This page has not been fully proofread.

ಸಂಗ್ರಹರಾಮಾಯಣ
 
"ಆ ರಾಮನು ನೋಡಲು ಬಲು ಚೆಲುವನು, ಅವನು ದಶರಥನ ಮಗ
ನಂತೆ. ಹದಿನಾಲ್ಕು ಸಾವಿರ ರಕ್ಕಸರನ್ನು ಅವನೊಬ್ಬನೆ ಕೊಂದನೆಂದಮೇಲೆ
ಅವನ ಶೌರ್ಯಕ್ಕೆ ಬೇರೆ ಸಾಕ್ಷಿ ಬೇಕೆ ? ಅವನಿಗೊಬ್ಬ ತಮ್ಮನಿದ್ದಾನೆ. ಅವನ
ಹೆಸರು ಲಕ್ಷ್ಮಣನಂತೆ. ನನ್ನ ಮೇರೆಗೆ ಕತ್ತಿಯಿಟ್ಟವನು ಅವನೆ ! ರಾಮನ
ಜತೆಗೆ ಅವನ ಮಡದಿಯೂ ಇದ್ದಾಳೆ. ಅವಳ ಹೆಸರು ಸೀತೆಯೆಂದು ಕೇಳಿದ್ದೇನೆ.
ಅಣ್ಣ, ನಿಜವಾಗಿ ಅವಳು ನಿನ್ನ ಅರಸಿಯಾಗಬೇಕಿತ್ತು. ಅಬ್ಬ ! ಅವಳೆಂಥ
ಸುಂದರಿ ! ಅವಳ ಕೈಸೋಂಕಿದಲ್ಲಿ ಅಮೃತದ ತೊರೆಹರಿದೀತು ! ಅಂಥ
ಸರ್ವಾಂಗ ಸುಂದರಿಯನ್ನು ನಾನೆಲ್ಲಿಯೂ ಕಂಡಿಲ್ಲ." ಹೀಗೆಂದು ಕ್ಷಣಕಾಲ
ರಾವಣನನ್ನೇ ದಿಟ್ಟಿಸಿ ಮಾತು ಮುಂದುವರಿಸಿದಳು. "ಎದ್ದೇಳು ಲಂಕೇಶ್ವರ,
ರಾಮನಿಂದ ಕಂಗಾಲಾದ ರಾಕ್ಷಸಕುಲವನ್ನು ಉಳಿಸು."
 
ಬಹುಹೊತ್ತು ಯೋಚಿಸಿದ ನಂತರ ರಾವಣನು ಒಂದು ನಿರ್ಣಯದ
ನೆಲೆಗೆ ಬಂದನು. ಒಡನೆ ರಥವೇರಿ ಸಮುದ್ರತೀರದ ಗೋಕರ್ಣ ಕ್ಷೇತ್ರಕ್ಕೆ
ಬಂದನು. ಅದು ಮಾರೀಚನಿರುವ ತಾಣ, ರಾವಣನನ್ನು ಕಂಡು ಮಾರೀಚನು
ಗೌರವದಿಂದ ಸತ್ಕರಿಸಿದನು. ರಾವಣನು ಬಂದ ಕಜ್ಜವನ್ನರುಹಿದನು:
 
"ಮಾರೀಚ, ಮನುಷ್ಯ ಮಾತ್ರನಾದ ರಾಮನಿಂದ ರಾಕ್ಷಸಕುಲದ ನಾಶ
ವಾಗುತ್ತಲಿದೆ. ಅವನಿಗೆ ಪ್ರತೀಕಾರ ಮಾಡುವದಕ್ಕಾಗಿ ಅವನ ಮಡದಿಯನ್ನು
ಅಪಹರಿಸಬೇಕೆಂದಿದ್ದೇನೆ. ಆ ಕಾರ್ಯದಲ್ಲಿ ನಿನ್ನ ಸಹಕಾರ ಅವಶ್ಯವಿದೆ.
ನೀನೊಂದು ಮಿಸುನಿಯ ಜಿಂಕೆಯಾಗಿ ಸೀತೆಯನ್ನು ಮರುಳುಗೊಳಿಸು. ರಾಮನು
ನಿನ್ನನ್ನು ಬೆನ್ನಟ್ಟಿಕೊಂಡು ಹೊರಟಾಗ ನಾನು ಸುಖವಾಗಿ ಸೀತೆಯನ್ನು
ಕೊಂಡೊಯ್ಯಬಹುದು."
 
ಮಾರೀಚನು ಒಮ್ಮೆಲೆ ದಿಗಿಲಾಗಿ ನುಡಿದನು:
 
T
 
"ರಾವಣ, ರಾಮನ ವಿಷಯ ನೀನರಿಯೆ, ಅವನ ಒಂದೇ ಒಂದು ಬಾಣ
ರಾಕ್ಷಸರ ಸಂತಾನವನ್ನೇ ನಿರ್ಮೂಲಗೊಳಿಸೀತು. ವಿಶ್ವಾಮಿತ್ರನ ಆಶ್ರಮದಲ್ಲಿ
ಅವನ ಬಾಣದ ರುಚಿಯನ್ನು ಕಂಡವನು ನಾನು. ಲಂಕೇಶ್ವರ, ಬದುಕುವ
ಬಯಕೆಯಿದ್ದರೆ ರಾಮನ ಸುದ್ದಿಗೆ ಹೋಗದಿರಬೇಕು."
 
"ನೀನು ರಾಮನ ಕಡೆಯ ದೂತನಂತೆ ನುಡಿಯುತ್ತಿರುವೆ. ನನ್ನ ಆಜ್ಞೆ
ಯನ್ನು ಮೀರಿ ನೀನು ಬದುಕಿರುವುದು ಸಾಧ್ಯವಿಲ್ಲ." ಎಂದವನೇ ರಾವಣನು
ಒರೆಯಿಂದ ಕತ್ತಿಯನ್ನೆಳೆದನು.