This page has not been fully proofread.

೧೩
 
ಪಚ್ಚೆಕಲ್ಲ ಮೆಟ್ಟಿಲುಗಳುಳ್ಳ ಹೊಕ್ಕರಣಿ ತುಂಬ ಅಗಲಾ
ಹೊನ್ನ ಕಮಲಗಳ ಕಾವು ಹೋಲುತಿದೆ ಹಸಿರು ನೀಲಿ ಮುಗಿಲಾ
ಹತ್ತಿರಕ್ಕೆ ಮಾನಸವು ಇರಲಿ, ನೀ ಬರಲಿ ಮೇಲೆ ಠಾವು
ಬಿಡದೆ ಹಂಸ ನಮ್ಮಲ್ಲಿ ಆಡುವವು ತೃಪ್ತವಾಗಿ ತಾವು ।
 
೧೪
 
ಮಾಟ-ಗುಡ್ಡ ಬಿಳಿನೀಲಿ ಮಣಿಯ ಕೋಡಾಗಿ ಅದರ ಬಳಿಗೆ
ಇಹುದು ಬೇಲಿ ಹೊಂಬಾಳೆಯಾಗಿ ಹವಣಾಗಿ ಸುತ್ತುವಳಿಗೆ ।
ಅದುವು ಮುದ್ದು ನನ್ನಾಕೆಗಣ್ಣ , ಅದರಂತೆ ನಿನ್ನ ಮೋಡಿ
ಅದರ ನೆನಪೆ ನನಗಾಗುತಿಹುದು ಮಿಂಚುಳ್ಳ ನಿನ್ನ ನೋಡಿ ।
 
೧೫
 
ಸುತ್ತುಮುತ್ತು ಮದರಂಗಿ, ನಡುವೆ ಮಾಧವಿಯ ಬಳ್ಳಿ ಮಾಡ
ಅತ್ತ ಚೆಂದ ಕೇಸರವು, ಇತ್ತಲಿದೆ ಕೆಂಪಶೋಕ ನೋಡಾ ॥
ಒಂದು ಬೇಡುವದು ನಿನ್ನ ಸಖಿಯ ಎಡಗಾಲು ಸೋಂಕಲೆಂದು
ಮುಕ್ಕು ಮಧುವನುಗುಳಿದರೆ ಸಾಕು ಬಯಸುವದು ಮತ್ತಿನೊಂದು ॥
 
೧೬
 
ಮರದ ನಡುವೆ ಬಿಳಿ ಹಾಸುಗಲ್ಲು ಬಂಗಾರ ಕೋಲು ನಡಕೆ
ಎಳೆ ಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
 
ಕೈ ತಟ್ಟಿ ಮಾಟ, ಬಳೆ ತಾಕಲಾಟ, ಥಕಥೆಯ ಥಾಟಿನಲ್ಲಿ
 
೩೨ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ