This page has been fully proofread once and needs a second look.

ಸಂಗ್ರಹರಾಮಾಯಣ
 
"ಅಣ್ಣನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ನೀನು ಈ ಮಾತ

ನಾಡುತ್ತಿದ್ದಿಲ್ಲ." ಎಂದವಳೆ ಸ್ವಗತವೆಂಬಂತೆ ನುಡಿದಳು: "ತನ್ನ ಒಡಹುಟ್ಟಿ
ದವನನ್ನು ಕೊಂದು, ತನ್ನ ಅತ್ತಿಗೆಯ ಯೌವನವನ್ನು ಬಯಸುತ್ತಿದ್ದಾನೆ ಈ
ನೀಚ."
 

 
ಕೇಳಬಾರದ ಮಾತು ಕಿವಿಗೆ ಬಿತ್ತು. ಲಕ್ಷ್ಮಣನ ಕಣ್ಣಿನಿಂದ ನೀರು

ಹರಿಯಿತು. ಅವನು ಸಾವರಿಸಿಕೊಂಡು ನುಡಿದನು:
 

 
"ತಾಯಿ, ಇಂಥ ಮಾತನ್ನು ಕೇಳುವ ದೌರ್ಭಾಗ್ಯಕ್ಕಾಗಿ ನನಗೆ ಧಿಕ್ಕಾರ

ವಿರಲಿ, ಅಣ್ಣನ ಮಾತನ್ನಾದರೂ ಮೀರಿ ನಡೆದೇನು. ಅತ್ತಿಗೆಯ ಮಾತನ್ನು
ಮೀರಲಾರೆ. ಆಗಲಿ ಅತ್ತಿಗೆ , ರಾಮನೆಡೆಗೆ ತೆರಳುವೆನು. ನಿನಗೆ ಶುಭವಾಗಲಿ
ತಾಯಿ. ದೇವರು ನಿನ್ನನ್ನು ಕಾಪಾಡಲಿ."
 

 
ಲಕ್ಷ್ಮಣ ರಾಮನೆಡೆಗೆ ಧಾವಿಸಿದನು. ಸೀತೆ ದೇವಕಾರ್ಯವನ್ನು

ಸಾಧಿಸುವುದಕ್ಕಾಗಿ ಆಶ್ರಮದಲ್ಲಿ ಉಳಿದಳು.
 

 
ಪತಿತನಾದವನು ವೇದವನ್ನು ಬಯಸುವಂತೆ, ರಾವಣನು ಸೀತೆಯನ್ನು

ಕಂಡು ಮೋಹಿತನಾದನು. ಅವನು ಮುನಿರೂಪ ತಾಳಿ ಆಶ್ರಮದ ಬಳಿಗೆ

ಬಂದು ಸೀತೆಯನ್ನು ಕಂಡು ಮಾತಾಡಿಸಿದನು :
 

 
"
ಸುಂದರಿ, ದೇವಸ್ತ್ರೀಯಂತೆ ಕಾಣಿಸುವ ನೀನಾರು ? ಈ ಕಗ್ಗಾಡಿಗೇಕೆ
 

ಬಂದೆ ?
 
(6
 
*
"
 
"
ದಶರಥ ಮಹಾರಾಜನ ಹಿರಿಯ ಮಗ ರಾಮಭದ್ರನ ಹೆಸರು ಕೇಳಿರ

ಬಹುದು. ಅವನು ತಂದೆಯ ಮಾತಿನಂತೆ ವನವಾಸದಲ್ಲಿದ್ದಾನೆ. ನಾನು

ಅವನ ಅರ್ಧಾಂಗಿ ಸೀತೆ."
 

 
ರಾವಣನು ತನ್ನ ಇಂಗಿತವನ್ನರುಹಿದನು :
 
*

 
"
ಮೂರು ಲೋಕಗಳನ್ನು ನಡುಗಿಸುವ ಮಹಾವೀರ ರಾವಣನೆಂದರೆ :

ನಾನೆ. ನಿನ್ನ ರೂಪಶ್ರೀಯನ್ನು ಕೇಳಿ ಮೋಹಿತನಾಗಿ ಬಂದೆ. ನೀನು ಈ

ರಾವಣನ ಪ್ರೇಯಸಿಯಾಗಬೇಕೆಂದು ನನ್ನ ಬಯಕೆ."

 
ಆಗ ಸೀತೆ ಅವನನ್ನೆಚ್ಚರಿಸಿದಳು :
 
"
 
ಎಂತಲೆ ಹೀಗೆ
 

 
" ನನ್ನ ಪತಿಯ ಶಕ್ತಿ-ಸಾಮರ್ಥ್ಯಗಳ ಅರಿವು ನಿನಗಿಲ್ಲ.
ಎಂತಲೆ ಹೀಗೆ
ಗಳುಹುತ್ತಿರುವೆ. ನನ್ನ ವ್ಯಾಮೋಹದಿಂದ ಜೀವಕ್ಕೆರವಾಗಬೇಡ. ರಾಮಚಂದ್ರ
 
ಬರುವ ಮುಂಚೆ ತೊಲಗಾಚೆ, "
 
. "