This page has not been fully proofread.

ಮಿಂಚಿನಬಳ್ಳಿ
 
"6
 
" ದೇವತೆಗಳನ್ನೂ ಬಗ್ಗಿಸಿದ ನನಗೆ ಮನುಷ್ಯ ಮಾತ್ರನಾದ ರಾಮ-
ನಿಂದೇನು ಭಯ ? " ಎಂದು ರಾವಣನು ತನ್ನ ಉಗ್ರವಾದ ನಿಜರೂಪವನ್ನು
ಧರಿಸಿ ಮುಂದುವರಿದನು.
 
೧೦೦
 
ಭಗವದಿಚ್ಛೆಯಂತೆ ಸೀತೆ ಅಂತರ್ಧಾನವಾಗಿ ಕೈಲಾಸಕ್ಕೆ ತೆರಳಿದಳು.
ಸೀತೆಯ ಪ್ರತಿಕೃತಿಯನ್ನು ರಾವಣ ಮೋಹದಿಂದ ಎತ್ತಿಕೊಂಡು ತನ್ನ ರಥವನ್ನು
ಆಕಾಶಕ್ಕೆ ಹಾರಿಸಿದನು. ಮಾಯಾಮೃಗವನ್ನು ಬಲಿಕೊಟ್ಟು ಮಾಯಾ
ಸೀತೆಯನ್ನು ಕದ್ದೊಯ್ದನು.
 
ರಾವಣನು ಕದ್ದೊಯ್ದ ಸೀತೆ ದಾರಿಯಲ್ಲಿ ಹಲುಬಿದಳು :
 
ಹಾಯ್, ಆರ್ಯಪುತ್ರ, ರಾವಣನಿಂದ ನನ್ನನ್ನು ರಕ್ಷಿಸು. ಲಕ್ಷ್ಮಣ,
ನೀನೂ ನನ್ನನ್ನು ಗಮನಿಸಲಾರೆಯಾ ? ಓ ವನದೇವತೆಯೆ, ನನ್ನನ್ನು ಈ
ನೀಚ ಕದ್ದೊಯ್ದ ಸುದ್ದಿಯನ್ನು ರಾಮನಿಗೆ ತಿಳಿಸುವೆಯಾ ? ಓ ಪಕ್ಷಿರಾಜನಾದ
ಜಟಾಯುವೆ! ನೀನಾದರೂ ನನ್ನ ಪಾಡನ್ನು ನನ್ನಿನಿಯನಿಗೆ ಅರುಹುವೆಯಾ ?"
 
'ಜಟಾಯು' ಎಂಬ ಕರುಣಕಂದ್ರನ ಕಿವಿಗೆ ಬಿದ್ದುದೆ ತಡ, ಪರ್ವತವೆ
ನೆಗೆದು ಬಂದಂತೆ ಜಟಾಯು ರಾವಣನಿಗೆ ಅಡ್ಡವಾದನು.
 
"ಓ ರಾವಣ, ರಾಮನ ಮಹಿಷಿಯನ್ನು ಕದ್ದು ಕೊಂಡೊಯ್ಯುವೆಯಾ !
ನಾನು ಬದುಕಿರುವವರೆಗೆ ಅದು ಸಾಧ್ಯವಿಲ್ಲ. ರಾಮನ ಬಾಣಗಳಿಂದ ಸಾಯ
ಬೇಕೆಂದು ಆಸೆಯಿದೆಯೇನು ???
 
ಪಕ್ಷೀಂದ್ರನಿಗೂ ರಾಕ್ಷಸೇಂದ್ರನಿಗೂ ಭೀಕರವಾದ ಯುದ್ಧವೆ ನಡೆಯಿತು.
ಜಟಾಯುವಿನ ಉಗುರು-ಕೊಕ್ಕುಗಳಿಂದ ರಾವಣನ ಮೈಯೆಲ್ಲ ಗಾಯವಾಗಿ
ನೆತ್ತರು ಸುರಿಯತೊಡಗಿತು. ಜಟಾಯುವು ತನ್ನ ಪುಕ್ಕಗಳಿಂದಲೆ ರಾವಣನ
ಬಿಲ್ಲನ್ನು ಮುರಿದನು. ಅವನ ಉಗುರಿನ ಹೊಡೆತಕ್ಕೆ ಸಾರಥಿ, ರಥ, ಕುದುರೆ
ಗಳೆಲ್ಲ ನಾಶವಾದವು. ಒಮ್ಮೆಲೆ ಜಟಾಯು ರಾವಣನ ಬೆನ್ನ ಮೇಲೇರಿ
ಉಗುರುಗಳಿಂದ ಅವನ ಬೆನ್ನೆಲಬನ್ನು ನಲುಗಿಸಿದನು; ಅವನ ತಲೆಗೂದಲನ್ನು
ಕಿತ್ತೆಸೆದನು.
 
ಸೀತೆಯನ್ನು ಕೆಳಗಿರಿಸಿ ರಾವಣ ಮತ್ತೆ ಯುದ್ಧಕ್ಕೆ ಅಣಿಯಾದನು.
ಸ್ವಲ್ಪ ಹೊತ್ತು ಇಬ್ಬರೂ ದೇವತೆಗಳೂ ದಂಗು ಪಡುವಂತೆ ಕದನವಾಡಿದರು.
ಆರುವತ್ತು ಸಾವಿರ ವರ್ಷಗಳ ಜೀವನವನ್ನುಂಡು ಮುದುಕನಾದ ಜಟಾಯು