This page has not been fully proofread.

ನಾನೊಬ್ಬನುಂಟು ಹಲವಾಗಲೆಲ್ಲೂ ಎಂಬ
ಹಂಬಲಿನ ಹಂಬೆ ಹರಿಬಳ್ಳಿವಳ್ಳಿಗಳಾಗಿ
ತನ್ನ ದಾಂಗುಡಿಯ ಗೊನೆ ಬಾನು ಮತ್ತೊಂದಾಗಿ
 
ಒಂದಾಗಿ ಕೆಲವಾಗಿ ಇರುವ ಹರುಹಿನ ತುಂಬ
ನಲಿವುಲಿವು ಒಲುಮೆ ಸೆಲೆ ಚೆಲುವು ಹಂದಿರಗಂಬ-
ವೆನೆ ತಾನೆ ಹೂ, ಹಕ್ಕಿ, ಹೆಣ್ಣು ಕಣ್ಣೆಂದಾಗಿ
ನೀಡಿ ಬಾನ್‌ಮೀನಂಗಳಲ್ಲು ಚಳಮಿಳನಾಗಿ
ಆಗ ಬಗೆಬಗೆ ಮಿಂಚಿತ್ತು ಒಂದೇ ಬಿಂಬ.
ಕಣ್ಣ ಕವಿಗಣ್ಣ ಕನ್ನಡಿಯಲ್ಲಿ ಒಳಮೂಡಿ,
 

 
* ಕಾಳಿದಾಸ
 
ಆ ಕಾವ ನೋವೆ ಹಲವೊಲವಿನಲಿ ಹಾಡಾಗಿ
ಯಾವುದೋ ಹಿರಿಬೆಳಕ ಮಿಸುಕಾಟವೇ ಹಿಗ್ಗಿ
ಇಲ್ಲದುಂಟಾಗಿ ಕತ್ತಲೆಯು ಬೆಳಕಿಗೆ ಬಾಗಿ
ಸಾವು ಸುಲಿಯಲು ಬಾಳೆ ತಿಳಲು ಎನೆ ಸವಿಗೂಡಿ
ಮುದ್ದಾಟವೆನೆ ಬಂತು ಕಾಳಿದಾಸನ ನುಗ್ಗಿ .
 
- ಮುಕ್ತಕಂಠ-೮/ಪ್ರ : ೧೯೫೬
 
ಭಾವ : ಕಾಳಿದಾಸನಲ್ಲಿ ಅವತರಿಸಿದ ಶಕ್ತಿಯನ್ನು ಕುರಿತು
ಬರೆದದ್ದು.
 
ಅರ್ಥ : ಹಂಬೆ-ಹಂಬು=ಬಳ್ಳಿ.
 
ದಾಂಗುಡಿ=ಬಳ್ಳಿಯ ಬೆಳವಣಿಗೆಯ ಮುಂಭಾಗದ ತುದಿ.
 
ಚಳಮಿಳ=ಚಂಚಲವಾಗಿ ಹೊಳೆ.
 
ಮಿಸುಕಾಟ-ಚಲನೆ.
 
ಕಾಳಿದಾಸನನ್ನು ಕುರಿತು ಡಾ॥ ದ. ರಾ. ಬೇಂದ್ರೆ
 
NcDesai
 
೪೮ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ