This page has not been fully proofread.


 
ಹೊದ್ದ ಮೋಡ ಹೊರಾಪಾಗಿ, ಬಿದ್ದ ಬೆಳದಿಂಗಳಿಂದ ಕುಸುರಿ
ಚಿಕ್ಕಿ ಚುಕ್ಕಿ ಸುರಿದಂತೆ ಕಿಟಿಕಿ-ತೆರೆ ಚಂದ್ರಕಾಂತ ಒಸರಿ
ಕೂಟದಾಟದಾಸರವ ತಣಿಸುವವು ತಾವೆ ಮರುಗಿ ಕರಗಿ ।
ಪ್ರಿಯರ ತಕ್ಕೆ ತೋಳೊಳಗೆ ಉಸುರು ಬಿಡುತಿರಲು ಹೆಂಗಳೂರ
 

 
ತೀರದಿರುವ ತವನಿಧಿಯು ತುಂಬಿದಾ ಕಾಮಿ ಜನರು ಕೂಡಿ
ಅಮರ ಗಣಿಕೆಯರ ಸಂಗದಲ್ಲಿ ಸರಸಾಲಾಪ ಮಾಡಿ
ರಕ್ತಕಂಠಕಿನ್ನರರು ಧನದ ಯಶಗೀತ ಹಾಡೆ ಮೀರಿ
ಕಾಲ ಕಳೆಯುವರು ದಿನವು ಚೈತ್ರರಥವೆಂಬ ತೋಟ ಸೇರಿ
 
ದುಡುಕು ನಡಿಗೆಯಲಿ ಅಲಕದಿಂದ ಮಂದಾರ ಹೂವು ಉದುರಿ
ಬೀದಿಯುದ್ದಕೂ ಚಿಗುರುತಿಗುರು, ಕಿವಿಕನಕ-ಕಮಲ ಬಿದಿರಿ ।
ನೂಲು ಹರಿದು ಎದೆಯುಜ್ಜಿ ಜರಿದು ಸರ ಮುತ್ತು ತೊಳಗತಾವ
ಮತ್ತ-ಕಾಮಿಗಳ ಇರುಳ ಹಾದಿಯನ್ನು ಬೆಳಗು ಬೆಳಗತಾವ
 
೧೦
 
ಧನದ ಪತಿಯು ಜೊತೆಯಿವನು ಶಿವನು ಇಲ್ಲಿರುವನೆಂದು ಬಗೆದು
ಕಬ್ಬು-ತುಂಬಿ-ಹೂವುಗಳ ಬಿಲ್ಲು-ಹೆದೆ-ಬಾಣ ದೂರ ಒಗೆದು ।
ಕಾಮಿಗಳಿಗೆ ಗುರಿಯಿಟ್ಟನಂಗನಿಹನಿಲ್ಲಿ ಕುಡಿಯ ಕಣ್ಣೆ
ಇಲ್ಲದಿದ್ದರೂ ಹುಬ್ಬ-ಬಿಲ್ಲಿನಲಿ ಮುರುಕವೇಕೊ ಹೆಣ್ಣೆ ।
 
ರಂಗು ರಂಗಿನಾ ಸೀರೆ, ಕಣ್ಣ ತಿರುಪಾಟವಾಡೆ ಮಧುವು,
ಹೂವು ಹೂವು, ಹಲಚಿಗುರು, ಒಡವೆ ತೊಡವಾಗಬಲ್ಲ ಒದವು
ಅಡಿಯ ಕಡೆಯ ಕಾರಣೆಯ ಅರಗಿನಾ ಬಣ್ಣ, ಒಂದೆ ಎರಡೇ
ಹೆಣ್ಣಿನೆಲ್ಲ ಸಿಂಗರವನೀವುದಾ ಕಲ್ಪವೃಕ್ಷ ಬರಡೇ ? ।
 
೧೨
 
ಅಲ್ಲಿ ನಮ್ಮ ಮನೆ, ಯಕ್ಷಪತಿಯ ಮನೆಯುತ್ತರಕ್ಕೆ ಇಹುದು
ಇಂದ್ರಚಾಪ ತೋರಣದಿ ಮೆರೆದು ದೂರಿಂದ ಕಾಣಬಹುದು ।
 
ಹತ್ತಿರಕ್ಕೆ ನನ್ನಾಕೆ ನೀರನುಣಿಸಿರುವ ಕಂದನಾಗಿ
ಕೈ ಎತ್ತರಾದ ಮಂದಾರವೊಂದು ಇದೆ ಗೊಂಚಿಲಾಗಿ ಬಾಗಿ
 
೩೦ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ