2023-02-27 07:45:12 by jayusudindra
This page has been fully proofread once and needs a second look.
ಶಿವನ ಬಸವ ನಗೆದಿರುವ ನಗದ ತುದಿಯಿಂದ ಕಾಲ ಕೀಳಿ ॥
ಮರಳಿ ಬಂದು, ಅವಳೊಸಗೆ ತಂದು, ನನಗೊಂದು ಬಾಳ ನೀಡು
ಕಳಚಿ ಬೀಳಲಿಹ ಕುಂದಕುಸುಮದೊಲು ಇಹುದು ನನ್ನ ಪಾಡು ॥
ಒಪ್ಪಿಕೊಂಡೆಯಾ, ಅಪ್ಪಾ, ಹೇಳು ಈ ಬಂಧುಕೃತ್ಯವನ್ನು
ಇಲ್ಲವೆಂದು ನಾ ತಿಳಿಯೆ ನಿನ್ನ ಗಂಭೀರ ಮೌನವನ್ನು
ನೀರ ನೀಡಿ ಚಾದಗೆಗೆ, ಸುಮ್ಮನಿಹೆ. ಬೇರೆ ಸಾಕ್ಷ್ಯ ಬೇಕೆ
ತಮ್ಮ ಇಷ್ಟದವರಿಷ್ಟ ಮಾಡುವವ ಬಾಯಲಾಡಲೇಕೆ ?
ಶಿ
ಸಿಕ್ಕ ಹಾಗೆ ನಾ ಬೇಡಿಕೊಂಡೆ, ಮಾಡಿ
ಎನ್ನು ಗೆಳೆಯನಿವ, ಎನ್ನು ಅಗಲಿದವ, ಅಯ್ಯೋ ಪಾಪ, ಎನ್ನು
ತಿಳಿದ ನಾಡು ತಿರುಗಾಡು ಮೇಘವೇ ! ಮಾಟ ಆಟವಾಡಿ
ಬೇಡಿಕೊಂಬೆ ನಾ ಇರಲಿ ಎಂದಿಗೂ ಮೋಡ ಮಿಂಚುಗೂಡಿ ॥
ಕನ್ನಡ ಮೇಘದೂತ - ಭಾವಾನುವಾದ ಖಂಡಕಾವ್ಯ: ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೪