This page has not been fully proofread.

ಕಿಂಧಾಕಾಂಡ
 
ಪವಮಾನನ ಅವತಾರ
 
ಕೇಸರಿ ಕಪಿರಾಜ್ಯದ ಅಧಿಪತಿ, ಆತನ ವಾಸ ಮೇರುಪರ್ವತದಲ್ಲಿ.
ಅಂಜನಾದೇವಿ ಆತನ ಮಡದಿ.
 
ಒಮ್ಮೆ ಹೀಗೆ ನಡೆಯಿತು. ಮತ್ತೇರಿದ ಆನೆಯೊಂದು ಭರದ್ವಾಜರನ್ನು
ಕೊಲ್ಲಲು ಬೆನ್ನಟ್ಟುತ್ತಿತ್ತು. ಕೇಸರಿ ಅದನ್ನು ಕಂಡವನೆ ಸಿಂಹದಂತೆ ಆ ಆನೆಯ
ಮೇಲೆರಗಿದನು. ಆನೆ ಸತ್ತು ಬಿದ್ದಿತು. ಮುನಿಗಳಿಗೆ ನಿರ್ಭಯದಿಂದ ತಿರು
ಗಾಡಲು ಸಾಧ್ಯವಾಯಿತು. ಸಂತಸಗೊಂಡ ಮುನಿವೃಂದ ಬಯಸಿದ ವರವನ್ನು
ಬೇಡುವಂತೆ ಕೇಸರಿಯನ್ನು ಕೇಳಿಕೊಂಡಿತು. ವಿನೀತನಾದ ಕೇಸರಿ ಉತ್ತರಿ-
ಸಿದನು :
 
6
 
* ಪೂಜ್ಯರಾದ ತಾವೆಲ್ಲ ನನ್ನ ಮೇಲೆ ಪ್ರಸನ್ನರಾಗಿದ್ದೀರಿ. ಅದು ನನ್ನ
ಭಾಗ್ಯ, ಪ್ರಸನ್ನರಾದ ತಾವು ನನಗೊಬ್ಬ ಮಗನನ್ನು ಕರುಣಿಸಬೇಕು.
ಶ್ರೀಹರಿಯನ್ನು ಬಿಟ್ಟರೆ ಅವನನ್ನು ಮಾರಿಸುವವನು ಇನ್ನೊಬ್ಬನಿರಬಾರದು.
ಅಂಥ ಮಗ ನನಗೆ ಬೇಕು. "
 
ಮುನಿಗಳು 'ತಥಾಸ್ತು' ಎಂದು ಹರಸಿ ಮುಂದೆ ನಡೆದರು.
 
ಒಂದುದಿನ ಅಂಜನೆ ಋತುಸ್ಮಾತೆಯಾಗಿ ಉದ್ಯಾನದಲ್ಲಿ ತಿರುಗುತ್ತಿದ್ದಾಗ
ಪವಮಾನನನ್ನು ಕಂಡಳು. ನಾಚಿಕೆಯಲ್ಲಿ ಮುಳುಗಿಹೋದ ಆಕೆಯನ್ನು
ಸಂತೈಸುತ್ತ ಪವಮಾನನು ಆಕೆಯ ಗರ್ಭದಲ್ಲಿ ತನ್ನ ಸನ್ನಿಧಾನವನ್ನಿಟ್ಟನು.
 
ಮೂಡಣ ದಿಕ್ಕಿನಲ್ಲಿ ಭಾನು ಉದಿಸುವಂತೆ ಆಕೆಯ ಗರ್ಭದಿಂದ ತೇಜಸ್ವಿ
ಯಾದ ಮಾರುತಿಯು ಜನಿಸಿದನು. ದೇವತೆಗಳು ಸಂತಸಗೊಂಡರು. ಅಸುರ-
ಸ್ತ್ರೀಯರ ಗರ್ಭ ಮಿಡಿದಂತಾಯಿತು.
 
ನೆಲಮುಟ್ಟಿದೊಡನೆಯೆ ಈ ಭಾರಿ ಶಿಶು ಹಸಿವೆನ್ನತೊಡಗಿತು. ತಾಯಿ
ಹಣ್ಣು ತರಲೆಂದು ಹೊರಬಿದ್ದಳು. ಮಗು ಒಮ್ಮೆಲೆ ಆಕಾಶಕ್ಕೆ ನೆಗೆಯಿತು.
ಉದಿಸುವ ಸೂರ್ಯನನ್ನು ಕಬಳಿಸಹೊರಟ ರಾಹುವನ್ನೆ ಕೆಡವುವದಕ್ಕಾಗಿ ನೆಗೆ
ಯಿತು. ಹುಟ್ಟಿದಕ್ಷಣದಲ್ಲಿ ಈ ಅದ್ಭುತವನ್ನು ಸಾಧಿಸಿದ ಮಗು ಮುಂದೇನು