This page has not been fully proofread.

* ಮಿಂಚಿನಬಳ್ಳಿ
 
ರಾಮಚಂದ್ರನ ಒಂದೊಂದು ಬಾಣವೂ ಒಬ್ಬೊಬ್ಬ ರಾಕ್ಷಸನನ್ನು
ನೆಲದಲ್ಲಿ ಮಲಗಿಸಿತು ! ಹತಾಶಳಾದ ಶೂರ್ಪಣಖೆ ಖರನೆಡೆಗೆ ಧಾವಿಸಿ
ಬೊಬ್ಬಿಟ್ಟಳು :
 
" ಓ ನನ್ನ ಸೋದರ, ನೀನೊಬ್ಬ ನಪುಂಸಕ. ಮನುಷ್ಯರಿಬ್ಬರಿಗೆ ಹೆದರಿ
ಗುಹೆಯೊಳಗೆ ಅವಿತಿರುವ ನಿನ್ನ ಷಂಡತನಕ್ಕೆ ಬೆಂಕಿಬೀಳಲಿ."
 
೯೪
 
ಸೋದರಿಯ ಮಾತಿನಿಂದ ಖರನು ಉದ್ವೇಜಿತನಾಗಿ ಹದಿನಾಲ್ಕು ಸಾವಿರ
ರಾಕ್ಷಸರನ್ನು ಯುದ್ಧಕ್ಕಾಗಿ ಕಳುಹಿದನು. ಪರ್ವತ ಶಿಖರದಂತಿರುವ ರಥ
ವನ್ನೇರಿ ತಾನೂ ದೂಷಣನೊಡನೆ ಹೊರಟನು.
 
ಇತ್ತ ರಾಮನು ಲಕ್ಷ್ಮಣನನ್ನು ಕರೆದು ನುಡಿದನು :
 
66
 
" ಸೌಮಿತ್ರಿ, ನನ್ನ ಬಲದ ತೋಳು ಅದಿರುತ್ತಿದೆ. ಏನೋ ದೊಡ್ಡ
ದೊಂದು ಕಲಹ ಸಂಭವಿಸುವಂತಿದೆ. ನೀನೂ ಸೀತೆಯೂ ಆ ಗುಹೆಯಲ್ಲಿ
ಅವಿತುಕೊಳ್ಳಿ."
 
ಲಕ್ಷ್ಮಣನು ಹಾಗೆಯೇ ಮಾಡಿದನು. ರಾಮನು ಯುದ್ಧಕ್ಕೆ ಅಣಿಯಾಗಿ
ನಿಂತನು. ವೇಗವಾಗಿ ಮುನ್ನುಗ್ಗುತ್ತಿದ್ದ ರಾಕ್ಷಸಸೇನೆ ಎದುರು ನಿಂತಿರುವ
ರಾಮನನ್ನು ಕಂಡು ಒಮ್ಮಿಂದೊಮ್ಮೆಲೆ ಸ್ತಬ್ಧವಾಯಿತು. ಸಿಟ್ಟಿನಿಂದ ಖರ
ಮುಂದೆ ಮುಂದೆ ಹೋಗುತ್ತಿದ್ದ. ಶೈನಗಾಮಿ, ಪೃಥುಗ್ರೀವ, ಯಜ್ಞಶತ್ರು,
ಮಹಾವಿಷ, ದುರ್ಜಯ, ಕರವೀರಾಕ್ಷ, ಪರುಷ, ಕಾಲಕಾರ್ಮುಕ, ಮೇಘ
ಮಾಲಿ, ಮಹಾಬಾಹು, ಮಹಾಸ್ಯ, ಲೋಹಿತಾಂಬರ ಎಂಬ ಹನ್ನೆರಡು ಮಂದಿ
ಮಹಾಬಲಿಷ್ಠರಾದ ರಕ್ಕಸರು ಸೇನೆಗೆ ಹುರಿದುಂಬಿಸುತ್ತ ಮುನ್ನುಗ್ಗುತ್ತಿದ್ದರು.
ಮಹಾಕಪಾಲ, ಸ್ಕೂಲಾಕ್ಷ, ಪ್ರಮಾಥಿ, ತ್ರಿಶಿರ ಈ ನಾಲ್ವರು ಸೇನೆಯ
ಮುಂಬದಿಯಲ್ಲಿ ದೂಷಣನೊಡನೆ ಬರುತ್ತಿದ್ದರು.
 
ರಾಮಚಂದ್ರನ ಧನುಷ್ಟಂಕಾರ ರಾಕ್ಷಸರ ಕರ್ಣವನ್ನು ಭೇದಿಸಿತು.
ದೇವತೆಗಳೂ ಋಷಿಗಳೂ ಈ ಮಹಾಯುದ್ಧವನ್ನು ಕಾಣಲು ಆಕಾಶದಲ್ಲಿ
ಮುತ್ತಿದರು.
 
ಏಕಾಕಿಯಾದ ರಾಮಭದ್ರನೊಡನೆ ರಾಕ್ಷಸಸೇನೆ ಕಾದತೊಡಗಿತು.
ರಾಮನ ಬಾಣಗಳು ದೂಷಣನ ಧ್ವಜವನ್ನೂ ಕುದುರೆಗಳನ್ನೂ ಸಾರಥಿ
ಯನ್ನೂ ಕತ್ತರಿಸಿದವು. ದೂಷಣನು ಎಸೆದ ಗದೆಯೂ ರಾಮಬಾಣಕ್ಕೆ