This page has not been fully proofread.

೪೦
 
ಏನೊ ಹೇಳುವಾ ನೆವನ ಮಾಡಿ ತುಟಿ ತಂದು ಕಿವಿಯ ಬಳಿಗೆ
ನಿನ್ನ ಸಖಿಯರಿದಿರಲ್ಲೆ ಒರಗಿರುತ್ತಿದ್ದ ಗಳಿಗೆ ಗಳಿಗೆ
ಮಾತಿನಾಚೆ, ಕಣ್ಣಾಚೆ ನನ್ನವಳು, ಇಂದು ಬವಣಿಗೊಂಡೆ
ಹೇಳು ನಾನು ನಿನ್ನಿದಿರು ಬಯಲಿನಲ್ಲಿ ಹೀಗೆ ಕೂಗಿಕೊಂಡೆ ।
 
೪೧
 
ಬಳ್ಳಿಯಲಿ ಆ ಬಳುಕು ಮೈಯ್ಯು, ಹುಲ್ಲೆಯಲಿ ಬೆದುರುಗಣ್ಣು
ಮುಖದ ಛಾಯೆ ಚಂದ್ರನಲಿ, ಗರಿಗಳಲಿ ಹೆಳಲ ಭಾರವನ್ನು
ನದಿಯ ಹರಿತದಲ್ಲಿ ಹುಬ್ಬು ಮುರಿತವನು ಕಾಣಬೇಕು ಎಂದೆ
ಇಷ್ಟು ಕೂಡ ಸಾದೃಶ್ಯ ಕಾಣದೆ, ಚಂಡಿ, ನೊಂದೆ, ಬೆಂದೆ ।
 
೪೨
 
ಅರೆಗಳಲ್ಲಿ ಕೆಂಗಾವಿಯಿಂದ ಹುಸಿ ಮುನಿಸಿನವಳ ಬರೆದು
ನಿನ್ನ ಮೆಲ್ಲಡಿಗೆ ಕೆಡಹಿಕೊಳಲು ಬರುತಿರಲು, ಮುಂದುವರಿದು
ಕಣ್ಣು ತುಂಬಿ ಕಂಗೆಡಿಸಿ ಕಂಬನಿಯ ಹಳ್ಳ ಹರಿದಿತಲ್ಲ
ಚಿತ್ರದಲ್ಲಿ ಕೂಡುವದು ಕೂಡ ಆ ಇದಿಗೆ ಸೇರಲಿಲ್ಲ ॥
 
೪೩
 
ಬಯಲಿನಲ್ಲಿ ತೋಳೆರೆದು ನಿನ್ನ ಬಿಗಿತಾಗಿ ಅಪ್ಪಿಕೊಂಡು
ಸಿಕ್ಕೆ ನೀನು ಹೇಗಾರೆ ಎಂದೆ, ನಾ ಕನಸುಗಳಲ್ಲಿ ಕಂಡು
ಇದನ್ನು ನೋಡಿ ಮರುಮರುಗದಿರುವ ವನದೇವತೆಯರೆ ಅಲ್ಲಿ
ಮುತ್ತಿನಂಥ ಕಂಬನಿಯ ಸುರಿಸಿದರು ಚಿಗುರು ಚಿಗುರಿನಲ್ಲಿ
 
೪೪
 
ಸುಗುಣಿ ನಿನ್ನ ಮೈ ಮುಟ್ಟಿ ಬಂದಿತೋ
ಆ ಹಿಮಾದ್ರಿವಾತವನೆ ಇಲ್ಲಿ ಉಬ್ಬುಬ್ಬಿ
 
ನನೆಯು ಮುರಿದು, ಚಿಗುರೊಡೆದು, ಬಿರಿದಿರುವ ದೇವದಾರು ಮರವು
ಅಂಟು ಸುರಿದ ನರುಗಂಪ ಕುಡಿದ ಕುಳಿಗಾಳಿಗೇನು ಭರವು ! ।
ಏನೋ ಎಂದು ನಾನು
ತಬ್ಬುತಿಹನು ।
 
1
 
೨ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ