2023-03-15 15:35:38 by ambuda-bot
This page has not been fully proofread.
-- ಮಿಂಚಿನಬಳ್ಳಿ
ಮಾರೀಚನು ಸಾವಿಗೆ ಅಂಜದವನಲ್ಲ. ರಾವಣನ ಖಡ್ಗಕ್ಕೆ ಬಲಿಯಾ
ಗಲು ಮನಸ್ಸಿಲ್ಲದೆ, ಅವನು ಕೊನೆಗೆ ಮಾಯಾಮೃಗವಾಗಲು ಒಪ್ಪಿಕೊಂಡನು.
ರಾಮನ ಆಶ್ರಮದ ಬಳಿ ಒಂದು ಬಂಗಾರದ ಜಿಂಕೆ ಬಂತು; ಅದು
ಸೀತೆಯ ಕಣ್ಮುಂದೆ ಅತ್ತಿತ್ತ ಸುಳಿದಾಡಿತು. ಮೈಯೆಲ್ಲ ಬಂಗಾರದ ಚುಕ್ಕೆಗಳು.
ದೂರಕ್ಕೂ ತಳತಳಿಸುವ ಕೊಂಬುಗಳು, ಚಿಗುರೆಲೆಗಳ ನಡುವೆ ಜಿಗಿಯುವ ಈ
ಜಿಂಕ, ಸೀತೆಯ ಮನವನ್ನು ಸೆಳೆಯಿತು. ಮಾಯಾಮಾನುಷನಾದ ರಾಮ-
ಚಂದ್ರನ ಲೀಲೆಗೆ ತಕ್ಕಂತೆ ಸೀತೆಯೂ ಅಭಿನಯಿಸಿದಳು.
ದಂಡಕೆಯಿಂದ ಲಂಕೆಗೆ
"ಆರ್ಯಪುತ್ರ ! ಈ ಬಣ್ಣದ ಜಿಂಕೆಯನ್ನು ಆಡಿಸುವುದೆಂದರೆ ನನಗೆ
ಪ್ರೀತಿ, ಅದನ್ನು ಹಿಡಿದು ಕೊಡಲಾರೆಯಾ ? ಅದು ಜೀವಂತವಾಗಿ ದೊರೆಯ
ದಿದ್ದರೆ, ಅದರ ಬಣ್ಣದ ಚರ್ಮವಾದರೂ ನಮ್ಮ ಆಸನಕ್ಕೆ ಉಪಯೋಗವಾಗ
ಬೇಕು." ಎಂದು ಸೀತೆ ಒತ್ತಾಯಿಸಿದಳು.
ರಾಮಚಂದ್ರನು " ನಾನು ಬರುವ ವರೆಗೆ ಜೋಕೆಯಾಗಿರು" ಎಂದು
ಲಕ್ಷ್ಮಣನನ್ನು ಎಚ್ಚರಿಸಿ, ಧನುರ್ಧಾರಿಯಾಗಿ ಜಿಂಕೆಯ ಬೆನ್ನಟ್ಟಿದನು. ಮೃಗ
ರೂಪಿಯಾದ ಮಾರೀಚ ಆಶ್ರಮದಿಂದ ದೂರ-ಬಹುದೂರ ಜಿಗಿದನು. ಜೀವಂತ
ವಾಗಿ ಆ ಜಿಂಕೆಯನ್ನು ಹಿಡಿಯುವದು ಸಾಧ್ಯವಿಲ್ಲವೆಂದು ತಿಳಿದ ರಾಮಚಂದ್ರ
ಆ ಮಾಯಾಮೃಗದೆಡೆಗೆ ಒಂದು ಬಾಣವನ್ನೆಸೆದನು. ಪಾತಕಿಯಾದ ಮಾರೀಚ
ಪೆಟ್ಟು ತಿಂದು ನಿಜರೂಪವನ್ನು ತಾಳಿ ನೆಲಕ್ಕುರುಳಿದನು. ಅವನು ಕೊನೆಯು
ಸಿರು ಎಳೆಯುವಾಗ ನುಡಿದ ನುಡಿ "ಓ ಲಕ್ಷ್ಮಣಾ" ಎಂದು ಕಾಡಿನ ಮೂಲೆ
ಮೂಲೆಗಳಲ್ಲಿ ಮಾರ್ಮೊಳಗಿತು !
ಕೂಗು ಸೀತೆಗೂ ಕೇಳಿಸಿತು. ಅವಳು ಲಕ್ಷ್ಮಣನನ್ನು ಕರೆದು ನುಡಿದಳು:
"ಲಕ್ಷ್ಮಣ, ರಾಮಚಂದ್ರನ ಕೂಗಿನಂತೆ ಕೇಳಿಸುತ್ತಿದೆ ನೋಡು. ನನ್ನ
ನಾಥನಿಗೆ ಏನಾಯಿತೆಂದು ಬೇಗನೆ ತಿಳಿದುಕೊಂಡು ಬಾ ತಮ್ಮ, ಹೋಗು."
"ರಾಮಚಂದ್ರನಿಗೆ ಎಲ್ಲಿಯ ಭಯ ತಾಯಿ ? ಇದು ಯಾರದೋ
ರಾಕ್ಷಸರ ಮಾಯೆಯಿರಬೇಕು."
.
ಅದಕ್ಕೆ ಸೀತೆ ಕಠಿಣವಾಗಿ ಉತ್ತರಿಸಿದಳು;