2023-02-26 11:11:38 by jayusudindra
This page has not been fully proofread.
ನೀಚಗಿರಿಯ ಕಡವಾಲ ಇಹವು ಹೋಗಲ್ಲಿ ಸುಂದು ಮರೆದು
ಅಲ್ಲಿ ನಲ್ಲ-ಬೆಲೆವೆಣ್ಣ - ಕೂಟ ಹೊಸಗಂಪನುಗುಳುತಿಹವು
ನಾಗರಿಕರ ತಾರುಣ್ಯಮದವ ಕಲ್ಮಾಡ ಹೊಗಳುತಿಹವು
।
ಅಲ್ಲಿ ತಂಗಿ ಮುಂಬರಿಯೊ ಕಾಡ-ಹೊಳೆ-ದಂಡೆ-ತೋಟದಲ್ಲಿ
ಬಳ್ಳಿ ಬಳ್ಳಿ ಹೂಜಲ್ಲಿಯಲ್ಲಿ ಮುಂಬನಿಯು ತುಳುಕಿ ಚೆಲ್ಲಿ
ಗಲ್ಲ ಬೆಮರೆ, ಕಿವಿಕಮಲ ಕಮರೆ, ಪಾಮರರ ಅಮರಿಯರಿಗೆ
ನಿನ್ನ ನೆರಳ ಕ್ಷಣವಿತ್ತು, ರಮಿಸು ಹೂದೋಟಗಿತ್ತಿಯರಿಗೆ
ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು ?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
ಆs ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣ-ಕುಡಿ-ಲಲ್ಲೆಯೊಲ್ಲೆಯಾ ? ವ್ಯರ್ಥ ಇದ್ದು ಕಣ್ಣು
ನಿನ್ನ ಕಂಡು ನಿರ್ವಿಂಧ್ಯೆ ಮುಂದೆ, ತೆರೆ ತೆರೆದು, ಅಂಚೆ ಉಲಿಸಿ
ಗೆಜ್ಜೆ ಪಟ್ಟಿ ಗಿಲುಕೆನಿಸಿ, ಎಡವಿ, ಸುಳಿನಾಭಿ ತೋರಿ ನಲಿಸಿ
ಹಾದಿಯಲ್ಲಿ ಬರೆ, ಆಗು ಸಮರಸಿಯು ಕೇಳಬೇಡ ಬದಲು
ಹೆಣ್ಣಿನೊಲವಿನಲಿ ಮಳ್ಳ ಮುರಕವೇ ಮಾತಿಗಿಂತ ಮೊದಲು
ಹೆಳಲು ಇಳಿದು ಒಕ್ಕಾಲು ಉಳಿದು, ನಡೆದಿಹಳು ತೆಳ್ಳಗಾಗಿ
ದಡದ ಮರದ ಒಣ ಎಲೆಗಳುದುರಿ ತನ್ನುದರ ಬೆಳ್ಳಗಾಗಿ
ನೀನು ಸೊಬಗ, ನಿನ್ನಿಂದ ಅಗಲಿ ತಾ ಸೊರಗಿ ಸಣ್ಣಗಹಳು
ದೈವದಿಂದ ನಿನ್ನನ್ನು ಸೇರಿ ಮೈದುಂಬಿಕೊಳ್ಳಬಹಳು
೩೦
ಬಂದವಂತಿನಾಡಿನ
ಅಲ್ಲಿ ಸಿರಿಯು ಹರಹಿರುವ ಪೂರ್ವಪುರವಿಹುದು ನಿಲ್ಲು ಅಲ್ಲಿ
ಪುಣ್ಯವಂತರೋ, ಪುಣ್ಯತೀರಲಿರೆ ಸ್ವಲ್
ಸ್ವರ್ಗದೊಂದು ತುಣುಕನ್ನೆ ತಂದರೋ
೧೮ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ
ಬೆ