This page has been fully proofread once and needs a second look.

೧೩
 
ಪಚ್ಚೆಕಲ್ಲ ಮೆಟ್ಟಿಲುಗಳುಳ್ಳ ಹೊಕ್ಕರಣಿ ತುಂಬ ಅಗಲಾ

ಹೊನ್ನ ಕಮಲಗಳ ಕಾವು ಹೋಲುತಿದೆ ಹಸಿರು ನೀಲಿ ಮುಗಿಲಾ

ಹತ್ತಿರಕ್ಕೆ ಮಾನಸವು ಇರಲಿ, ನೀ ಬರಲಿ ಮೇಲೆ ಠಾವು

ಬಿಡದೆ ಹಂಸ ನಮ್ಮಲ್ಲಿಲೆ ಆಡುವವು ತೃಪ್ತವಾಗಿ ತಾವು
 

 
೩॥
 
ಮಾಟ-ಗುಡ್ಡ ಬಿಳಿನೀಲಿ ಮಣಿಯ ಕೋಡಾಗಿ ಅದರ ಬಳಿಗೆ

ಇಹುದು ಬೇಲಿ ಹೊಂಬಾಳೆಯಾಗಿ ಹವಣಾಗಿ ಸುತ್ತುವಳಿಗೆ

ಅದುವು ಮುದ್ದು ನನ್ನಾಕೆಗಣ್ಣ , ಅದರಂತೆ ನಿನ್ನ ಮೋಡಿ

ಅದರ ನೆನಪೆ ನನಗಾಗುತಿಹುದು ಮಿಂಚುಳ್ಳ ನಿನ್ನ ನೋಡಿ
 

 

 
ಸುತ್ತುಮುತ್ತು ಮದರಂಗಿ, ನಡುವೆ ಮಾಧವಿಯ ಬಳ್ಳಿ ಮಾಡ

ಅತ್ತ ಚೆಂದ ಕೇಸರವು, ಇತ್ತಲಿದೆ ಕೆಂಪಶೋಕ ನೋಡಾ ॥

ಒಂದು ಬೇಡುವದು ನಿನ್ನ ಸಖಿಯ ಎಡಗಾಲು ಸೋಂಕಲೆಂದು

ಮುಕ್ಕು ಮಧುವನುಗುಳಿದರೆ ಸಾಕು ಬಯಸುವದು ಮತ್ತಿನೊಂದು ॥
 

 

 
ಮರದ ನಡುವೆ ಬಿಳಿ ಹಾಸುಗಲ್ಲು ಬಂಗಾರ ಕೋಲು ನಡಕೆ

ಎಳೆ ಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ

ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
 

ಕೈ ತಟ್ಟಿ ಮಾಟ, ಬಳೆ ತಾಕಲಾಟ, ಥಕಥೆಥೈಯ ಥಾಟಿನಲ್ಲಿ
 
೩೨ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ
 
॥ ೧೬