Proofing

✦

This page has been fully proofread once and needs a second look.

೪೦
 
ಏನೊ ಹೇಳುವಾ ನೆವನ ಮಾಡಿ ತುಟಿ ತಂದು ಕಿವಿಯ ಬಳಿಗೆ

ನಿನ್ನ ಸಖಿಯರಿದಿರಲ್ಲೆ ಒರಗಿರುತ್ತಿದ್ದದೆ ಗಳಿಗೆ ಗಳಿಗೆ
॥
ಮಾತಿನಾಚೆ, ಕಣ್ಣಾಚೆ ನನ್ನವಳು, ಇಂದು ಬವಣಿಗೊಂಡೆ

ಹೇಳು ನಾನು ನಿನ್ನಿದಿರು ಬಯಲಿನಲ್ಲಿ ಹೀಗೆ ಕೂಗಿಕೊಂಡೆ ।
 
॥ ೪೧
 
೦
 
ಬಳ್ಳಿಯಲಿ ಆ ಬಳುಕು ಮೈಯ್ಯು, ಹುಲ್ಲೆಯಲಿ ಬೆದುರುಗಣ್ಣು

ಮುಖದ ಛಾಯೆ ಚಂದ್ರನಲಿ, ಗರಿಗಳಲಿ ಹೆಳಲ ಭಾರವನ್ನು

ನದಿಯ ಹರಿತದಲ್ಲಿ ಹುಬ್ಬು ಮುರಿತವನು ಕಾಣಬೇಕು ಎಂದೆ

ಇಷ್ಟು ಕೂಡ ಸಾದೃಶ್ಯ ಕಾಣದೆ, ಚಂಡಿ, ನೊಂದೆ, ಬೆಂದೆ ।
 
॥ ೪೨
 
೧
 
ಅರೆಗಳಲ್ಲಿ ಕೆಂಗಾವಿಯಿಂದ ಹುಸಿ ಮುನಿಸಿನವಳ ಬರೆದು

ನಿನ್ನ ಮೆಲ್ಲಡಿಗೆ ಕೆಡಹಿಕೊಳಲು ಬರುತಿರಲು, ಮುಂದುವರಿದು
॥
ಕಣ್ಣು ತುಂಬಿ ಕಂಗೆಡಿಸಿ ಕಂಬನಿಯ ಹಳ್ಳ ಹರಿದಿತಲ್ಲ
s
ಚಿತ್ರದಲ್ಲಿ ಕೂಡುವದು ಕೂಡ ಆ ಇದಿಗೆ ಸೇರಲಿಲ್ಲ ॥
 
s ॥ ೪೩
 
೨
 
ಬಯಲಿನಲ್ಲಿ ತೋಳೆಳ್ದೆರೆದು ನಿನ್ನ ಬಿಗಿತಾಗಿ ಅಪ್ಪಿಕೊಂಡು

ಸಿಕ್ಕೆ ನೀನು ಹೇಗಾರೆ ಎಂದೆ, ನಾ ಕನಸುಗಳಲ್ಲಿ ಕಂಡು
॥
ಇದನ್ನು ನೋಡಿ ಮರುಮರುಗದಿರುವ ವನದೇವತೆಯರೆ ಅಲ್ಲಿ

ಮುತ್ತಿನಂಥ ಕಂಬನಿಯ ಸುರಿಸಿದರು ಚಿಗುರು ಚಿಗುರಿನಲ್ಲಿ
 
॥ ೪೪
 
೩
 
ನನೆಯು ಮುರಿದು, ಚಿಗುರೊಡೆದು, ಬಿರಿದಿರುವ ದೇವದಾರು ಮರವು
ಅಂಟು ಸುರಿದ ನರುಗಂಪ ಕುಡಿದ ಕುಳಿಗಾಳಿಗೇನು ಭರವು ! ॥
ಸುಗುಣಿ ನಿನ್ನ ಮೈ ಮುಟ್ಟಿ ಬಂದಿತೋ
ಎನೋ ಎಂದು ನಾನು
ಆ ಹಿಮಾದ್ರಿವಾತವನೆ ಇಲ್ಲಿ ಉಬ್ಬುಬ್ಬಿ
 
ನನೆಯು ಮುರಿದು, ಚಿಗುರೊಡೆದು, ಬಿರಿದಿರುವ ದೇವದಾರು ಮರವು
ಅಂಟು ಸುರಿದ ನರುಗಂಪ ಕುಡಿದ ಕುಳಿಗಾಳಿಗೇನು ಭರವು ! ।
ಏನೋ ಎಂದು ನಾನು
ತಬ್ಬುತಿಹನು ।
 
1
 
೨ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ
 
ಹೆನು ॥ ೪೪