This page has not been fully proofread.

ಸಂಗ್ರಹರಾಮಾಯಣ
 
ಭಗವದರ್ಶನವನ್ನು ಪಡೆದ ದಂಡಕಾರಣ್ಯದ ಮುನಿಗಳ ಸಂತಸಕ್ಕೆ
ಪಾರವೇ ಇಲ್ಲ.
ಎಲ್ಲ ಮುನಿಗಳೂ ಭಕ್ತಿಗದ್ಗದರಾಗಿ ರಾಮಚಂದ್ರನನ್ನು
ಪೂಜಿಸಿದರು. ರಾವಣನಿಂದ ಜಗತ್ತನ್ನು ಪಾರುಗಾಣಿಸು ಎಂದು ಬೇಡಿ
ಕೊಂಡರು.
 
SSF
 
ಒಂದುದಿನ ರಾಮಚಂದ್ರ ಶರಭಂಗಾಶ್ರಮಕ್ಕೆ ತೆರಳಿದನು. ರಾಮನ
ದರ್ಶನಕ್ಕಾಗಿಯೇ ಜೀವಹಿಡಿದಿದ್ದ ಜೀರ್ಣಾಂಗನಾದ ಆ ಮುನಿಯು ರಾಮ-
ಚಂದ್ರನನ್ನು ಕಂಡು ಪರಮಾನಂದದಿಂದ ಒಂದು ಕ್ಷಣ ತನ್ನ ಆಶ್ರಮದಲ್ಲಿ ನಿಲ್ಲು
ವಂತೆ ವಿಜ್ಞಾಪಿಸಿಕೊಂಡನು. ಭಕ್ತವತ್ಸಲನಾದ ರಾಮನು ಒಪ್ಪಿದನು.
ಅವನೆದುರಿನಲ್ಲಿ ಈ ನಿಯು ತನ್ನ ಜೀರ್ಣದೇಹವನ್ನು, ಮಂತ್ರಪೂತವಾದ
ಹವಿಸ್ಸಿನಂತೆ ಅಗ್ನಿಗರ್ಪಿಸಿದನು. ಶರಭಂಗನ ಆತ್ಮ ಪರಮ ಪದವಿಯನ್ನು
 
ಸೇರಿತು.
 
ರಾಮಚಂದ್ರ ಸೀತಾ-ಸೌಮಿತ್ರಿಯರೊಡನೆ ಮತ್ತೊಂದು ದಟ್ಟಡವಿಯನ್ನು
ಹೊಕ್ಕನು. ಅಲ್ಲಿ ಇವರಿಗೆ ವಿರಾಧನು ಕಾಣಿಸಿಕೊಂಡನು. ಶೂಲಧಾರಿಯಾದ
ಈ ರಾಕ್ಷಸನು ಸೀತೆಯನ್ನು ಎತ್ತಿಕೊಂಡು ಆಕಾಶಕ್ಕೆ ನೆಗೆದನು. ಇದನ್ನು
ಕಂಡ ಲಕ್ಷ್ಮಣನು ಅವನೆಡೆಗೆ ಬಾಣಗಳನ್ನೆಸೆದನು. ಅದಕ್ಕೆ ಪ್ರತಿಯಾಗಿ
ರಾಕ್ಷಸನು ತನ್ನ ಶೂಲವನ್ನೇ ಲಕ್ಷ್ಮಣನ ಮೇಲೆ ಎಸೆದನು. ಆಗ ರಾಮಚಂದ್ರ
ತನ್ನೆರಡು ಬಾಣಗಳಿಂದ ಆ ಶೂಲವನ್ನು ತುಂಡರಿಸಿದನು. ಆಗ ವಿರಾಧ
ರಾಕ್ಷಸನು ರಾಮ-ಲಕ್ಷ್ಮಣರಿಬ್ಬರನ್ನೂ ತನ್ನ ಹೆಗಲ ಮೇಲಿರಿಸಿಕೊಂಡು ಹೋಗ
ತೊಡಗಿದನು. ರಾಮ-ಲಕ್ಷ್ಮಣರಿಗೆ ಸರಿಯಾದ ಅವಕಾಶ ದೊರೆತಂತಾಯಿತು.
ಅವರು ತಮ್ಮ ಖಡ್ಗಗಳಿಂದ ಅವನ ಎರಡೂ ತೋಳುಗಳನ್ನು ಕತ್ತರಿಸಿದರು.
 
ರಾಮನ ಬಾಣದ ಪೆಟ್ಟಿನಿಂದ ವಿರಾಧನ ಪ್ರಾಣಪಕ್ಷಿ ಹಾರುವುದರಲ್ಲಿತ್ತು.
ಅಷ್ಟರಲ್ಲಿ ಅವನು ಕೈಮುಗಿದು ನುಡಿದನು:
 
66
 
* ರಾಮಚಂದ್ರ! ನೀನು ಭಗವದ್ವಿಭೂತಿ ಎಂಬುದನ್ನು ಬಲ್ಲೆ. ನಾನು
ನಿನ್ನ ದಾಸನಾದ ತುಂಬುರು. ಒಮ್ಮೆ ಉರ್ವಶಿಯ ಸಂಗಮಾಡಿದ್ದಕ್ಕಾಗಿ
ಕುಬೇರ ನನಗೆ ಈ ಶಾಪವಿತ್ತನು. ಅದರಿಂದ ಈ ರಾಕ್ಷಸನ ಜನ್ಮ ನನಗೆ
ಬಂತು. ನಿನ್ನ ಪ್ರಸಾದದಿಂದ ಅದು ಪರಿಹಾರವಾದಂತಾಯಿತು. ನಿನಗೆ
ಜಯವಾಗಲಿ, "