Proofing

✦

This page has been fully proofread once and needs a second look.

೧೭
 
ಇಂತು ನಮ್ಮ ಮನೆ ಕಂಡುಕೊಳ್ಳು ನೀ ಬೇರೆ ಗುರುತೆ ಇದಕೆ

ಶಂಖ ಪದದ್ಮಗಳು ದ್ವಾರಪಾಲರೊಲು ಎಡಕೆ ಬಲಕೆ ಇದಕೆ
॥
ಅಲ್ಲಿ ಬಣ್ಣಗುಂದಿರುವ ಮನೆಯು ತೋರುವದು ನನ್ನ ಒಲವಾ

ಸೂರ್ಯನಿಲ್ಲದಿರೆ ಕಮಲವೆಂತು ತೋರೀತು ತನ್ನ ಚೆಲುವಾ
 
॥ ೧೮
 
೭
 
ಆನೆ ಮರಿಯವೊಲು ಮಾಟವಾಗಿ ಒಳ ಸೇರು ಅಲ್ಲಿ ಹೋಗಿ

ಮೊದಲು ಹೇಳಿದಾ ಕೃತಕಶೈಲವನ್ನೇರು ಅರಸನಾಗಿ
॥
ನಿನ್ನ ಮಿಂಚುಗಣ್ಣನ್ನು ಮಿಟುಕಿಸುತ ಮಿಂಚುಹುಳವ ಮಾಡು

ಆಗ ನಮ್ಮ ಮನೆಯಲ್ಲಿ ನಿನ್ನ ನೋಟವನು ಚೆಲ್ಲಿ ನೋಡು
 
॥ ೧೯
 
೮
 
ಬಳ್ಳಿ ಮೈಯು, ನನನೆಹಲ್ಲು, ಕೆಂಪು ತುಟಿ ಹಣ್ಣು ತೊಂಡೆಯಂತೆ

ಸಣ್ಣ ನಡುವು, ಚೆಲು ಹುಲ್ಲೆಗಣ್ಣು, ಕುಳಿ ನಾಭಿ ಸುಳಿಗಳಂತೆ
॥
ತುಂಬು ಎದೆಗೆ ನಸು ಬಾಗಿ, ಹರಹು ಹಿಮ್ಮೆಮೈಗೆ ಮಂದವಾಗಿ

ಎಲ್ಲ ಹೆಣ್ಣಿನೊಳೆ ಬ್ರಹ್ಮಕೃತಿಗೆ ಹೊಸ ಹೊಚ್ಚ ಚೊಚ್ಚಿಲಾಗಿ
 
೨೦
 
॥ ೧೯
 
ಹೆಚ್ಚು ಮಾತು ಇರದಚ್ಚ ಅವಳಳೆ ತಿಳಿ ನನ್ನ ಪ್ರಾಣವೆಂದು

ನನ್ನನಗಲಿ ಇಹಳೆಂತೊ ಇರುವವೊಲು ಚಕ್ರವಾಕಿಯೊಂದು
 
॥
ಕಾಲ ಕಳೆದ ಹಾಗೆಲ್ಲ ಕಾಣುವಾತುರವು ಆಳವಾಗಿ

ಇಹಳು ಬೇರೆ ಪದ್ಮಮಿನಿಯೊ ಏನೋ ಚಳಿಕುಳಿರ ಸೋಂಕು ತಾಗಿ ।
 
॥ ೨೧
 
೦
 
ಅತ್ತು ಅತ್ತು ಮತ್ತತ್ತು ಕೆದರಿಕೊಂಡಿಹುದು ಕಣ್ಣ ಪೊಗರು

ಬೆಚ್ಚನುಸಿರನುಂಡುಂಡು ಸೊಪ್ಪೆಯಾಗಿಹುದು ತುಟಿಯ ಚಿಗುರು ।
॥
ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಲುದ್ದ ಚಿಂತೆ

ಮೋಡ ಮುಸುಕಲಿರೆ ಮಂಕುಗವಿದ ಆ ದೀನ ಚಂದ್ರನಂತೆ ।
 
॥ ೨೧
 
ಅವಳು ಬೀಳುವಳೊ ನಿನ್ನ ಕಣ್ಣೆಗೆ ಆಚಾರದಲ್ಲಿ ತೊಡಗಿ

ಸೊರಗಿ ಕಡ್ಡಿಯಾದವನ ನನ್ನ ಚಿತ್ರವನೆ ಬರೆದ ಹುಡುಗಿ ॥

ಇಲ್ಲ ಕೇಳುತಿರಬಹುದು ಸಾಕುಸಾರಿಕೆಯ - "ಹೇಳೆ ಜೇನೇ
 

ಅವನ ಮುದ್ದು ನೀ, ನಿಮ್ಮ ಒಡೆಯರನು ಒಮ್ಮೆ ನೆನೆವೆಯೇನೇ ?"
೩೪ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ
 
॥ ೨೨