Proofing

✦

This page has not been fully proofread.

೧
 

 
ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು

ಶಪಿತ ವರುಷವನು ಕಳೆಯಲಾಗದೇ ಮಹಿಮೆ ಕಳೆದುಕೊಂಡು
॥
ಜನಕತನಯಯೆ ಮಿಂದುದಕಗಳಲಿ ತಣ್ನೆಳಲ ಅಂಗಳಲ್ಲಿ

ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ
 
ด
 
॥ ೧
 
ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು

ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
॥
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ

ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ ।
 
೩
 
॥ ೨
 
ಮೋಡ ನೋಡಿ ಮನಸಾಗಿ ನಿಂತನೋ ಹೇಗೋಗೊ ಏನೋನೊ ಕಂಡು

ರಾಜರಾಜನನುಚರನು ಇದ್ದ ಕಣ್ಣೀರ ನುಂಗಿಕೊಂಡು
 

ಮೋಡ ಕಂಡೊಡನೆ ಬೇರೆ ಬಗೆಯಹುದು ಸುಖಿಗು ಎಂತೋತೊ ಏಕೊ

ಕೊರಳ-ಗೆಳತಿ ದೂರುಳಿದ ಮೇಲೆ ಆ ಗತಿಯ ಹೇಳಲೇಕೋ ॥
 
೩
 
ಬಂತು ಶ್ರಾವಣಾ, ಎಂತು ಬದುಕುವಳೋ ಮಡದಿ ಜೀವ ಉಳಿಸಿ

ಮೋಡದೊಡನೆ ತನ್ನೊಳಿತಿನೊಸಗೆಯನು ಅಂತೆ ಕಳಿಸಲೆಳಸಿ
॥
ಬೆಟ್ಟ-ಮಲ್ಲಿಗೆಯ ಹೊಚ್ಚ ಹೂವಿನೊಡ ಕಾಲನೀರ ನೀಡಿ
 

ಇದಿರುಗೊಂಡು ಬರಮಾಡಿಕೊಂಡ ಒಲಿದೊಲಿವ ಮಾತನಾಡಿ ।
 
೫
 
॥ ೪
 
ಗಾಳಿ-ನೀರು-ಉಗಿ-ಬೆಂಕಿಗೂಡಿ ಆಗಿರುವ ಮೇಘವೆತ್ತ

ಎತ್ತ ಮಾತುಗಳು ? ಮೋಡ ಜೀವವೇ ? ಏನೋ ಎತ್ತೋತೊ ಚಿತ್ರ ।
ತ ॥
ಭೇದವೆಣಿಸದೆಯೆ ಕಂಡ ಮೋಡವನೆ ಬೇಡಿಕೊಂಡ ತಾನು

ಜಡವೊ ಚೇತನವೊ ಬಯಕೆ ಮರುಳರಿಗೆ ಯಾವ ವಸ್ತುವೇನು ? ।
 
॥ ೫
 
ಪುಷ್ಕರಾದಿ ಜಗ ಬಲ್ಲ ವಂಶದವನಲ್ಲೆ, ಬಲ್ಲೆ ನಾನು

ಕಾಮರೂಪಿಯೇ ಪ್ರಕೃತಿಪುರಷನೋ
 
ಇಂದ್ರನಲ್ಲಿ ನೀನು ।
॥
ದೈವ-ಬಂಧು ನೀ ಬೇಡೆ ಕೆಡುಕರಲಿ ; ಬಯಕೆಗೂಡಿಯೇನು ?

ಲೇಸು ಒಳ್ಳಳ್ಯವರ ಬೇಡಿಕೊಂಬುದೇ ವ್ಯರ್ಥವಾದರೂನು ।
 
೧೨ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂ
 
॥ ೬