This page has not been fully proofread.

ಮಿಂಚಿನಬಳ್ಳಿ
 
"ಜನರಿಗೆ ಜಾಡ್ಯ ಬರಿಸುವ ಹಿಮಸಂತತಿ ಎಲ್ಲೆಡೆಯೂ ತುಂಬಿಕೊಂಡಿದೆ.
ಆದರೆ ನಿನ್ನ ಚರಣವನ್ನಾಶ್ರಯಿಸಿದ ನನಗೆ ಅದರ ಭಯವಿಲ್ಲ. ಅಲ್ಲಿ ಅಯೋಧ್ಯೆ
ಯಲ್ಲಿ ಭರತನೂ ಈಗ ಸ್ನಾನಕ್ಕಾಗಿ ಸರಯುವಿನೆಡೆಗೆ ಹೋಗುತ್ತಿರಬಹುದು.
ಪಾಪ ! ನಿನಗಾಗಿ ಅವನು ನಾಡಿನಲ್ಲೇ ಕಾಡಿನ ಬಾಳನ್ನು ಬಾಳುತ್ತಿದ್ದಾನೆ.
ಭರತನ ಬಾಳು ಧನ್ಯವಾಯಿತು. ಆದರೆ ಆ ಕೈಕೇಯಿ ! ದಶರಥನ ಧರ್ಮಪತ್ನಿ-
ಯಾಗಿ ಭರತನಂಥ ಮಗನನ್ನು ಪಡೆದು ಅವಳಿಗೆ ಇಂಥ ಬುದ್ಧಿ ಹೇಗೆ
ಬಂತೋ !"
 
ವಿ
 
1
 
ಆಗ ರಾಮಚಂದ್ರ ಸಂತೈಸಿದನು:
 
"ಲಕ್ಷಣ, ನಾವು ಬಂದುದು ರಾಕ್ಷಸರ ವಧೆಗಾಗಿ, ನೆನಪಿರಲಿ. ಅದಕ್ಕೆ
ಕೈಕೇಯಿ ನಿಮಿತ್ತ ಮಾತ್ರ."
 
ಪ್ರಾತಃಕರ್ಮಗಳನ್ನು ತೀರಿಸಿ ರಾಮಚಂದ್ರ ಸೀತೆಯೊಡನೆ ಕುಳಿತಿದ್ದ.
ಆಗ ರಾವಣನ ತಂಗಿ ಶೂರ್ಪಣಖೆ ಅವನ ಪರ್ಣಶಾಲೆಯೆಡೆಗೆ ಬಂದಳು.
ಪ್ರಮಾದದಿಂದ ಹಿಂದೆ ರಾವಣನು ಅವಳ ಗಂಡನನ್ನು ಕೊಂದಿದ್ದ. ಅಂದಿನಿಂದ
ಅವಳು ತನ್ನ ಬಯಕೆಯನ್ನು ನೀಗಿಸಬಲ್ಲ ಪುರುಷನಿಗಾಗಿ ಹುಡುಕಾಡುತ್ತಿದ್ದಳು.
ರಾಮನ ರೂಪ ಅವಳ ಮನಸ್ಸನ್ನು ಸೆಳೆಯಿತು. ಅವಳು ರಾಮನ ಬಳಿ ಪ್ರೇಮ
ಭಿಕ್ಷೆಯನ್ನು ಬೇಡಿದಳು :
 
"ಓ ಸುಂದರನಾದ ಯುವಕನೆ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನಗೆ
ಅನುರೂಪಳಾದ ನನ್ನನ್ನು ವರಿಸು. ನಾನು ಯಾರು ಗೊತ್ತೆ ? ನೀನು ರಾವ-
ಈಶ್ವರನ ಹೆಸರು ಕೇಳಿರಬಹುದಲ್ಲ ! ಅವನ ಹೆಸರನ್ನು ಕೇಳದವರುಂಟೆ ? ಆ
ಲಂಕೇಶನ ತಂಗಿ ನಾನು. ಈ ದುರ್ಬಲೆ ಸೀತೆಯನ್ನು ತ್ಯಜಿಸಿಬಿಡು."
 
ರಾಮನು ಮೋಜಿಗಾಗಿ ನುಡಿದನು :
 
"ಛೇ, ಛೇ, ಅದು ಹೇಗೆ ಸಾಧ್ಯ ? ನನಗೆ ಈ ಸೀತೆಯೆಂದರೆ ಎಲ್ಲಿಲ್ಲದ
ಪ್ರೀತಿ, ನಿನಗೆ ಯೋಗ್ಯನಾದ ವರನೆಂದರೆ ನನ್ನ ತಮ್ಮನೇ ಸರಿ. ಅವನಿಗೆ
ಜತೆಯಲ್ಲಿ ಹೆಂಡತಿಯೂ ಇಲ್ಲ. ನೀನು ನನ್ನ ನೆಗೆಣ್ಣಿಯಾಗು."
 
ರಾಕ್ಷಸಿ ಲಕ್ಷ್ಮಣನೆಡೆಗೆ ಬಂದು ನುಡಿದಳು :
 
"ಓ ತರುಣನೆ, ನೀನೂ ನನ್ನಂತೆಯೆ ಒಬ್ಬಂಟಿಗನಾಗಿರುವೆ. ಇಂಥ
ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಏಕಾಕಿಯಾಗಿರುವುದು ತುಂಬ ಕಷ್ಟ, ಹೀಗಿರು
ವಾಗ ನೀನು ನನ್ನನ್ನೇಕೆ ಮದುವೆಯಾಗಬಾರದು?"