This page has been fully proofread once and needs a second look.


 
ಹೊದ್ದ ಮೋಡ ಹೊರಾಪಾಗಿ, ಬಿದ್ದ ಬೆಳದಿಂಗಳಿಂದ ಕುಸುರಿ

ಚಿಕ್ಕಿ ಚುಕ್ಕಿ ಸುರಿದಂತೆ ಕಿಟಿಕಿ-ತೆರೆ ಚಂದ್ರಕಾಂತ ಒಸರಿ

ಪ್ರಿಯರ ತೆಕ್ಕೆ ತೋಳೊಳಗೆ ಉಸುರು ಬಿಡುತಿರಲು ಹೆಂಗಳೊರಗಿ
ಕೂಟದಾಟದಾಸರವ ತಣಿಸುವವು ತಾವೆ ಮರುಗಿ ಕರಗಿ
ಪ್ರಿಯರ ತಕ್ಕೆ ತೋಳೊಳಗೆ ಉಸುರು ಬಿಡುತಿರಲು ಹೆಂಗಳೂರ
 

 
॥ ೭
 
ತೀರದಿರುವ ತವನಿಧಿಯು ತುಂಬಿದಾ ಕಾಮಿ ಜನರು ಕೂಡಿ

ಅಮರ ಗಣಿಕೆಯರ ಸಂಗದಲ್ಲಿ ಸರಸಾಲಾಪ ಮಾಡಿ

ರಕ್ತಕಂಠಕಿನ್ನರರು ಧನದ ಯಶಗೀತ ಹಾಡೆ ಮೀರಿ

ಕಾಲ ಕಳೆಯುವರು ದಿನವು ಚೈತ್ರರಥವೆಂಬ ತೋಟ ಸೇರಿ
 
॥ ೮
 
ದುಡುಕು ನಡಿಗೆಯಲಿ ಅಲಕದಿಂದ ಮಂದಾರ ಹೂವು ಉದುರಿ

ಬೀದಿಯುದ್ದಕೂ ಚಿಗುರುತಿಗುರು, ಕಿವಿಕನಕ-ಕಮಲ ಬಿದಿರಿ

ನೂಲು ಹರಿದು ಎದೆಯುಜ್ಜಿ ಜರಿದು ಸರ ಮುತ್ತು ತೊಳಗತಾವ

ಮತ್ತ-ಕಾಮಿಗಳ ಇರುಳ ಹಾದಿಯನ್ನು ಬೆಳಗು ಬೆಳಗತಾವ
 
೧೦
 
॥ ೯
 
ಧನದ ಪತಿಯು ಜೊತೆಯಿವನು ಶಿವನು ಇಲ್ಲಿರುವನೆಂದು ಬಗೆದು

ಕಬ್ಬು-ತುಂಬಿ-ಹೂವುಗಳ ಬಿಲ್ಲು-ಹೆದೆ-ಬಾಣ ದೂರ ಒಗೆದು

ಕಾಮಿಗಳಿಗೆ ಗುರಿಯಿಟ್ಟನಂಗನಿಹನಿಲ್ಲಿ ಕುಡಿಯ ಕಣ್ಣೆ
ಗೆ
ಇಲ್ಲದಿದ್ದರೂರೀ ಹುಬ್ಬ-ಬಿಲ್ಲಿನಲಿ ಮುರುಕವೇಕೊ ಹೆಣ್ಣೆ ।
 
ಗೆ ॥ ೧೦
 
ರಂಗು ರಂಗಿನಾ ಸೀರೆ, ಕಣ್ಣ ತಿರುಪಾಟವಾಡೆ ಮಧುವು,

ಹೂವು ಹೂವು, ಹಲಚಿಗುರು, ಒಡವೆ ತೊಡವಾಗಬಲ್ಲ ಒದವು

ಅಡಿಯ ಕಡೆಯ ಕಾರಣೆಯ ಅರಗಿನಾ ಬಣ್ಣ, ಒಂದೆ ಎರಡೇ

ಹೆಣ್ಣಿನೆಲ್ಲ ಸಿಂಗರವನೀವುದಾ ಕಲ್ಪವೃಕ್ಷ ಬರಡೇ ?
 

 

 
ಅಲ್ಲಿ ನಮ್ಮ ಮನೆ, ಯಕ್ಷಪತಿಯ ಮನೆಯುತ್ತರಕ್ಕೆ ಇಹುದು

ಇಂದ್ರಚಾಪ ತೋರಣದಿ ಮೆರೆದು ದೂರಿಂದ ಕಾಣಬಹುದು
 

ಹತ್ತಿರಕ್ಕೆ ನನ್ನಾಕೆ ನೀರನುಣಿಸಿರುವ ಕಂದನಾಗಿ

ಕೈ ಎತ್ತರಾದ ಮಂದಾರವೊಂದು ಇದೆ ಗೊಂಚಿಲಾಗಿ ಬಾಗಿ
 
೩೦ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ
 
॥ ೧೨