This page has not been fully proofread.

ಸಂಗ್ರಹರಾಮಾಯಣ
 
ಲಕ್ಷ್ಮಣನು ಅಂತ್ಯ ಸಂಸ್ಕಾರ ಮಾಡಿದನು. ರಾಮ-ಲಕ್ಷ್ಮಣರು ಗೋದಾವರಿ
ಯಲ್ಲಿ ಪಕ್ಷಿರಾಜನಿಗೆ ಜಲಾಂಜಲಿಯನ್ನಿತ್ತು, ರಾತ್ರಿಯನ್ನು ಜನಸ್ಥಾನದಲ್ಲಿ ಕಳೆದು
ಬೆಳಿಗ್ಗೆ ಪಶ್ಚಿಮಾಭಿಮುಖವಾಗಿ ಹೊರಟರು.
 
೧೦೩
 
ಹೀಗೆ ಕಾಡುಗಳಮೇಲೆ ಕಾಡುಗಳನ್ನು ದಾಟಿ ಸಾಗುತ್ತಿದ್ದಾಗ ಹೊಟ್ಟೆ-
ಯೊಳಗೆ ತಲೆ ಹೂತುಕೊಂಡ ಕಬಂಧನೆಂಬ ರಾಕ್ಷಸನನ್ನು ಕಂಡರು. ಅವನಿಗೆ
ಒಂದು ಯೋಜನದಷ್ಟು ಉದ್ದವಾದ ತೋಳುಗಳಿದ್ದವು. ಅವನು ಅಷ್ಟು ದೂರದ
ವರೆಗೆ ಕೈಚಾಚಿ ಎಟುಕಿದ ಪ್ರಾಣಿಗಳನ್ನೆಲ್ಲ ಎಳೆದು ಕಬಳಿಸುತ್ತಿದ್ದ. ರಾಮ
ಲಕ್ಷ್ಮಣರೂ ಅವನ ತೋಳ ಸೆರೆಯಲ್ಲಿ ಸಿಕ್ಕಿಕೊಂಡರು. ಆಗ ರಾಮಚಂದ್ರನು
ಅವನ ಬಲದ ತೋಳನ್ನು ಕತ್ತರಿಸಿದನು. ಲಕ್ಷ್ಮಣನು ಎಡದ ತೋಳನ್ನು
ಕತ್ತರಿಸಿದನು. ಕೈ ಕಳೆದುಕೊಂಡು ನೆತ್ತರಿನಿಂದ ತೊಯ್ದು ನೆಲಕ್ಕುರುಳಿದ
ಕಬಂಧನು ರಾಮ-ಲಕ್ಷ್ಮಣರನ್ನು ಕುರಿತು "ವೀರರಾದ ನೀವಾರು ?" ಎಂದು
ಕೇಳಿದನು. ಲಕ್ಷ್ಮಣನು ತಮ್ಮ ಪರಿಚಯವನ್ನರುಹಿದನು. ಸಂತುಷ್ಟನಾದ
ಕಬಂಧನು ನುಡಿದನು :
 
"ಜಗನ್ನಾಥನಾದ ರಾಮಚಂದ್ರನೇ ! ನಿನಗೆ ವಂದನೆಗಳು, ನನಗೆ ಶಾಪ
ವಿಮೋಚನೆಯಾದಂತಾಯಿತು. ನಾನು ದನು ಎಂಬ ಗಂಧರ್ವ, ಶಾಪದಿಂದ
ರಾಕ್ಷಸನಾಗಿದ್ದೇನೆ. ಬ್ರಹ್ಮವರದಿಂದ ನಾನು ಅವಧ್ಯನಾಗಿದ್ದೇನೆ. ಇಂದ್ರನ
ವಜ್ರದ ಏಟಿಗೆ ತಲೆ ಹೊಟ್ಟೆಯೊಳಗೆ ಸೇರಿಕೊಂಡಿದೆ. ಆದರೆ ಇನ್ನು ನಾನು
ಈ ಪಾಪದಿಂದ ದೂರಾದೆನು. ಪರಮ ಪುರುಷನೆ, ಪ್ರಸನ್ನನಾಗು. "
 
ಹೀಗೆಂದು ಅವನು ತನ್ನ ಪಾಪಶರೀರವನ್ನು ತೊರೆದು ಗಂಧರ್ವನಾದನು.
ಲಕ್ಷ್ಮಣನು ಅವನ ತನುವನ್ನು ಬೆಂಕಿಯಲ್ಲಿ ಸುಟ್ಟನು. ದನು ಗಂಧರ್ವ
ಮತ್ತೆ ನುಡಿದನು :
 
(
 
" ಹನುಮಂತನಿಂದ ಕೂಡಿದ ಸುಗ್ರೀವನೆಂಬ ಕಪಿ ನಿನ್ನ ಭಕ್ತನಾಗಿ
ದ್ದಾನೆ. ಅವನು ನಿನಗೆ ಸೀತಾನ್ವೇಷಣೆಯಲ್ಲಿ ಸಹಕರಿಸಬಲ್ಲನು.
 
ಹೀಗೆಂದು ದನು ರಾಮನಿಗೆ ಸುತ್ತುವರಿದು ವಂದಿಸಿ ಸ್ವರ್ಗಕ್ಕೆ ತೆರಳಿದನು.
ರಾಮಚಂದ್ರನು ದನು ಹೇಳಿದ ಮಾರ್ಗದಲ್ಲಿ ಪಂಪೆಗೆ ತೆರಳಿದನು. ಒಂದು
ಬೆಟ್ಟದ ತುದಿಯಲ್ಲಿ ರಾತ್ರಿಯನ್ನು ಕಳೆದು ಪ್ರಾತಃಕಾಲದಲ್ಲಿ ಮತಂಗನ ಆಶ್ರ-
ಮಕ್ಕೆ ಬಂದನು. ಅಲ್ಲಿ ಶಬರಿ ಎಂಬ ತಾಪಸಿ ಇವರಿಬ್ಬರನ್ನೂ ಫಲಮೂಲ-