Proofing

✦

This page has not been fully proofread.

೭
 
ನೀರೆ ಕಾದವಗೆ ಶರಣು ಅಲ್ಲವೇ ? ಇನಿಯಳೆಡೆಗೆ ಓತು

ಒಯ್ಯೋ, ಧನಪತಿಯ ಮುನಿಸಿಗೀಡಾಗಿ ಅಗಲಿದವನ ಮಾತು ।
॥
ಯಕ್ಷರಾಜನಾ ರಾಜಧಾನಿ ಅಲಕೆಗೆಯೆ ಹೋಗು ನೀನು

ಅಲ್ಲಿ ಶಿವನ ಮುಡಿಚಂದ್ರ ತೊಳೆವ ಮಹಮನೆಯ ಮಾಟವೇನು
 
es
 
? ॥ ೭
 
ಗಾಳಿ ಬಟ್ಟೆಯಲಿ ಬರವ ಕಂಡು ಕುರುಳೋಳಿ ಓರೆಮಾಡಿ

ದೂರ ಹೋದವರ ಹೆಣ್ಣು ನೋಡುವವು ನಿನ್ನನಾಸೆಗೂಡಿ ॥

ನೀನೆ ಬರಲು ಅವನಾವನಿರುವನೋ ನಲ್ಲಿಲೆ ಬಿಟ್ಟುಕೊಗೊಟ್ಟು,
 

ಬೇರೆಯವರ ಆಳಾಗಿ ಇರುವ ನಮ್ಮಂಥ ಜನರ ಬಿಟ್ಟು
 
೯
 
॥ ೮
 
ಗಾಳಿ ಬೀಸುವದು ನಿನ್ನ ನೂಕಿಸುತ ಮಂದ ಮಂದವಾಗಿ

ಚೂಚು ಚಾಚಿ ಚಾದಗೆಯು, ಎಡಕೆ ಕೂಗುವದು ಚೆಂದವಾಗಿ
॥
ಬೆದೆಯ ನೆನೆದು ಬೆಳ್ಳಕ್ಕಿ ಬರುವವೋ
ಬೆನ್ನಗಟ್ಟುವವು ಕಣ್ಣೆ ಸೊಬಗ ನೀ ತಂದೆ ಎಂದುಕೊಂಡು
 
ಸಾಲು ಸಾಲುಗೊಂಡು
 
।
 
೧೦
 

ಬೆನ್ನಗಟ್ಟುವವು ಕಣ್ಗೆ ಸೊಬಗ ನೀ ತಂದೆ ಎಂದುಕೊಂಡು ॥ ೯
 
ಎಷ್ಟು ದಿವಸ ಇನ್ನುಳಿದುವೆಂದು ದಿನದಿನವು ಲೆಕ್ಕವಾಗಿ

ಜೀವ ಹಿಡಿದುಕೊಂಡಿರುವ ನಿನ್ನ ಅತ್ತಿಗೆಯ ನೋಡು ಹೋಗಿ
॥
ನಾರಿ ಹೃದಯದಲಿ ನಾರಿನೆಳೆಯುವೊಲು ಇಹುದು ಆಸೆಯೊಂದು

ಅಗಲಿದಾಗಲೇ ಕಳಚಿ ಬೀಳುವೆದೆ-ಹೂವ ಬಿಗಿದುಕೊಂಡು
॥ ೧೧
 
೦
 
ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆತಾಳಿ,
 

ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ ।
 
?
 
॥
ತುಂಡು ತಾವರೆಯ ಬುತ್ತಿ ಕಟ್ಟಿ ಕೈಲಾಸಕಾಗಿ ಸಾಗಿ

ಬಾನ ಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ
 
॥ ೧೨
 
೧
 
'ಹೋಗಿ ಬರಲೋಲೊ' ಎಂದಪ್ಪಿ ಕೇಳು ಈ ಮುದ್ದು ಗೆಳೆಯನನ್ನು

ರಾಮಪಾದಗಳು ಮುದ್ದಿ ಮುದ್ರಿಸಿದವಿದರ ಮಗ್ಗುಲನ್ನು
॥
ಕಾಲ ಕಾಲಕ್ಕೂ ನಿನ್ನ ಕಂಡು ಇದು ಮೈಯನರಳಿಸುವದು

ಅಗಲಿ ಬಲು ದಿನಕೆ ಬಂದೆ ಎಂದು ಬಿಸಿ ನೀರನುರುಳಿಸುವದು ॥
೧೪ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂ
 
೨