This page has not been fully proofread.

eses
 
ಮಿಂಚಿನಬಳ್ಳಿ
 
ಒಮ್ಮೆ ಇದೇ ರಾವಣನು ಬಲಿಯನ್ನು ಗೆಲ್ಲಹೋಗಿ, ಬಲಿಯ ಬಾಗಿಲು
ಕಾಯುವ ಶ್ರೀಹರಿಯ ಒದೆತವನ್ನು ತಿಂದು, ಸಾವಿರ-ಸಾವಿರ ಯೋಜನ ದೂರ
ಬಿದ್ದು ಒದ್ದಾಡಿದ್ದ !
 
ಆದರೂ ರಾವಣನೇನು ಸಾಮಾನ್ಯನಲ್ಲ. ಕೆಲವು ಕಾರಣಗಳಿಂದ ಕೆಲ
ವೆಡೆ ಅವನಿಗೆ ಪರಾಭವ ಒದಗಿರಬಹುದು. ಆದರೆ ಶ್ರೀಹರಿಯಲ್ಲದೆ ಮತ್ತಾ-
ರಿಂದಲೂ ಅವನನ್ನು ಕೊಲ್ಲುವುದು ಸಾಧ್ಯವಾಗಲಾರದು.
ರಾವಣನೆಂದರೆ ದೇವತೆಗಳಿಗೂ ಭಯ, ಇವನೆದುರು ಗಾಳಿ ಮೆಲ್ಲ
ಮೆಲ್ಲನೆ ಸುಳಿಯುತ್ತಿತ್ತು ! ಸೂರ್ಯನೂ ಕೂಡ ಇವನ ರಾಜ್ಯದಲ್ಲಿ ತನ್ನ ಬಿಸಿ
ಲನ್ನು ತಂಪುಗೊಳಿಸಿದ್ದ ! ಬೆಂಕಿ ಇವನ ಒಪ್ಪಿಗೆಯಿಲ್ಲದೆ ಸುಡುವ ಸಾಹಸವನ್ನೆ
ಮಾಡುತ್ತಿರಲಿಲ್ಲ ! ಒಟ್ಟಿನಲ್ಲಿ ರಾವಣನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ
ತಾಳ ಹಾಕುತ್ತಿತ್ತು !
 
ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಸುಂದರಿಯರು ಅವನ ಅಂತಃ
ಪುರವನ್ನು ಸೇರುತ್ತಿದ್ದರು. ಪ್ರಪಂಚದ ಅಪೂರ್ವ ಯೌವನವೆಲ್ಲ ಈ ನಿರ್ದ
ಯಿಯ ಇದಿರು ಬಾಡಿಹೋಗುತ್ತಿತ್ತು ! ಅವನ ಕ್ರೌರ್ಯಕ್ಕೆ ಎಣೆಯೆಂಬುದೇ
ಇಲ್ಲ. ತಂದೆ-ತಾಯಂದಿರು ಬೊಬ್ಬಿಡುತ್ತಿರುವಂತೆ ಮಕ್ಕಳನ್ನು ಕೊಂದುಬಿಡು
ತಿದ್ದ. ಹರೆಯದ ಹೆಣ್ಣು ಗಂಡು ಬೆರತಾಗಲೆ ಬಂದು ಹೆಣ್ಣನ್ನು ಕಸಿದುಕೊಳ್ಳು
ತಿದ್ದ. ಯಾಗಕ್ಕಾಗಿ ಸಾಕಿದ ಗೋವುಗಳನ್ನು ರಾಕ್ಷಸರಿಗೆ ಉಣಬಡಿಸುತ್ತಿದ್ದ.
ಇದಕ್ಕಿಂತ ಹೆಚ್ಚಿನ ಘಾತಕತನವಾದರೂ ಏನಿದೆ !
 
ರಾವಣನ ಪೀಡೆ ಚಿತ್ರ ಕೂಟದಲ್ಲಿರುವ ಮುನಿಗಳ ವರೆಗೂ ಹರಡಿತ್ತು.
ಈ ನೃಶಂಸನ ಅಕೃತ್ಯಗಳನ್ನು ಕಂಡು ಉರಿದೇಳುತ್ತಿದ್ದ ರಾಮಚಂದ್ರನ
ಮನಸ್ಸು, ಈ ಮುನಿಗಳ ಪಾಡನ್ನು ಕಂಡು ಕರಗುತ್ತಿತ್ತು. ರಾವಣ ಸಂಹಾರಕೆ
ಪೂರ್ವರಂಗವೋ ಎಂಬಂತೆ ರಾಮಚಂದ್ರನು ದಂಡಕಾರಣ್ಯದೆಡೆಗೆ ತೆರಳಿದನ್ನು
 
ಭಕ್ತ ವೈಕುಂಠಕ್ಕೆ, ಭಗವಂತ ಪಂಚವಟಿಗೆ
 
ಚಿತ್ರಕೂಟದಿಂದ ತೆರಳಿದ ರಾಮಚಂದ್ರ ನೇರಾಗಿ ಅತ್ರಿ ಮಹರ್ಷಿಯ
ಆಶ್ರಮಕ್ಕೆ ಬಂದನು. ಜಗನ್ಮಾತಾಪಿತೃಗಳನ್ನು ಕಂಡು ಅತ್ರಿ-ಅನಸೂಯೆಯರು
ಸಂತಸಗೊಂಡು ಪೂಜಿಸಿದರು. ಅವರ ಪೂಜೆಯನ್ನು ಕೈಕೊಂಡು ರಾಮಚಂದ್ರ
ದಂಡಹೆಯನ್ನು ಪ್ರವೇಶಿಸಿದನು.