This page has been fully proofread once and needs a second look.

ಕಿಷ್ಕಿಂಧಾಕಾಂಡ
 

 
ಪವಮಾನನ ಅವತಾರ
 

 
ಕೇಸರಿ ಕಪಿರಾಜ್ಯದ ಅಧಿಪತಿ, ಆತನ ವಾಸ ಮೇರುಪರ್ವತದಲ್ಲಿ.

ಅಂಜನಾದೇವಿ ಆತನ ಮಡದಿ.
 

 
ಒಮ್ಮೆ ಹೀಗೆ ನಡೆಯಿತು. ಮತ್ತೇರಿದ ಆನೆಯೊಂದು ಭರದ್ವಾಜರನ್ನು

ಕೊಲ್ಲಲು ಬೆನ್ನಟ್ಟುತ್ತಿತ್ತು. ಕೇಸರಿ ಅದನ್ನು ಕಂಡವನೆ ಸಿಂಹದಂತೆ ಆ ಆನೆಯ
ಮೇಲೆರಗಿದನು. ಆನೆ ಸತ್ತು ಬಿದ್ದಿತು. ಮುನಿಗಳಿಗೆ ನಿರ್ಭಯ- ದಿಂದ ತಿರು
ಗಾಡಲು ಸಾಧ್ಯವಾಯಿತು. ಸಂತಸಗೊಂಡ ಮುನಿವೃಂದ ಬಯಸಿದ ವರವನ್ನು
ಬೇಡುವಂತೆ ಕೇಸರಿಯನ್ನು ಕೇಳಿಕೊಂಡಿತು. ವಿನೀತನಾದ ಕೇಸರಿ ಉತ್ತರಿ-
ಸಿದನು :
 
6
 
*

 
"
ಪೂಜ್ಯರಾದ ತಾವೆಲ್ಲ ನನ್ನ ಮೇಲೆ ಪ್ರಸನ್ನರಾಗಿದ್ದೀರಿ. ಅದು ನನ್ನ

ಭಾಗ್ಯ, ಪ್ರಸನ್ನರಾದ ತಾವು ನನಗೊಬ್ಬ ಮಗನನ್ನು ಕರುಣಿಸಬೇಕು.

ಶ್ರೀಹರಿಯನ್ನು ಬಿಟ್ಟರೆ ಅವನನ್ನು ಮಾಮೀರಿಸುವವನು ಇನ್ನೊಬ್ಬನಿರ- ಬಾರದು.
ಅಂಥ ಮಗ ನನಗೆ ಬೇಕು. "
 

 
ಮುನಿಗಳು 'ತಥಾಸ್ತು' ಎಂದು ಹರಸಿ ಮುಂದೆ ನಡೆದರು.
 

 
ಒಂದುದಿನ ಅಂಜನೆ ಋತುಸ್ಮಾನಾತೆಯಾಗಿ ಉದ್ಯಾನದಲ್ಲಿ ತಿರುಗು- ತ್ತಿದ್ದಾಗ
ಪವಮಾನನನ್ನು ಕಂಡಳು. ನಾಚಿಕೆಯಲ್ಲಿ ಮುಳುಗಿಹೋದ ಆಕೆಯನ್ನು
ಸಂತೈಸುತ್ತ ಪವಮಾನನು ಆಕೆಯ ಗರ್ಭದಲ್ಲಿ ತನ್ನ ಸನ್ನಿಧಾನವನ್ನಿಟ್ಟನು.
 

 
ಮೂಡಣ ದಿಕ್ಕಿನಲ್ಲಿ ಭಾನು ಉದಿಸುವಂತೆ ಆಕೆಯ ಗರ್ಭದಿಂದ ತೇಜಸ್ವಿ
ಯಾದ ಮಾರುತಿಯು ಜನಿಸಿದನು. ದೇವತೆಗಳು ಸಂತಸ- ಗೊಂಡರು. ಅಸುರ-
ಸ್ತ್ರೀಯರ ಗರ್ಭ ಮಿಡಿದಂತಾಯಿತು.
 

 
ನೆಲಮುಟ್ಟಿದೊಡನೆಯೆ ಈ ಭಾರಿ ಶಿಶು ಹಸಿವೆನ್ನತೊಡಗಿತು. ತಾಯಿ

ಹಣ್ಣು ತರಲೆಂದು ಹೊರಬಿದ್ದಳು. ಮಗು ಒಮ್ಮೆಲೆ ಆಕಾಶಕ್ಕೆ ನೆಗೆಯಿತು.

ಉದಿಸುವ ಸೂರ್ಯನನ್ನು ಕಬಳಿಸಹೊರಟ ರಾಹುವನ್ನೆ ಕೆಡವುವದಕ್ಕಾಗಿ ನೆಗೆ
ಯಿತು. ಹುಟ್ಟಿದಕ್ಷಣದಲ್ಲಿಲೆ ಈ ಅದ್ಭುತವನ್ನು ಸಾಧಿಸಿದ ಮಗು ಮುಂದೇನು