This page has not been fully proofread.

ಮಿಂಚಿನಬಳ್ಳಿ
 
ವಿರಾಧನ ದೇಹವನ್ನು ಲಕ್ಷ್ಮಣನು ಒಂದು ಬಿಲದೊಳಗೆ ತುರುಕಿದನು.
ಅನಂತರ ಮೂವರೂ ಮುಂದೆ ಸಾಗಿದರು. ದಾರಿಯುದ್ದಕ್ಕೂ ಮುನಿಗಳು
ರಾವಣನ ಪಡೆಯ ಪೀಡೆಗಳಿಂದ ತಮ್ಮನ್ನು ಉಳಿಸುವಂತೆ ಬೇಡಿಕೊಳ್ಳುತ್ತಿದ್ದರು.
ಅವರೆಲ್ಲರಿಗೂ ಅಭಯವನ್ನಿತ್ತು ರಾಮಚಂದ್ರ ಮುಂದೆ ಸಾಗುತ್ತಲಿದ್ದ. ದಾರಿ
ಯಲ್ಲಿ ಸುತೀಕ್ಷ್ಯ ಮಹರ್ಷಿಯ ಆಶ್ರಮ ಎದುರಾಯಿತು.
ಎಲ್ಲರೂ ಅಲ್ಲಿ ತಂಗಿದ್ದು, ಮುಂದೆ ಪಯಣವನ್ನು ಬೆಳೆಸಿದರು.
 
ಒಂದು ರಾತ್ರಿ
 
೯೦
 
ದಾರಿಯಲ್ಲಿ ಹಾಸ್ಯಕ್ಕಾಗಿ ಸೀತೆ ರಾಮಚಂದ್ರನನ್ನು ಪ್ರಶ್ನಿಸಿದಳು :
"ರಾಮಭದ್ರ, ರಾಜ್ಯವನ್ನು ತ್ಯಾಗಮಾಡಿ, ಮುನಿಗಳಂತೆ ಬಾಳುವ ನಿನಗೆ
ಈ ರಾಕ್ಷಸರನ್ನು ಕೊಲ್ಲುವ ಗೋಜೇಕೆ ? ತಾಪಸ ಜೀವನಕ್ಕೆ ಅದು ವಿರುದ್ಧ
ವಲ್ಲವೆ ? "
 
ರಾಮಚಂದ್ರನೂ ಅಷ್ಟೇ ಮೃದುವಾಗಿ ಉತ್ತರಿಸಿದನು :
 
ಜಾನಕಿ, ಬೆಂಕಿಗೆ ಸುಡುವುದು ಹೇಗೆ ಧರ್ಮವೊ ಹಾಗೆ ದುಷ್ಟನಿಗ್ರಹ
ಕ್ಷತ್ರಿಯರ ಸ್ವಭಾವ. ಅದಕ್ಕೆ ರಾಜತ್ವದ-ಸಿಂಹಾಸನದ ಮುದ್ರೆ ಬೇಕಾಗಿಲ್ಲ."
 
ಎದುರಿನಲ್ಲಿ ರಾಮ, ಮಧ್ಯದಲ್ಲಿ ಸೀತೆ, ಅವಳ ಹಿಂದೆ ಲಕ್ಷ್ಮಣ, ಅವನ
ಹಿಂದೆ ಮುನಿಗಳ ಗುಂಪು, ಹೀಗೆ ಸಾಗಿತ್ತು ಪಯಣ. ಸಾಯಂಕಾಲದ
ಹೊತ್ತಿಗೆ ಎಲ್ಲರೂ ಪಂಚಸರಸ್ಸು ಎಂಬ ತಟಾಗದ ಬಳಿಗೆ ಬಂದರು. ಅದೊಂದು
ವಿಚಿತ್ರವಾದ ಕೆರೆ. ಐದು ಜನ ಅಪ್ಸರೆಯರೊಡನೆ ಮದಕರ್ಣಿ ಎಂಬ ಮುನಿ
ಅದರಲ್ಲಿ ವಾಸವಾಗಿದ್ದನು. ಅಪ್ಸರೆಯರ ಗಾನದ ಹೊನಲು ಯಾವಾಗಲೂ
ಕೆರೆಯಮೇಲೆ ಕೇಳಬರುತ್ತಿತ್ತು. ರಾಮಚಂದ್ರ ಅದನ್ನು
ಕಂಡು ಅಚ್ಚರಿ
ಗೊಂಡನು.
 
£ €
 
ಹೀಗೆ ಒಂದೊಂದೇ ಆಶ್ರಮದಲ್ಲಿ ಒಂದು ತಿಂಗಳು, ಎರಡು ತಿಂಗಳು
ವಾಸಿಸುತ್ತ ಸುಖವಾಗಿ ಕಾಲವನ್ನು ಕಳೆಯುತ್ತಿದ್ದ ಅವರಿಗೆ ತಮ್ಮ ವನವಾಸದ
ಅವಧಿಯ ಒಂಬತ್ತು ವರ್ಷಗಳು ಬಹು ಬೇಗನೆ ಕಳೆದುಹೋದವು.
 
ಒಂದು ದಿನ ರಾಮಚಂದ್ರ ಅಗತ್ಯರ ಆಶ್ರಮಕ್ಕೆ ಬಂದನು. ಅಗಸ್ಯರಿಗೆ
ಜಗತ್ಪಭು ತನ್ನ ಎಲೆವನೆಗೆ ಬಂದುದು ಎಲ್ಲಿಲ್ಲದ ಸಂತೋಷ. 'ಅವರು ಸೀತಾ,
ರಾಮನನ್ನೂ ಲಕ್ಷ್ಮಣನನ್ನೂ ಪರಿಪರಿಯಾಗಿ ಸತ್ಕರಿಸಿದರು. ಇಂದ್ರನು ಅವರ
ಬಳಿ ಇಟ್ಟಿದ್ದ ವೈಷ್ಣವ ಧನುಸ್ಸನ್ನೂ ಬಾಣ-ಬತ್ತಳಿಕೆಗಳನ್ನೂ ರಾಮನಿಗೆ ಅಪಿಸಿ