This page has not been fully proofread.

೧೭
 
ಇಂತು ನಮ್ಮ ಮನೆ ಕಂಡುಕೊಳ್ಳು ನೀ ಬೇರೆ ಗುರುತೆ ಇದಕೆ
ಶಂಖ ಪದಗಳು ದ್ವಾರಪಾಲರೊಲು ಎಡಕೆ ಬಲಕೆ ಇದಕೆ
ಅಲ್ಲಿ ಬಣ್ಣಗುಂದಿರುವ ಮನೆಯು ತೋರುವದು ನನ್ನ ಒಲವಾ
ಸೂರ್ಯನಿಲ್ಲದಿರೆ ಕಮಲವೆಂತು ತೋರೀತು ತನ್ನ ಚೆಲುವಾ
 
೧೮
 
ಆನೆ ಮರಿಯವೊಲು ಮಾಟವಾಗಿ ಒಳ ಸೇರು ಅಲ್ಲಿ ಹೋಗಿ
ಮೊದಲು ಹೇಳಿದಾ ಕೃತಕಶೈಲವನ್ನೇರು ಅರಸನಾಗಿ
ನಿನ್ನ ಮಿಂಚುಗಣ್ಣನ್ನು ಮಿಟುಕಿಸುತ ಮಿಂಚುಹುಳವ ಮಾಡು
ಆಗ ನಮ್ಮ ಮನೆಯಲ್ಲಿ ನಿನ್ನ ನೋಟವನು ಚೆಲ್ಲಿ ನೋಡು
 
೧೯
 
ಬಳ್ಳಿ ಮೈಯು, ನನಹಲ್ಲು, ಕೆಂಪು ತುಟಿ ಹಣ್ಣು ತೊಂಡೆಯಂತೆ
ಸಣ್ಣ ನಡುವು, ಚೆಲು ಹುಲ್ಲೆಗಣ್ಣು, ಕುಳಿ ನಾಭಿ ಸುಳಿಗಳಂತೆ
ತುಂಬು ಎದೆಗೆ ನಸು ಬಾಗಿ, ಹರಹು ಹಿಮ್ಮೆಗೆ ಮಂದವಾಗಿ
ಎಲ್ಲ ಹೆಣ್ಣಿನೊಳೆ ಬ್ರಹ್ಮಕೃತಿಗೆ ಹೊಸ ಹೊಚ್ಚ ಚೊಚ್ಚಿಲಾಗಿ
 
೨೦
 
ಹೆಚ್ಚು ಮಾತು ಇರದಚ್ಚ ಅವಳ ತಿಳಿ ನನ್ನ ಪ್ರಾಣವೆಂದು
ನನ್ನನಗಲಿ ಇಹಳೆಂತೊ ಇರುವವೊಲು ಚಕ್ರವಾಕಿಯೊಂದು
 
ಕಾಲ ಕಳೆದ ಹಾಗೆಲ್ಲ ಕಾಣುವಾತುರವು ಆಳವಾಗಿ
ಇಹಳು ಬೇರೆ ಪದ್ಮನಿಯೊ ಏನೋ ಚಳಿಕುಳಿರ ಸೋಂಕು ತಾಗಿ ।
 
೨೧
 
ಅತ್ತು ಅತ್ತು ಮತ್ತತ್ತು ಕೆದರಿಕೊಂಡಿಹುದು ಕಣ್ಣ ಪೊಗರು
ಬೆಚ್ಚನುಸಿರನುಂಡುಂಡು ಸೊಪ್ಪೆಯಾಗಿಹುದು ತುಟಿಯ ಚಿಗುರು ।
ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಲುದ್ದ ಚಿಂತೆ
ಮೋಡ ಮುಸುಕಲಿರೆ ಮಂಕುಗವಿದ ಆ ದೀನ ಚಂದ್ರನಂತೆ ।
 
ಅವಳು ಬೀಳುವ ನಿನ್ನ ಕಣ್ಣೆ ಆಚಾರದಲ್ಲಿ ತೊಡಗಿ
ಸೊರಗಿ ಕಡ್ಡಿಯಾದವನ ನನ್ನ ಚಿತ್ರವನೆ ಬರೆದ ಹುಡುಗಿ ॥
ಇಲ್ಲ ಕೇಳುತಿರಬಹುದು ಸಾಕುಸಾರಿಕೆಯ "ಹೇಳೆ ಜೇನೇ
 
ಅವನ ಮುದ್ದು ನೀ, ನಿಮ್ಮ ಒಡೆಯರನು ಒಮ್ಮೆ ನೆನೆವೆಯೇನೇ ?"
೩೪ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ