This page has been fully proofread once and needs a second look.

* ಮಿಂಚಿನಬಳ್ಳಿ
 
ರಾಮಚಂದ್ರನ ಒಂದೊಂದು ಬಾಣವೂ ಒಬ್ಬೊಬ್ಬ ರಾಕ್ಷಸನನ್ನು

ನೆಲದಲ್ಲಿ ಮಲಗಿಸಿತು ! ಹತಾಶಳಾದ ಶೂರ್ಪಣಖೆ ಖರನೆಡೆಗೆ ಧಾವಿಸಿ

ಬೊಬ್ಬಿಟ್ಟಳು :
 

 
" ಓ ನನ್ನ ಸೋದರ, ನೀನೊಬ್ಬ ನಪುಂಸಕ. ಮನುಷ್ಯರಿಬ್ಬರಿಗೆ ಹೆದರಿ
ಗುಹೆಯೊಳಗೆ ಅವಿತಿರುವ ನಿನ್ನ ಷಂಡತನಕ್ಕೆ ಬೆಂಕಿಬೀಳಲಿ."
 
೯೪
 

 
ಸೋದರಿಯ ಮಾತಿನಿಂದ ಖರನು ಉದ್ವೇಜಿತನಾಗಿ ಹದಿನಾಲ್ಕು ಸಾವಿರ
ರಾಕ್ಷಸರನ್ನು ಯುದ್ಧಕ್ಕಾಗಿ ಕಳುಹಿದನು. ಪರ್ವತ ಶಿಖರ- ದಂತಿರುವ ರಥ
ವನ್ನೇರಿ ತಾನೂ ದೂಷಣನೊಡನೆ ಹೊರಟನು.
 

 
ಇತ್ತ ರಾಮನು ಲಕ್ಷ್ಮಣನನ್ನು ಕರೆದು ನುಡಿದನು :
 
66
 

 
" ಸೌಮಿತ್ರಿ, ನನ್ನ ಬಲದ ತೋಳು ಅದಿರುತ್ತಿದೆ. ಏನೋ ದೊಡ್ಡ
-
ದೊಂದು ಕಲಹ ಸಂಭವಿಸುವಂತಿದೆ. ನೀನೂ ಸೀತೆಯೂ ಆ ಗುಹೆ- ಯಲ್ಲಿ
ಅವಿತುಕೊಳ್ಳಿ."
 

 
ಲಕ್ಷ್ಮಣನು ಹಾಗೆಯೇ ಮಾಡಿದನು. ರಾಮನು ಯುದ್ಧಕ್ಕೆ ಅಣಿ- ಯಾಗಿ
ನಿಂತನು. ವೇಗವಾಗಿ ಮುನ್ನುಗ್ಗುತ್ತಿದ್ದ ರಾಕ್ಷಸಸೇನೆ ಎದುರು ನಿಂತಿರುವ
ರಾಮನನ್ನು ಕಂಡು ಒಮ್ಮಿಂದೊಮ್ಮೆಲೆ ಸ್ತಬ್ಧವಾಯಿತು. ಸಿಟ್ಟಿನಿಂದ ಖರ
ಮುಂದೆ ಮುಂದೆ ಹೋಗುತ್ತಿದ್ದ. ಶೈಶ್ಯೇನಗಾಮಿ, ಪೃಥುಗ್ರೀವ, ಯಜ್ಞಶತ್ರು,
ಮಹಾವಿಷ, ದುರ್ಜಯ, ಕರವೀರಾಕ್ಷ, ಪರುಷ, ಕಾಲಕಾರ್ಮುಕ, ಮೇಘ
ಮಾಲಿ, ಮಹಾಬಾಹು, ಮಹಾಸ್ಯ, ಲೋಹಿತಾಂ- ಬರ ಎಂಬ ಹನ್ನೆರಡು ಮಂದಿ
ಮಹಾಬಲಿಷ್ಠರಾದ ರಕ್ಕಸರು ಸೇನೆಗೆ ಹುರಿದುಂಬಿಸುತ್ತ ಮುನ್ನುಗ್ಗುತ್ತಿದ್ದರು.
ಮಹಾಕಪಾಲ, ಸ್ಕೂಥೂಲಾಕ್ಷ, ಪ್ರಮಾಥಿ, ತ್ರಿಶಿರ ಈ ನಾಲ್ವರು ಸೇನೆಯ
ಮುಂಬದಿಯಲ್ಲಿ ದೂಷಣ- ನೊಡನೆ ಬರುತ್ತಿದ್ದರು.
 

 
ರಾಮಚಂದ್ರನ ಧನುಷ್ಟಂಟೇಂಕಾರ ರಾಕ್ಷಸರ ಕರ್ಣವನ್ನು ಭೇದಿಸಿತು.

ದೇವತೆಗಳೂ ಋಷಿಗಳೂ ಈ ಮಹಾಯುದ್ಧವನ್ನು ಕಾಣಲು ಆಕಾಶದಲ್ಲಿ

ಮುತ್ತಿದರು.
 

 
ಏಕಾಕಿಯಾದ ರಾಮಭದ್ರನೊಡನೆ ರಾಕ್ಷಸಸೇನೆ ಕಾದತೊಡಗಿತು.

ರಾಮನ ಬಾಣಗಳು ದೂಷಣನ ಧ್ವಜವನ್ನೂ ಕುದುರೆಗಳನ್ನೂ ಸಾರಥಿ

ಯನ್ನೂ ಕತ್ತರಿಸಿದವು. ದೂಷಣನು ಎಸೆದ ಗದೆಯೂ ರಾಮಬಾಣಕ್ಕೆ