This page has been fully proofread once and needs a second look.

ಸಂಗ್ರಹರಾಮಾಯಣ
 
ಭಗವದ್ದರ್ಶನವನ್ನು ಪಡೆದ ದಂಡಕಾರಣ್ಯದ ಮುನಿಗಳ ಸಂತಸಕ್ಕೆ
ಪಾರವೇ ಇಲ್ಲ.
ಎಲ್ಲ ಮುನಿಗಳೂ ಭಕ್ತಿಗದ್ಗದರಾಗಿ ರಾಮಚಂದ್ರನನ್ನು
ಪೂಜಿಸಿದರು. ರಾವಣನಿಂದ ಜಗತ್ತನ್ನು ಪಾರು- ಗಾಣಿಸು ಎಂದು ಬೇಡಿ
ಕೊಂಡರು.
 
SSF
 

 
ಒಂದುದಿನ ರಾಮಚಂದ್ರ ಶರಭಂಗಾಶ್ರಮಕ್ಕೆ ತೆರಳಿದನು. ರಾಮನ

ದರ್ಶನಕ್ಕಾಗಿಯೇ ಜೀವಹಿಡಿದಿದ್ದ ಜೀರ್ಣಾಂಗನಾದ ಆ ಮುನಿಯು ರಾಮ-
ಚಂದ್ರನನ್ನು ಕಂಡು ಪರಮಾನಂದದಿಂದ ಒಂದು ಕ್ಷಣ ತನ್ನ ಆಶ್ರಮದಲ್ಲಿ ನಿಲ್ಲು
ವಂತೆ ವಿಜ್ಞಾಪಿಸಿಕೊಂಡನು. ಭಕ್ತವತ್ಸಲನಾದ ರಾಮನು ಒಪ್ಪಿದನು.
ಅವನೆದುರಿನಲ್ಲಿ ಈ ಮುನಿಯು ತನ್ನ ಜೀರ್ಣ ದೇಹವನ್ನು, ಮಂತ್ರಪೂತವಾದ
ಹವಿಸ್ಸಿನಂತೆ ಅಗ್ನಿಗರ್ಪಿಸಿದನು. ಶರಭಂಗನ ಆತ್ಮ ಪರಮ ಪದವಿಯನ್ನು
 
ಸೇರಿತು.
 

 
ರಾಮಚಂದ್ರ ಸೀತಾ-ಸೌಮಿತ್ರಿಯರೊಡನೆ ಮತ್ತೊಂದು ದಟ್ಟಡವಿ- ಯನ್ನು
ಹೊಕ್ಕನು. ಅಲ್ಲಿ ಇವರಿಗೆ ವಿರಾಧನು ಕಾಣಿಸಿಕೊಂಡನು. ಶೂಲ ಧಾರಿಯಾದ
ಈ ರಾಕ್ಷಸನು ಸೀತೆಯನ್ನು ಎತ್ತಿಕೊಂಡು ಆಕಾಶಕ್ಕೆ ನೆಗೆದನು. ಇದನ್ನು
ಕಂಡ ಲಕ್ಷ್ಮಣನು ಅವನೆಡೆಗೆ ಬಾಣಗಳನ್ನೆಸೆದನು. ಅದಕ್ಕೆ ಪ್ರತಿಯಾಗಿ
ರಾಕ್ಷಸನು ತನ್ನ ಶೂಲವನ್ನೇ ಲಕ್ಷ್ಮಣನ ಮೇಲೆ ಎಸೆದನು. ಆಗ ರಾಮಚಂದ್ರ
ತನ್ನೆರಡು ಬಾಣಗಳಿಂದ ಆ ಶೂಲವನ್ನು ತುಂಡರಿಸಿದನು. ಆಗ ವಿರಾಧ
ರಾಕ್ಷಸನು ರಾಮ-ಲಕ್ಷ್ಮಣರಿಬ್ಬರನ್ನೂ ತನ್ನ ಹೆಗಲ ಮೇಲಿರಿಸಿಕೊಂಡು ಹೋಗ
ತೊಡಗಿದನು. ರಾಮ-ಲಕ್ಷ್ಮಣ ರಿಗೆ ಸರಿಯಾದ ಅವಕಾಶ ದೊರೆತಂತಾಯಿತು.
ಅವರು ತಮ್ಮ ಖಡ್ಗಗಳಿಂದ ಅವನ ಎರಡೂ ತೋಳುಗಳನ್ನು ಕತ್ತರಿಸಿದರು.
 

 
ರಾಮನ ಬಾಣದ ಪೆಟ್ಟಿನಿಂದ ವಿರಾಧನ ಪ್ರಾಣಪಕ್ಷಿ ಹಾರುವುದ- ರಲ್ಲಿತ್ತು.
ಅಷ್ಟರಲ್ಲಿ ಅವನು ಕೈಮುಗಿದು ನುಡಿದನು:
 
66
 
*

 
"
ರಾಮಚಂದ್ರ! ನೀನು ಭಗವದ್ವಿಭೂತಿ ಎಂಬುದನ್ನು ಬಲ್ಲೆ. ನಾನು

ನಿನ್ನ ದಾಸನಾದ ತುಂಬುರು. ಒಮ್ಮೆ ರ್ವಶಿಯ ಸಂಗಮಾಡಿದ್ದಕ್ಕಾಗಿ

ಕುಬೇರ ನನಗೆ ಈ ಶಾಪವಿತ್ತನು. ಅದರಿಂದ ಈ ರಾಕ್ಷಸನ ಜನ್ಮ ನನಗೆ

ಬಂತು. ನಿನ್ನ ಪ್ರಸಾದದಿಂದ ಅದು ಪರಿಹಾರವಾದಂತಾಯಿತು. ನಿನಗೆ

ಜಯವಾಗಲಿ,. "