This page has been fully proofread once and needs a second look.

OCY
 
ಮಿಂಚಿನಬಳ್ಳಿ
 
ಗಳಿಂದ ಉಪಚರಿಸಿ ಪೂಜಿಸಿದಳು. ರಾಮಚಂದ್ರನು 'ತಾಯಿ, ಕ್ಷೇಮವೆ
'
ಎಂದಾಗ ಅವಳು ನುಡಿದಳು :
 
66
 

 
"
ರಾಮಚಂದ್ರ ನಿನ್ನ ಚರಣ ಕಿಂಕರರಾದ ಮುನಿಗಳ ಆಶೀರ್ವಾದ- ದಿಂದ
ನಾನು ಕ್ಷೇಮವಾಗಿದ್ದೇನೆ. ಇನ್ನು ಕ್ಷೇಮಚಿಂತನೆ ಸಾಕು.
ನನಗೆ ಒಪ್ಪಿಗೆ
ಯನ್ನು ಕೊಡು. " ಎಂದು ಅವನೆದುರಿನಲ್ಲಿಲೆ ಉರಿಯುವ ಬೆಂಕಿಯಲ್ಲಿ
ಪ್ರವೇಶಿಸಿದಳು. ಶಬರಿಯ ಭಗವದ್ಭಕ್ತಿ ಅವಳಿಗೆ ಸುಗತಿಯನ್ನೊದಗಿಸಿತು.
 

 
ಅಲ್ಲಿಂದ ರಾಮ-ಲಕ್ಷ್ಮಣರು ಮುಂದುವರಿದರು. ದಾರಿಯಲ್ಲಿ ಕಮಲ-
ಗಳಿಂದ ಕಂಗೊಳಿಸುವ ಸ್ವಚ್ಛವಾದ ಪಂಪಾಸರೋವರ ಕಾಣಿಸಿತು. ಸುಂದರ-
ವಾದ ಕೊಳವನ್ನು ಕಂಡಾಗ ರಾಮನ ವಿರಹ ದುಃಖ ಮರುಕಳಿಸಿತು. ಒಮ್ಮೆಲೆ
ತನ್ನ ಭಾವೀ ಕಾರ್ಯದಲ್ಲಿ ಸಹಕಾರಿಯಾಗ ಬಲ್ಲ ಕಪಿವೀರ ಹನುಮಂತನ
ನೆನಪು ರಾಮಚಂದ್ರನಿಗಾಯಿತು.