This page has not been fully proofread.

ಸಂಗ್ರಹರಾಮಾಯಣ
 
ಅವನೊಮ್ಮೆ ಹಿಮಾಲಯ ಪ್ರಾಂತದಲ್ಲಿ ವೇದವತಿ ಎಂಬ ಸುಂದರಿಯನ್ನು
ಕಂಡನು. ಇದು ದೇವಮಾಯೆ ಎಂದು ಅವನಿಗೇನು ಗೊತ್ತು ! ಆ ರೂಪಶ್ರೀ
ಯನ್ನು ಕಂಡ ರಾವಣನಿಗೆ ಸುಮ್ಮನಿರಲಾಗಲಿಲ್ಲ. ಅವನು ಅವಳನ್ನು ಬಲಾ-
ತ್ಕರಿಸಹೋದನು. ಆದರೆ ಅವಳು ರಾವಣನಿಂದ ದೂರ ಸರಿದು ಬೆಂಕಿಯನ್ನು
ಹೊಕ್ಕಳು ! ಆಗ ಅವಳಾಡಿದ ಮಾತು ರಾವಣನ ಕಿವಿಯಲ್ಲಿ ಕರ್ಕಶವಾಗಿ
ಗುಂಯ್ ಗುಟ್ಟಿತು.
 
೮೭
 
"ನಿನ್ನ ಸಾವಿಗಾಗಿ ನಾನು ಇನ್ನೊಮ್ಮೆ ಹುಟ್ಟಿ ಬರಲಿದ್ದೇನೆ."
 
ರಘುವಂಶದ ಪೂರ್ವರಾಜನಾದ ಅನರಣ್ಯನಿಗೂ ರಾವಣನಿಗೂ ಯುದ್ಧ
ನಡೆದಾಗ ಅನರಣ್ಯನಾಡಿದ ಮಾತೂ ಅವನ ಮನಸ್ಸನ್ನು ಕುಡುಕುತ್ತಿತ್ತು !
"ನನ್ನ ವಂಶದಲ್ಲಿ ಜನಿಸಿಬಂದ ಶ್ರೀ ಹರಿ ನಿನ್ನ ಸಂಹಾರಕನಾಗಲಿ."
 
ಆದರೂ ರಾವಣನ ತ್ರಿಲೋಕ ವಿಜಯ ಯಶಸ್ವಿಯಾಗಿಯೇ ನಡೆಯಿತು.
ಏಳು ದಿನದ ಕಾಳಗದಲ್ಲಿ ಯಮರಾಜನೂ ಸೋತುಹೋದ. ನಾಗರೆಲ್ಲ ಶರ
ಣಾದರು. ವರುಣನ ಮಕ್ಕಳೂ ಸೋತುಹೋದರು. ನಿವಾತಕವಚರೆಂಬ
ದೈತ್ಯರ ಗೆಳೆತನ ಬೇರೆ ದೊರಕಿತು. ಅಕ್ಷೇಹಿಣಿ ಸಂಖ್ಯೆಯಲ್ಲಿ ಸೇನೆ, ಕುಂಭ-
ಕರ್ಣ-ಮೇಘುನಾದನಂಥವರ ಸಹಕಾರ, ಕೇಳುವುದೇನು ? ದೇವತೆಗಳೆಲ್ಲ
ಸೋತು ಶರಣಾದರು !
 
ರಾವಣನು ಮಾಡಿದ ಅವಾಂತರಗಳು ಒಂದೆರಡೇನಲ್ಲ. ಅವನು ಗೆದ್ದ
ಕತೆಗಳೂ ವಿಚಿತ್ರ ! ಸೋತ ಕತೆಗಳೂ ವಿಚಿತ್ರ !
 
ಒಮ್ಮೆ ಸಾವಿರ ತೋಳಿನ ಕಾರ್ತವೀರ್ಯಾರ್ಜುನನೊಡನೆ ಈ ಇಪ್ಪತ್ತು
ತೋಳಿನ ರಾವಣ ಕದನ ಹೂಡಿದ್ದ. ಕಾರ್ತವೀರ್ಯನೋ ನಿರ್ದಾಕ್ಷಿಣ್ಯವಾಗಿ
ಈ ತ್ರಿಲೋಕ ವಿಜಯನನ್ನು ಕಟ್ಟಿ ಕಾರಾಗಾರದಲ್ಲಿ ಬಂಧಿಸಿಬಿಟ್ಟ.
ಅಜ್ಜ ಪುಲಸ್ಯರು ಬಂದು ಈ ಮೊಮ್ಮಗನನ್ನು ಬಿಡಿಸಬೇಕಾಯಿತು !
 
ಕೊನೆಗೆ
 
ವಾಲಿಯ ಕೈಯಲ್ಲಿ ರಾವಣಪಟ್ಟ ಪಾಡು ಇನ್ನೂ ವಿಚಿತ್ರ. ಸಂಧ್ಯಾ-
ವಂದನೆಗೆಂದು ಹೊರಟ ವಾಲಿಯನ್ನು ರಾವಣ ಯುದ್ಧಕ್ಕೆ ಕರೆದನು. ಈ
ಮಹಾವೀರನಿಗೆ ರಾವಣನು ಯಾವ ಎಣೆ ? ಅವನು ರಾವಣನನ್ನು
ಕಂಕುಳದಲ್ಲಿರಿಸಿಕೊಂಡೇ ತನ್ನ ಸಂಧ್ಯಾವಂದನೆಯನ್ನು ಪೂರಯಿಸಿದನ ..