Proofing

✦

This page has not been fully proofread.

೧೯
ಕಾಡ ಹುಡುಗಿಯರ ಆಟ ನಡೆದ ಎಲೆಮಾಡಗಳಲಿ ತಂಗಿ
 

ನೀರ ಸುರಿಸಿ ತುಸು ಮುಂದುವರಿಸು ಆ ದಾರಿ ದಾಟಿ ಹಿಂಗಿ
॥
ವಿಂಧ್ಯದಡಿಗೆ ಕಡುಬಂಡೆಯೊಡೆದು ಹರಿದಿರುವ ರೇವೆ ನೋಡು

ಚಿತ್ರ ಚಿತ್ರ ಸಿಂಗಾರವಾದ ಮದ್ದಾನೆ ಹಣೆಗೆ ಜೋಡು
 
॥ ೧೯
 
ಅಲ್ಲಿ ಕಾಡು ಮದ್ದಾನೆಮಿಂದ ಬಹು ಗಂಧ ನೀರ ಕುಡಿದು

ಮುಂದೆ ಹೋಗು, ನೇರಿಳೆಯ ತಡೆವಡೆದು ನಿನ್ನ ದಾರಿ ಹಿಡಿದು
 
॥
ತುಂಬು ಮೋಡವೆ, ಗಾಳಿ ಈಡೆ ? ನಿನಗಾರು ತೂಗಬಹುದು ?

ಬರಿದು ಆಗಿ ಹಗುರಾದ : ತುಂಬಿದವ ಮಾನವಂತನಹುದು ॥
೨೧
 
;
 
೦
 
ಹಸಿರು ಹಳದಿ ಕಪ್ಪಾದ ಮುಗುಳ ಕಡವಾಲಗಳನ್ನು ನೋಡಿ

ನೀರ ನೆರೆಯ ಕಲ್ಪಾಬಾಳೆ ತಲೆಯನೆತ್ತಿದವು ಹೂವು ಮೂಡಿ ।
॥
ಮೆಯ್ದು ಜಿಗಿದು ಅಡವಿಯಲಿ, ನೆಲದ ಕಡುಗಂಪ ಮೂಸಿ ಹಿಳಿದು

ಸಾರಂಗ ಜಾತಿ ಸುತ್ತಾಡತಾವ ಇಳಿಮಳೆಯ ಹಾದಿ ತುಳಿದು ।
 
॥ ೨೨
 
೧
 
ಎಷ್ಟು ಬೇಗ ನೀ ಹೋಗಬೇಕು ನನಗಾಗಿ ಎನಿಸಿ ಏನು ?

ಬೆಟ್ಟ ಬೆಟ್ಟ ಬಿಟ್ಟಿರುವ ಮಲ್ಲಿಗೆಯ ಜೊತೆಗೆ ಉಳಿವೆ ನೀನು
॥
ಇಷ್ಟು ತಿಳಿಯೆನೇ ? ಕಣ್ಣು-ತುಂಬಿ ಕುಡಿಗಣ್ಣ ಚಾಚಿ ಕೇಕಿ

ಕೇಕೆ ಹಾಕುತಲೆ ಹೇಗೊ ಹೊರಡುವೀ ಹಿಂದುಮೆಟ್ಟ ನೂಕಿ ।
 
॥ ೨೩
 
೨
 
ಮುಳ್ಳುಮೊನೆಯ ಕೇದಿಗೆಯ ಹಳದಿ ನೆರಳುಳ್ಳ ತೋಟವಳ್ಳಿ

ಊರ ತಿರಿವ ಕಾಕಗಳ ಬಸದಿಗಳ ಹಾದಿಗಿಡದ ಹಳ್ಳಿ ।

ಮಳೆಯ ಮಾಸದಲಿ ಜಂಬು-ನೇರಿಳೆಯಯೆ ತುಂಬಿ ಬನಗಳಲ್ಲಿ

ಕೆಲವೆ ದಿವಸ ಆ ಹಂಸಗಳಿಗೆ ನೆಲೆ ಆ ದಶಾರ್ಣದಲ್ಲಿ
 
॥ ೨೩
 
ದಿಕ್ಕು ದಿಕ್ಕಿನಲ್ಲಿ ವಿದಿಶೆಯೆಂದು ಹೆಸರಾದ ರಾಜಧಾನಿ

ಅಲ್ಲಿ ಹೋಗಿ ಬಯಬಯಸಿದಂಥ ಹಣ್ಣಿತಿನ್ನು ಕಾಮುಕಾ, ನೀ ॥

ಹುಬ್ಬು ಮುರಿದ ಬೆಡಗುಳ್ಳ ಮುಖಕೆ ಸರಿ ನೇತ್ರವತಿಯ ನೀರು

ಅವಳ ಬಳಿಗೆ ಗುಡುಗುಡಿಸಿ ಸೊಬಗ, ನೀಸನವಳ ಸವಿಯ ಹೀರು ।
೧೬ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂ
 
॥ ೨೪