This page has been fully proofread once and needs a second look.

ಶ್ರೀ ಫಲಿಮಾರು ಶ್ರೀಪಾದಂಗಳ ಅನುಗ್ರಹದ ನುಡಿ
 

 
ಅನುವಾದಕರು ಅನುಗ್ರಹದ ಮುನ್ನುಡಿ ಬರೆಯಬೇಕೆಂದಾಗ ಸ್ವಲ್ಪ
ಯೋಚಿಸಿದೆವು. ರಕ್ತಗತವಾದ ಪಾಂಡಿತ್ಯ, ಸಾಹಸ ಅವರಿಗೆ ಸೇರಿದ್ದು.
ಅವರು ಕೇಳಿದಾಗ ಬರೆಯಲಾರೆನೆಂದರೆ ಅನುಚಿತವಾಗಬಹುದೆಂದೆನಿಸಿ ಒಪ್ಪಿ
ಕೊಂಡೆವು. ಅಷ್ಟೆ ಅಲ್ಲದೆ ನಮಗೂ ಒಂದು ಬಗೆಯ ತೃಪ್ತಿ, ಆನಂದವಿದೆ.
ದಶಪ್ರಮತಿಗಳೊಡನೆ ಹದಿನೈದು ದಿನ ವಾದಮಾಡಿ ಅದೈದ್ವೈತವನ್ನು ತ್ಯಜಿಸಿ
ದೈ
ದ್ವೈತ ಸ್ವೀಕರಿಸಿದ ತ್ರಿವಿಕ್ರಮ ಪಂಡಿತಾಚಾರ್ಯರ ಕುಲವಾದ ಲಿಕುಚಕುಲ
-
ದಲ್ಲಿಯೇ ನನ್ನ ಮಾತೆ ಸೇರಿದ್ದಾಳೆ. ಅಂತಹ ಪಾಂಡಿತ್ಯದ ಪುತ್ರರೇ 'ಯೋಗ-
ದೀಪಿಕಾ', 'ಶುಭೋದಯ', 'ಮಧ್ವವಿಜಯ', ಕೆಲ ಸ್ತೋತ್ರಗಳ ರಚಕರೆನಿಸಿದ

ನಾರಾಯಣಪಂಡಿತಾಚಾರ್ಯರು, ಅವರ ಶೇಷ್ಠ ಕೃತಿಗಳಲ್ಲೊಂದು ಈ
ಸಂಗ್ರಹ ರಾಮಾಯಣ.
 

 
ಸಂಗ್ರಹದ ಕಾರ್ಯವೆನ್ನುವುದೊಂದು ಪೂರ್ಣ ರಸಾಸ್ವಾದದ ದ್ಯೋತಕ
ವಾಗಬಲ್ಲುದು. ನದೀಪಾತ್ರದಲ್ಲಿ ಸಾಗರದ ನೀರು ಒಳನುಗ್ಗಿದಾಗ ನದಿ
ಪೂರ್ಣವಾಗಿ ನಮಗೆ ಆನಂದದಾಯಿಯಾಗುತ್ತದೆ. ಅದೇ ನೀರು ಸಾಗರದಲ್ಲೇ

ಇದ್ದಾಗ ಆ ಭವ್ಯತೆಯು ಅಲ್ಲಿ ಕಾಣದಾಗುತ್ತದೆ. ಅಂತೆಯೇ ಮಹಾಗ್ರಂಥ-
ಗಳಿಂದ ಮಾನವನ ಮನಸ್ಸಿನ ಭಾವನೆ ಆಕರ್ಷಣೆಗೆ ಒಳಗಾಗಿ ಹೊರಬಂದು
ಸಂಗೃಹೀತವಾದಾಗ ಸಂಗೃಹೀತ ಗ್ರಂಥಗಳು ಪೂರ್ಣ <error>ತಪ್ತಿ</error><fix>ತೃಪ್ತಿ</fix>ಜನಕವಾಗಿ ಇರ
ಬಲ್ಲವು. ಸಂಗೃಹೀತನ ಜ್ಞಾನಶಕ್ತಿ, ವಿವೇಚನಾಶಕ್ತಿ, ಭಾವನಾಶಕ್ತಿಗಳಿಗನು
ಸಾರ-
ವಾಗಿ ಇದು ಇರುತ್ತದೆ. ರವಿ-ಚಂದ್ರರ ವ್ಯತ್ಯಸ್ತ ಪ್ರಭಾವಕ್ಕೆ ಸಾಗರ
 
ಒಳಗಾಗುವಂತೆ.
 

 
ನಾರಾಯಣಪಂಡಿತಾಚಾರ್ಯರಲ್ಲಿ ಜಗತ್ತಿನ ಹೊರ ಕಾರಣವೆಲ್ಲ
ವಿಭಾವವಾಗಿ ಚೆನ್ನಾಗಿ ಪಾಕ ಬಂದಿರುವುದರಿಂದಲೇ ವೇದಾಂತ ಶಾಸ್ತ್ರಗಳಿಗಿಂತ

ತದನುಸಾರಿ ಕಾವ್ಯ-ಪುರಾಣಗಳಲ್ಲಿತ್ತ ಇವರೊಲುಮೆ ಹರಿದಂತೆ ಕಾಣು,
ತ್ತದೆ. ಆಚಾರ್ಯರಿಂದ ರಚಿತವಾದ, ಪುರಾಣಗಳಲ್ಲಿ ಕಂಡುಬರುವ ವಿಪ್ರತಿ
 
-