This page has not been fully proofread.

ಮಿಂಚಿನಬಳ್ಳಿ
 
ಪಂಪಾಸರೋವರದ ಬಳಿ
 
ಮಾರೀಚನನ್ನು ಕೊಂದು ಮರಳುತ್ತಿದ್ದಾಗ ರಾಮಚಂದ್ರನಿಗೆ ಲಕ್ಷ್ಮಣನು
ಎದುರಾದನು. "ಮಾಯಾವಿ ರಾಕ್ಷಸರಿಂದ ತುಂಬಿದ ಕಾಡಿನಲ್ಲಿ ಸೀತೆಯೊಬ್ಬ
ಳನ್ನೆ, ಏಕೆ ಬಿಟ್ಟು ಬಂದೆ ?" ಎಂದು ರಾಮಚಂದ್ರನು ಲಕ್ಷ್ಮಣನನ್ನು ಗದರಿಸಿ
ತ್ವರಿತವಾಗಿ ಆಶ್ರಮದೆಡೆಗೆ ತೆರಳಿದನು. ಸೀತೆಯಿಂದ ಬರಿದಾದ ಆಶ್ರಮವನ್ನು
ಕಂಡು ರಾಮಚಂದ್ರನು ಹಲುಬಿದನು; ಲಕ್ಷ್ಮಣನನ್ನು ಹಂಗಿಸಿದನು:
 
69
 
ಲಕ್ಷಣ, ನೀನು ಪವಿತ್ರಳಾದ ಸೀತೆಯನ್ನೂ ಹಾಗೂ ನನ್ನಾಜ್ಞೆ
ಯನ್ನೂ ಪಾಲಿಸದೆ ಹೋದೆ."
 
ಲೀಲಾನಾಟಕ ಸೂತ್ರಧಾರಿಯ ಅಭಿನಯ ಕೇಳಬೇಕೆ ! ಲಕ್ಷ್ಮಣನೂ
ದುಃಖದಿಂದ ವಿಷಯವನ್ನು ನಿವೇದಿಸಿಕೊಂಡ :
 
"ನಾವು ಆಶ್ರಮದಲ್ಲಿದ್ದಾಗ "ಓ ಲಕ್ಷ್ಮಣ' ಎಂಬ ಕೂಗು ಕೇಳಿಸಿತು.
ಆಗ ಅತ್ತಿಗೆ ನನ್ನನ್ನು ನಿನ್ನೆಡೆಗೆ ಹೋಗುವಂತೆ ಒತ್ತಾಯಿಸಿದಳು. ನಾನು
ನಿರಾಕರಿಸಿದೆ. ಆಗ ಅವಳೆಂದಳು; ಅಣ್ಣನನ್ನು ಕೊಂದು ನನ್ನನ್ನು ಪಡೆಯ
ಲೆಳೆಸುವ ನೀಚ ನೀನು !" ಅಣ್ಣ, ನಿನ್ನ ಬಾಣದ ಪೆಟ್ಟನ್ನು ತಿಂದ ಮಾರೀಚನಿ
ಗಿಂತ ಅತ್ತಿಗೆಯ ವಾಗ್ದಾಣದಿಂದ ಆಹತನಾದ ನನ್ನ ವೇದನೆಯೇನೂ
ಕಡಿಮೆಯದಲ್ಲ. ನಾನೇನು ಮಾಡಲಿ ?"
 
ರಾಮಚಂದ್ರನು "ಓ ನನ್ನ ಸೀತೆ, ಎಲ್ಲಿರುವೆ ??" ಎಂದು ಕಾಡಲ್ಲಿ
ಕೂಗಿ ಕರೆದನು. ಗೋಳಿಟ್ಟನು.
 
ಸಜ್ಜನರು ರಾಮನ ಲೀಲೆಯನ್ನು ಕಂಡು ಆನಂದಾಶ್ರುಗಳನ್ನು ಸುರಿಸಿ
ದರು. ದುರ್ಜನರು ತಮ್ಮ ದೌರ್ಜನ್ಯಕ್ಕೆ ತಕ್ಕಂತೆ ಈ ಭಗವನ್ಮಾಯೆಯಿಂದ
 
ವಿವಂಚಿತರಾದರು.
 
ಸೀತೆಯನ್ನು ಹುಡುಕುತ್ತ ರಾಮಚಂದ್ರ ಮುಂದುವರಿದ. ಜನಸ್ಥಾನದ
ಪ್ರಾಂತದಲ್ಲಿ ಜಟಾಯುವಿನ ದರ್ಶನವಾಯಿತು. ಸೀತೆಯನ್ನು ಕಾಪಾಡಹೋಗಿ
ತಾನು ಮೈಮುರಿದುಕೊಂಡಿರುವ ಈ ಪೂಜ್ಯ ಪಕ್ಷೀಂದ್ರನನ್ನು ಕಂಡು ರಾಮ
ಚಂದ್ರನಿಗೆ ದುಃಖವಾಯಿತು. ಜಟಾಯುವು ರಾವಣನಿಂದ ಸೀತೆ ಅಪಹೃತ-
ಳಾದ ವಾರ್ತೆಯನ್ನು ನಿವೇದಿಸಿ ರಾಮಚಂದ್ರನ ಚರಣಕಮಲಗಳ ಬಳಿ ತನ್ನ
ಅಸುವನ್ನು ನೀಗಿದನು. ಅವನ ಆತ್ಮ ಸದ್ಧತಿಯದಿತು. ಅವನ ಕಳೇಬರಕ್ಕೆ
 
&