This page has been fully proofread once and needs a second look.

ಮಿಂಚಿನಬಳ್ಳಿ
 
ಪಂಪಾಸರೋವರದ ಬಳಿ
 

 
ಮಾರೀಚನನ್ನು ಕೊಂದು ಮರಳುತ್ತಿದ್ದಾಗ ರಾಮಚಂದ್ರನಿಗೆ ಲಕ್ಷ್ಮಣನು
ಎದುರಾದನು. "ಮಾಯಾವಿ ರಾಕ್ಷಸರಿಂದ ತುಂಬಿದ ಕಾಡಿ- ನಲ್ಲಿ ಸೀತೆಯೊಬ್ಬ
ಳನ್ನೆ, ಏಕೆ ಬಿಟ್ಟು ಬಂದೆ ?" ಎಂದು ರಾಮಚಂದ್ರನು ಲಕ್ಷ್ಮಣನನ್ನು ಗದರಿಸಿ
ತ್ವರಿತವಾಗಿ ಆಶ್ರಮದೆಡೆಗೆ ತೆರಳಿದನು. ಸೀತೆ- ಯಿಂದ ಬರಿದಾದ ಆಶ್ರಮವನ್ನು
ಕಂಡು ರಾಮಚಂದ್ರನು ಹಲುಬಿ- ದನು; ಲಕ್ಷ್ಮಣನನ್ನು ಹಂಗಿಸಿದನು:
 
69
 

 
"
ಲಕ್ಷಣ, ನೀನು ಪವಿತ್ರಳಾದ ಸೀತೆಯನ್ನೂ ಹಾಗೂ ನನ್ನಾಜ್ಞೆ

ಯನ್ನೂ ಪಾಲಿಸದೆ ಹೋದೆ."
 

 
ಲೀಲಾನಾಟಕ ಸೂತ್ರಧಾರಿಯ ಅಭಿನಯ ಕೇಳಬೇಕೆ ! ಲಕ್ಷ್ಮಣನೂ

ದುಃಖದಿಂದ ವಿಷಯವನ್ನು ನಿವೇದಿಸಿಕೊಂಡ :
 

 
"ನಾವು ಆಶ್ರಮದಲ್ಲಿದ್ದಾಗ "' ಓ ಲಕ್ಷ್ಮಣ ' ಎಂಬ ಕೂಗು ಕೇಳಿಸಿತು.

ಆಗ ಅತ್ತಿಗೆ ನನ್ನನ್ನು ನಿನ್ನೆಡೆಗೆ ಹೋಗುವಂತೆ ಒತ್ತಾಯಿಸಿದಳು. ನಾನು

ನಿರಾಕರಿಸಿದೆ. ಆಗ ಅವಳೆಂದಳು; ' ಅಣ್ಣನನ್ನು ಕೊಂದು ನನ್ನನ್ನು ಪಡೆಯ
ಲೆಳೆಸುವ ನೀಚ ನೀನು !"' ಅಣ್ಣ, ನಿನ್ನ ಬಾಣದ ಪೆಟ್ಟನ್ನು ತಿಂದ ಮಾರೀಚನಿ
ಗಿಂತ ಅತ್ತಿಗೆಯ ವಾಗ್ದಾಬಾಣದಿಂದ ಆಹತನಾದ ನನ್ನ ವೇದನೆಯೇನೂ
ಕಡಿಮೆಯದಲ್ಲ. ನಾನೇನು ಮಾಡಲಿ ?"
 

 
ರಾಮಚಂದ್ರನು " ಓ ನನ್ನ ಸೀತೆ, ಎಲ್ಲಿರುವೆ ?? " ಎಂದು ಕಾಡಲ್ಲಿ

ಕೂಗಿ ಕರೆದನು. ಗೋಳಿಟ್ಟನು.
 

 
ಸಜ್ಜನರು ರಾಮನ ಲೀಲೆಯನ್ನು ಕಂಡು ಆನಂದಾಶ್ರುಗಳನ್ನು ಸುರಿಸಿ
ದರು. ದುರ್ಜನರು ತಮ್ಮ ದೌರ್ಜನ್ಯಕ್ಕೆ ತಕ್ಕಂತೆ ಈ ಭಗವನ್ಮಾಯೆಯಿಂದ
 
ವಿವಂಚಿತರಾದರು.
 

 
ಸೀತೆಯನ್ನು ಹುಡುಕುತ್ತ ರಾಮಚಂದ್ರ ಮುಂದುವರಿದ. ಜನಸ್ಥಾನದ

ಪ್ರಾಂತದಲ್ಲಿ ಜಟಾಯುವಿನ ದರ್ಶನವಾಯಿತು. ಸೀತೆಯನ್ನು ಕಾಪಾಡ ಹೋಗಿ
ತಾನು ಮೈಮುರಿದುಕೊಂಡಿರುವ ಈ ಪೂಜ್ಯ ಪಕ್ಷೀಂದ್ರನನ್ನು ಕಂಡು ರಾಮ
ಚಂದ್ರನಿಗೆ ದುಃಖವಾಯಿತು. ಜಟಾಯುವು ರಾವಣನಿಂದ ಸೀತೆ ಅಪಹೃತ-
ಳಾದ ವಾರ್ತೆಯನ್ನು ನಿವೇದಿಸಿ ರಾಮಚಂದ್ರನ ಚರಣ ಕಮಲಗಳ ಬಳಿ ತನ್ನ
ಅಸುವನ್ನು ನೀಗಿದನು. ಅವನ ಆತ್ಮ ಸದ್ತಿಯನ್ನೈದಿತು. ಅವನ ಕಳೇಬರಕ್ಕೆ
 
&