This page has been fully proofread once and needs a second look.

೨೯
 
ಅಗಲಿದಂತೆ ಕಟ್ಟಿತ್ತು ಮುಡಿಯು, ಬಿಚ್ಚಿತ್ತು ಹೆಳಲಮಾಲೆ

ಕೂಡಿದಂದು ಹಾಕೇನು ನಾನು, ಮುಡಿಸೇನು ಎಂದು ಬಾಲೆ

ಕಾದು ಇಹಳು, ಜಡೆಗಟ್ಟಿ ಗಲ್ಲಗಳನುಜ್ಜಿ ಅವುಗಳೊತ್ತೆ

ಸಮರುತಿಹಳು ಬೆಳೆದುಗುರಿನಿಂದೆ ಕೂದಲವ ಮತ್ತೆ ಮತ್ತೆ
 
೩೦
 

 
॥೨೯
 
ತೊಡಿಗೆ ತೊರೆದು ಹೆಣವಾಗಿ ಇಹಳೊ ನಾ ಹೇಳಲೇಕೆ ಬಣ್ಣ

ಹಾಸಿನಲ್ಲು ಮೈ ಹೊರಳುವಾಗಲೂ ನರಳುತಿಹಳೊ ಸಣ್ಣ

ನೀನು ಕೂಡ ಅದ ಕಂಡ ಕೂಡಲೇ ಹನಿಸಿ ಬಿಡುವಿ ಕಣ್ಣ

ಕರುಳುಯಿದ್ದ ಎದೆಗಾರರಾರಿದಕೆ ಕರಗದಿರುವರಣ್ಣ ?
 

 

 
ನನ್ನಳೊಲೆದ ಆ ನಿನ್ನ ಅತ್ತಿಗೆಯ ಚಿತ್ತವಿಷ್ಟು ನೊಂದು

ತರ್ಕಿಸುವೆನು ಮೊದಲಗಲಿ ನನ್ನ ಇರಬಹುದು ಹೀಗೆ ಎಂದು

'ನಾನೆ ಕಾಮ, ಲೋಕೈಕ ಪತಿಯು' ಎನುವಂತೆ ಸತಿಯ ಲೀಲೆ

ಬಣ್ಣಿಸಿದೆನು ವಾಚಾಳಿಯಂತೆಯೋ ? ಹೇಳು ಕಂಡ ಮೇಲೆ
 
॥ ೩೧
 
ಕುರುಳು ಜೋತು, ಕುಡಿಗಣ್ಣು ಮುಚ್ಚಿ ; ಮಂಕಾಗಿ ಕಾಡಿಗಿರದೇ

ಮಧುವ ಕುಡಿಯದೊಣಕಾದ ನಯನ ಮುರಿ ಹುಬ್ಬಿನಾಟ ಮರೆದೇ ॥

ಹಾರಿ ತನ್ನ ಎಡಗಣ್ಣು, ಬೆಚ್ಚೆ ಬರಿ ಬಾನ ತುಂಬೆ ನೀನೋ

ಸುಳಿಯೆ ಮೀನ ಚಲಕಮಲದಂತೆ ಆ ಕಣ್ಣು ಕಾಂಬವೇನೊ ॥
 

 

 
ಕೆಲಕೆ ಎಡಕೆ ಇನ್ನೂನು ಬಿದ್ದಿಹುದು-ಏನೊ ಕೆಟ್ಟ ಗಳಿಗೆ !

ನಡುವುಸುತ್ತಿನಾ ಮುತ್ತು ಮಾಲೆ ಸಿಕ್ಕನ್ನ ಉಗುರುಗಳಿಗೆ

ಕಂಡು ಅದನ್ನು ಹೊಂಬಾಳೆದಿಂಡುದೊಡೆ ಅದಿರೆ, ನಾನು ಬಳಿಗೆ

ಇಲ್ಲ, ಗಳಿಗೆ ಕಳೆಯುವಳು ನನೆಸಿ ಆ ನೀರೆ ನಿರಿಗೆಗಳಿಗೆ
 

 

 
ನೀನು ಹೋದ ಆ ಹೊತ್ತೆ ನಿದ್ದೆ ಚಿತ್ತೆತೈಸೆ ಅವಳ ನೋಡಾ

ಮೇಘರಾಜ, ದಯೆಮಾಡಿ ತಡೆಯೊ ಹುಸಿ ಗುಡುಗು ಹಾಕಬೇಡಾ

ಹೇಗೆಗೊ ಕನಸಿನಲಿ ಸೇರಿ ನನ್ನ ಮುಗಿಬಿದ್ದು ಕೊರಳ, ಹುಚ್ಚಿ

ಎದ್ದಾಳೊ ಬಾಲೆ ಬಿದ್ದಾಳೋಳೊ ಬೆದರಿ ಕೈ ಮಲಕು ಬಿಚ್ಚಿ ಬೆಚ್ಚಿ
೮ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ
 
M