Proofing

✦

This page has been fully proofread once and needs a second look.

೧
 
ಮಿಂಚನುಳ್ಳ ಎಳೆವೆಂಡಿರುಳ್ಳ, ಮಳೆಬಿಲ್ಲ ಬಣ್ಣ ತಾಳಿ,

ಹಾಡಿಗಾಗಿ ಗುಡುಗುಡುಗಿದಂತೆ ಮದ್ದಳೆಯ ಸೊಲ್ಲ ಹೇಳಿ ।
॥
ಮುಗಿಲ ಮುಟ್ಟ ಕರುಮಾಡ ಮುತ್ತು ರತುನಗಳ ನೀರು ತುಂಬಿ

ಇಹವು ಇಂಥ ಮಹಮನೆಗಳಲ್ಲಿ ಅವು ನಿನಗೆ ಸಾಟಿ ಎಂಬಿ
 
೨
 
1
 
॥ ೧
 
ಮಾಟ ತಾವರೆಯು ಕೈಗೆ, ಕುರುಳಿನಲಿ ಬಾಲಕುಂದ ಮಾಲೆ,

ಲೋಧ್ರ ಪುಷ್ಪಗಳ ಸೂಸು ಹುಡಿಯು ಚೆಲುವಾದ ಮೊಗದ ಮೇಲೆ
॥
ಚೆಂದ ಕುರುವಕವು ಹೇಹೆಳಲಿನಲ್ಲಿ, ಸಿರಸಲವು ಕಿವಿಯ ಬಳಿಗೆ

ಬೈತಲಲ್ಲಿ ಕಡವಾಲ ಹೂವು ಅಲ್ಲಿರುವ ಹೆಣ್ಣುಗಳಿಗೆ ।
 
೩
 
॥ ೨
 
ಯಕ್ಷರಲ್ಲಿ, ಬಿಳಿ ಹರಳಿನಿಂದ ರಚಿಸಿರುವ ಸೌಧಗಳಲಿ,

ಚುಕ್ಕೆ ನೆರಳೆ ಅರಳಾಗಿ ಹಾಸೆ, ನಲುವೆಣ್ಣ ತೋಳುಗಳಲಿ ।
॥
ನಿನ್ನ ಗುಡುಗಿನೊಡಗೂಡಿ ನುಡಿಸುವರು ವಾದ್ಯವಾದ್ಯವಾಗಿ

ಬಯಕೆ-ತಾಳೆ-ಹಾಲನ್ನು ಕುಡಿವರೋ ಕಾಮಕೇಳಿಗಾಗಿ ।
 
೪
 
॥ ೩
 
ನಂದನಂಗಳಲಿ ಗಂಗೆ ಮಿಂದ ತಂಗಾಳಿ ಹಾಯುವಲ್ಲಿ

ಅಲ್ಲಿಲೆ ತೀರದಲ್ಲಿ ಬಿಸಿಲ ಮರೆಸಿ ಮಂದಾರ ಛಾಯೆಯಲ್ಲಿ
॥
ಹೊನ್ನ ಮಳಲು ಮಣಿ ತೂರಿ ಆಡುವರು ಹುಟ್ಟುಜವ್ವನಿಯರು

ಅಮರರಿಂದ ಪ್ರಾರ್ಥಿತರು ಆಗುವರು ಅಮರ ಕನ್ನಿಕೆಯರು ।
 
॥ ೪
 
ಉಟ್ಟ ರೇಸಿಮೆಯ ನೀರಿ ಸೆಳೆಯಯೆ ಆತುರದ ಕರಗಳಿಂದಾ

ಮತ್ತೆ ಜರೆಯಲಿರೆ ಮೊದಲೆ ಸಡಲಿದಾ ಕಟಿಯ ನೀವಿಬಂಧ ॥

ತೊಂಡೆ ತುಟಿಯ ಮರುಳೆಯರು ಪ್ರಿಯರಿದಿರು ನಾಚಿ ಬಳುಕಿ ಬಗ್ಗಿ

ರತ್ನದೀಪ ನಂದಿಸಲು ಹವಣಿಪರು ಸುಳ್ಳೆ ಹುಡಿಯನುಗ್ಗಿ ।
 
॥ ೫
 
ಬಿಡದೆ ಬೀಸುವಾ ಗಾಳಿಯೊಡನೆ ಮನೆಯೇಳು ನೆಲೆಯನೇರಿ

ಅಲ್ಲಿ ಗೊಂಬೆಗಳನಂದಗೆಡಿಸಿ ಹನಿಯಿಂದ, ಹೆದರಿ ಜಾರಿ ।
॥
ತಪ್ಪಿತಸ್ಥರೆನೆ ಕಂಡಿಯಿಂದ ಹೊರಬೀಳತಾವ ನೂಗಿ

ಮರಳಿ ಮೋಡ ತೊಟ್ಟಿಕ್ಕತಾವ ಹರಿ ಹಿಂಜು ಮಂಜು ಆಗಿ
೨೮ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇ
 
॥ ೬