೀಗೆ ದೇವತೆಗಳನ್ನು ಗದರಿಸಿ ಬ್ರಹ್ಮನು ದೇವತೆಗಳೊಡನೆ ಪ್ರಾಣದೇವ
ರಿದ್ದಲ್ಲಿಗೆ ತೆರಳಿದನು. ಹುಬ್ಬಿನ ಕುಣಿತ ಮಾತ್ರದಿಂದ ಜಗತ್ತನ್ನು ನಾಶ ಪಡಿಸ
ಬಲ್ಲ ಪವಮಾನನು ಮಾರುತಿಯನ್ನು ತೊಡೆಯಲ್ಲಿರಿಸಿಕೊಂಡು, ಶಾಂತನಾಗಿ
ನೆಲದಲ್ಲಿ ಕುಳಿತಿದ್ದ. ಚತುರ್ಮುಖನು ನಿಯಿಂದ ಮಗುವಿನ ಮೈಯನ್ನು
ಪೂಸಿ ನುಡಿದನು :
 
"ನನ್ನ ಪರಮ ಸ್ನೇಹಿತನಾದ ಪವಮಾನನೆ ! ತಂದೆ, ಮಕ್ಕಳ ಮೇಲೆ
ಸಿಟ್ಟಾಗಬಾರದು. ನೀನು ದೇವತೆಗಳ ಪ್ರಭು. ಅವರನ್ನು ಮುನ್ನಿಸಿಬಿಡು."
 
ಹೀಗೆಂದು ನುಡಿದು ಕೈಗೆ ಕೈಕೊಟ್ಟು ಎಬ್ಬಿಸಿದನು. ಪ್ರಾಣದೇವರು
ಸಂತಸಗೊಂಡಾಗ ಜಗತ್ತೇ ಸಂತಸಗೊಂಡಿತು. ಬೇಸಗೆಯಲ್ಲಿ ಬೆಂದ ಜೀವಕ್ಕೆ
ಮಳೆ ನೀರನ್ನು ಕಂಡಂತಾಯಿತು.
 
"ಮಗುವಿನ ದವಡೆ (ಹನು) ವಜ್ರದ ಪೆಟ್ಟಿಗೂ ಗಾಯಗೊಳ್ಳದುದರಿಂದ
ಈತನ ಹೆಸರು ಹನುಮಾನ್' ಎಂದೇ ಇರಲಿ" ಎಂದು ಹರಸಿ, ಇಂದ್ರನು
ಬಾಡದ ಹೂಮಾಲೆಯೊಂದನ್ನು ಮಗುವಿಗೆ ಅರ್ಪಿಸಿದನು.