2023-03-20 12:13:43 by jayusudindra
This page has been fully proofread once and needs a second look.
೯೧
"ರಾಮಚಂದ್ರ, ನಾನು ದಶರಥನ ಹಳೆಯ ಗೆಳೆಯ. ನನ್ನ ಹೆಸರು
ಜಟಾಯು ಎಂದು. ನಾನು ವಿನತಾಪುತ್ರನಾದ ಅರುಣನ ಮಗ."
ಜಟಾಯುವಿನ ಜತೆಗೆ ರಾಮನು ಗೋದಾವರಿಯ ತಡಿಯಲ್ಲಿರುವ
ಪಂಚವಟಿಯನ್ನು ಪ್ರವೇಶಿಸಿದನು. ಪಂಚವಟಿ ನಿಸರ್ಗ ರಮಣಿಯ ನೆಲೆವೀಡು.
ಕೋಗಿಲೆಗಳು ರಾಮನ ಗುಣಗಾನ ಮಾಡುತ್ತಿದ್ದವು ! ಕಾಡಿಗೆ ಕಾಡೇ
ಸಂತಸದಿಂದ ನಲೆದಾಡುತ್ತಿತ್ತು. ಜಡದಲ್ಲೂ ಚೈತನ್ಯ ತುಂಬಿತ್ತು. ಪ್ರಕೃತಿ
ದೇವಿಯ ಸೌಂದರ್ಯಪತಾಕೆ ಆ ಬನದಲ್ಲಿ ಹಾರಾಡುತ್ತಿತ್ತು.
ರಾಮಚಂದ್ರನಿಗೆ ಈ ತಾಣ ತುಂಬ ಹಿತವಾಗಿ ಕಂಡಿತು. ಅಲ್ಲಿ ವಾಸಕ್ಕೆ
ಯೋಗ್ಯವಾದ ಎಲೆ
ಮೂಗು ಕತ್ತರಿಸಿ ಮುಹೂರ್ತ ಮಾಡಿದರು
ವನವಾಸದ ಅವಧಿಯಲ್ಲಿ ಸುಮಾರು ಹದಿಮೂರು ವರ್ಷಗಳು ಸಂದವು.