This page has been fully proofread once and needs a second look.

ಸಂಗ್ರಹರಾಮಾಯಣ
 
ಆಹುತಿಯಾಯಿತು. ರಾಮನ ಎಂಟು ಬಾಣಗಳು ಆ ರಕ್ಕಸನನ್ನು ಗಾಸಿ

ಗೊಳಿಸಿದವು. ಅವನು ದೊಡ್ಡ ಕಬ್ಬಿಣದ ಸಲಾಕೆಯೊಂದನ್ನೆತ್ತಿಕೊಂಡು

ರಾಮನೆಡೆಗೆ ಧಾವಿಸಿದನು. ಆಗ ರಾಮಚಂದ್ರನು ಲೀಲಾಜಾಲವಾಗಿ ಅವನ
ಎರಡೂ ತೋಳುಗಳನ್ನು ಕತ್ತರಿಸಿ ಹಾಕಿದನು. ದೇವತೆಗಳು 'ಜಯಜಯ'
ಎಂದು ಕೊಂಡಾಡಿದರು. ಆಕಾಶದಿಂದ ಹೂಮಳೆ ಸುರಿಯಿತು.
 
೯೫
 

 
ಮಹಾಕಪಾಲ, ಸ್ಕೂಥೂಲಾಕ್ಷ, ಪ್ರಮಾಧಿಥಿಗಳೂ ರಾಮಬಾಣದಿಂದ ಹತ

ರಾದರು. ಹದಿನಾಲ್ಕು ಸಾವಿರ ರಾಕ್ಷಸರೂ ಜೀವ ಕಳೆದುಕೊಂಡರು!

 
ಕೊನೆಯದಾಗಿ ಖರನೇ ರಾಮನೊಡನೆ ಯುದ್ಧಕ್ಕೆ ಸಿದ್ಧನಾದನು.
 

 
ಬಂಗಾರದ ಜಿಂಕೆ ಬಂತು
 

 
ಆಗ ತ್ರಿಶಿರನು ಖರನನ್ನು ತಡೆದು ತಾನು ಮುಂದೆ ಬಂದು ಸಿಂಹ- ನಾದ
ಗೈದನು. ರಾಮಚಂದ್ರನ ಧನುರ್ಘೋಷ ಅದಕ್ಕೆ ಪ್ರತ್ಯುತ್ತರ- ವಿತ್ತಿತು. ರಾಮನ
ಮೇಲೆ ತ್ರಿಶಿರನು ಮೂರು ಬಾಣಗಳನ್ನೆಸೆದರೆ, ತ್ರಿಶಿರನಮೇಲೆ ರಾಮನು ಹದಿ
ನಾಲ್ಕು ಬಾಣಗಳನ್ನೆಸೆದನು. ಸಾರಥಿ, ಕುದುರೆ, ಧ್ವಜ ಎಲ್ಲವೂ ಮುರಿದು
ಬಿತ್ತು. ಮೂರು ಬಾಣಗಳಿಂದ ತ್ರಿಶಿರನ ಮೂರು ತಲೆಗಳೂ ಕೆಳಗುರುಳಿ
ದವು.
 

 
ರಾಕ್ಷಸರ ಕುಲವೇ ನಾಶವಾದುದನ್ನು ಕಂಡು ಕೋಪಗೊಂಡ ಖರನು

ರಾಮನನ್ನಿದಿರ್ಗೊಂಡು ಬಾಣಗಳಿಂದ ಬಾನನ್ನು ತುಂಬಿದನು. ರಾಮನ

ಬಾಣ ಬಾನನ್ನು ಮತ್ತೆ ಸ್ವಚ್ಛಗೊಳಿಸಿತು. ದಿಕ್ಕುಗಳಲ್ಲೆಲ್ಲ ಇವರೀರ್ವರ ಬಾಣ
ಗಳೇ ತುಂಬಿಕೊಂಡವು. ಖರನು ಏಳು ಬಾಣಗಳಿಂದ ರಾಮನ ಬಿಲ್ಲನ್ನೂ
ಕವಚವನ್ನೂ ಭೇದಿಸಿದನು. ಈಗ ರಾಮನು ವೈಷ್ಣವ ಧನುಸ್ಸನ್ನು ಕೈಗೆತ್ತಿ
ಕೊಂಡು ಬರಿಮೈಯಿಂದ ಯುದ್ಧ ಮಾಡಿದನು. ಖರನ ಧ್ವಜ ಮುರಿಯಿತು.
ರಾಮನು ಒಂದು ತೀಕ್ಷ್ಮವಾದ ಬಾಣವನ್ನು ಅವನ ಮೇಲೆ ಎಸೆಯುತ್ತ
ನುಡಿದನು :
 

 
"ದಂಡಕಾರಣ್ಯದ ಸಾಧು ತಪಸಿಗಳಿಗೆ ಪೀಡೆ ಕೊಟ್ಟುದಕ್ಕೆ ನಿನಗಿದು
 
ಫಲ."
 
ಖರನು ಅದಕ್ಕೆ ಪ್ರತಿಯಾಗಿ ಒಂದು ಗದೆಯನ್ನೆಸೆದು ನುಡಿದನು:
 
ಫಲ.